ಬಿ.ಸಿ.ಸಿ.ಐ. ಅಧ್ಯಕ್ಷರಾಗಿದ ಕೆಲವೇ ದಿನದಲ್ಲಿ ಅದ್ಭುತ ನಿರ್ಧಾರ ತೆಗೆದುಕೊಂಡ ಗಂಗೂಲಿ; ದುಬಾರಿ ಐಪಿಎಲ್ ಉದ್ಘಾಟನೆ ಮಾಡುವ ಬದಲು ಕೋಟಿ ಕೋಟಿ ಹಣವನ್ನು ಸೇನೆಗೆ ನೀಡಲು ನಿರ್ಧಾರ!!

0
153

ಐಪಿಎಲ್ ಸೀಸನ್ ಶುರುವಾಗಲಿದ್ದು, ಈಗಾಗಲೇ ಬಿಸಿಸಿಐ ಹೊಸ ಹೊಸ ನಿಯಮಗಳನ್ನು ತಂದು ಭಾರಿ ಮೆಚ್ಚುಗೆಗೆ ಪಡೆಯುತ್ತಿದೆ. ಇದೆಲ್ಲದಕ್ಕೂ ನೂತನವಾಗಿ ಆಯ್ಕೆಯಾದ ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಪ್ರಯೋಜನ ವಿಚಾರಗಳ ಜಾರಿಗೆ ಮುಂದಾಗಿದ್ದು, ಓಪನಿಂಗ್ ಸೆರೆಮನಿ ನಡೆಸದಿರಲು ತೀರ್ಮಾನಿಸಿ ಈ ವೇಳೆ ವ್ಯರ್ಥವಾಗುವ ಹಣವನ್ನು ಉಳಿಸಿ ಸೇನೆಗೆ ಕೊಡಲು ಗಂಗೂಲಿ ನಿರ್ಧರಿಸಿದ್ದಾರೆ.

Also read: ಸ್ವಂತ ಮನೆಯ ಕನಸು ಕಾಣುವ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್.!

ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು?

ಹೌದು ಬಿಬಿಸಿಐ ಅಧ್ಯಕ್ಷ ಗಂಗೂಲಿ ಈ ಬಾರಿಯ ಐಪಿಎಲ್​ನಲ್ಲಿ ಹೊಸ ನಿಯಮಕ್ಕೆ ಮುಂದಾಗಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ಸುಮ್ಮನೆ ಖರ್ಚಾಗ್ತಿದೆ ಎಂದು ಚಿಂತನೆ ನಡೆಸಿ ಇದೀಗ ಆ ಕಾರ್ಯಕ್ರಮವನ್ನು ರದ್ದುಪಡಿಸಲು ನಿರ್ಧರಿಸಿದೆಯಂತೆ. ಸಾಮಾನ್ಯವಾಗಿ ಓಪನಿಂಗ್ ಸೆರೆಮನಿಗೆ ಬಾಲಿವುಡ್ ತಾರೆಯರು, ಗಾಯಕರು, ನೃತ್ಯ ಪಟುಗಳು ಹೀಗೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಹಾಜರಿರುತ್ತಾರೆ. ಇವರಿಗೆ ಕೋಟಿಗಟ್ಟಲೆ ಹಣ ನೀಡಬೇಕಾಗುತ್ತದೆ. ಇವೆಲ್ಲ ಉದ್ದೇಶದಿಂದ ಹೆಚ್ಚು ಹಣ ಖರ್ಚು ಮಾಡುವ ಬದಲು ಉಳಿತಾಯದ ಉದ್ದೇಶದ ಜೊತೆಗೆ ಕ್ರಿಕೆಟ್ ಅಭಿಮಾನಿಗಳು ಕೂಡ ಇದಕ್ಕೆ ಜಾಸ್ತಿ ಆಸಕ್ತಿ ತೋರಿಸದ ಹಿನ್ನಲೆ ಉದ್ಘಾಟನಾ ಸಮಾರಂಭ ರದ್ದು ಮಾಡಲು
ನಿರ್ಧಾರ ಮಾಡಿದೆ.

ಈ ನಡೆದ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಸುಮಾರು 30 ಕೋಟಿಯಷ್ಟು ಖರ್ಚಾಗುತ್ತಿತ್ತು. ಈ ಹಣವನ್ನು ಉಳಿತಾಯ ಮಾಡುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2020ರ ಐಪಿಎಲ್​ನ ಈ ಹಣದಲ್ಲಿ 11 ಕೋಟಿಯನ್ನು ಇಂಡಿಯನ್ ಆರ್ಮಿಗೆ ಮತ್ತು 7 ಕೋಟಿಯನ್ನು ಸಿಆರ್ಪಿಎಫ್​ಗೆ ಹಾಗೂ ನೌಕಾ ಮತ್ತು ವಾಯು ಸೇನೆಗೆ ತಲಾ ಒಂದು ಕೋಟಿ ಕೊಡಲು ಬಿಸಿಸಿಐ ನಿರ್ಧಾರಮಾಡಿದೆ ಎನ್ನಲಾಗಿದೆ. ಈ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಆಡಳಿತ ಅಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವುದರಿಂದ ಸುಮ್ಮನೆ ದುಡ್ಡು ವ್ಯರ್ಥವಾಗುತ್ತಿದೆ. ಯಾವ ಕ್ರೀಡಾಭಿಮಾನಿಯು ಸಹ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಿಲ್ಲ. ಇದಕ್ಕೆ ಸುಮ್ಮನೇ ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡುವ ಬದಲಿಗೆ ಈ ಹಣವನ್ನು ಸಮಾಜಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ಉಪಯೋಗಿಸಬಹುದು. ಆದ್ದರಿಂದ ಈ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಬಾರದು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

Also read: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.!

ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ?

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ ಈ ಭಾರಿ ಐಪಿಎಲ್ ವಿಭಿನ್ನವಾಗಿ ನಡೆಯುವುದರಲ್ಲಿ ಅನುಮಾನವಿಲ್ಲ ಅನಿಸುತ್ತೆ.