ಮಕ್ಕಳಿಗೆ ಆಟವಾಡಲು ಪಾತ್ರೆಗಳನ್ನು ಕೊಡುವ ಮುನ್ನ ಎಚ್ಚರ.. ಇಲ್ಲಿದೆ ನೋಡಿ ಪ್ರತಿ ಪೋಷಕರು ಕಲಿಯಬೇಕಾದ ಪಾಠ

0
1371

Kannada News | Karnataka News

ಮಕ್ಕಳು ಹಟ ಮಾಡುತ್ತಾರೆ ಅಂತ ಮನೆಯಲ್ಲಿ ಅಮ್ಮಂದಿರು ಪಾತ್ರೆ ಅದು ಇದು ಅಂತ ಕೈಗೆ ಕೊಟ್ಟು ಕೂರಿಸುವುದು ಸಾಮಾನ್ಯ.. ಆದರೆ ಇಲ್ಲಿ ನೋಡಿ ಮಗುವೊಂದು ಆಟವಾಡುತ್ತಿದ್ದಾಗ ಕುಕ್ಕರ್ ನಲ್ಲಿ ತಲೆಯನ್ನು ಸಿಲುಕಿಸಿಕೊಂಡ ಘಟನೆಯೊಂದು ಸೂರತ್ ನಲ್ಲಿ ನಡೆದಿದೆ..

ಗುಜರಾತ್ ನ ಸೂರತ್ ನಲ್ಲಿರುವ ಪಂದೆಸಾರದಲ್ಲಿ ಎರೆಡು ವರ್ಷದ ಪರಿ ಎಂಬ ಮಗುವೆ ಕುಕ್ಕರ್ ನಲ್ಲಿ ತಲೆಯನ್ನು ಸಿಲುಕಿಸಿಕೊಂಡು 12 ಘಂಟೆಗಳ ಕಾಲ ನೋವನ್ನು ಅನುಭವಿಸಿದೆ..

ಆಟವಾಡುತ್ತಿದ್ದಾಗ ತಲೆಯನ್ನು ಸಿಲುಕಿಸಿಕೊಂಡು ಆಳುತ್ತಿದ್ದ ಮಗುವನ್ನು ನೋಡಿದ ತಂದೆ ಕುಕ್ಕರ್ ನಿಂದ ತಲೆಯನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ.. ಆದರೆ ಸಾಧ್ಯವಾಗದ ಕಾರಣ ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದಾರೆ ಅಲ್ಲಿಯೂ ಕೂಡ ಮಗುವಿನ ತಲೆಯನ್ನು ಕುಕ್ಕರ್ ನಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ..

ನಂತರ ಇದಕ್ಕೆಲ್ಲಾ ಕಮ್ಮಾರರೆ ಸರಿ ಎಂದು ಡಾಕ್ಟರ್ ಕೊಟ್ಟ ಸಲಹೆ ಮೇರೆಗೆ ಕಮ್ಮಾರರ ಬಳಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.. 12 ಘಂಟೆಯ ಬಳಿಕ ಕುಕ್ಕರ್ ಅನ್ನು ಕಟ್ ಮಾಡುವ ಮೂಲಕ ಮಗುವಿನ ತಲೆಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ..

ಪೋಷಕರು ಇದರಿಂದ ದೊಡ್ಡ ಪಾಠ ಕಲಿಯಬೇಕಿದೆ.. ಮಕ್ಕಳು ಆಡಿಕೊಳ್ಳುತ್ತಿದ್ದಾರೆ ಎಂದು ಸ್ವಲ್ಪ ಬೇಜವಬ್ದಾರಿ ತೋರಿಸಿದರೂ ಕೂಡ ಅನಾಹುತಗಳೇ ಸಂಭವಿಸಿಬಿಡುತ್ತವೆ..

Also Read: ಅಷ್ಟಿಲ್ಲದೆ ಹೇಳ್ತಾರಾ ದಿನಕ್ಕೊಂದು ಸೇಬು ನಿಮ್ಮನ್ನು ವೈದ್ಯರಿಂದ ದೂರ ಇಡಬಲ್ಲದು ಅಂತಾ?