ಪಾಲಕರೆ ಎಚ್ಚರ; ವಿದೇಶದಿಂದ ಲೂಸಿಯಾ ಮಾತ್ರೆಗಳು ನಿಮ್ಮ ಮಕ್ಕಳ ಕೈ ಸೇರುತ್ತಿವೆ; ಟೆಕ್ಕಿ ಮತ್ತು ಸ್ಟುಡೆಂಟ್​​ಗಳೇ ಇವರ ಟಾರ್ಗೆಟ್..

0
799

ರಾಜ್ಯದಲ್ಲಿ ಮಾದಕ ವಸ್ತುಗಳಾದ, ಗಾಂಜಾ, ಡ್ರಗ್ಸ್, ಸೇರಿದಂತೆ ಹಲವು ನಶೆ ಕೂಡುವ ವಸ್ತುಗಳಿಗೆ ಒಳಗಾದ ಯುವಕರ-ಯುವತಿರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇಂತಹ ಚಟಗಳಿಗೆ ಹೆಚ್ಚಾಗಿ ಕಾಲೇಜ್ ವಿದ್ಯಾರ್ಥಿಗಳು ಮತ್ತು ಟೆಕಿಗಳು ಬಲಿಯಾಗುತ್ತಿದ್ದು, ಮಾರಾಟಗಾರರು ಇವರನ್ನೇ ಟಾರ್ಗೆಟ್ ಮಾಡಿ ಸಪ್ಲಾಯ್ ಮಾಡುತ್ತಿದ್ದಾರೆ. ಇದು ಬಹಳ ದಿನಗಳಿಂದ ನಡೆಯುತ್ತಿರುವ ದಂದೆಯಾಗಿದ್ದು, ಈಗ ಇದೆ ಸಾಲಿನಲ್ಲಿ ಬರುವ ಬಯಾನಕ ವಸ್ತು ಎಂದು ಕರೆಯಿವ ಲೂಸಿಯಾ ಮಾತ್ರೆಗಳು ಬೆಂಗಳೂರಿಗೆ ಬರುತ್ತಿವೆ ಎನ್ನುವ ಆಘಾತಕರ ಸುದ್ದಿ ಹರಡುತ್ತಿದ್ದು, ಮತ್ತೆ ಬೆಂಗಳೂರನ್ನು ನಶೆಯಲ್ಲಿ ಮುಳುಗಿಸಲು ಸಜ್ಜಾಗಿವೆ.

Also read: ಬಿಟ್ಟೂಬಿಡದೆ ತಲೆನೋವು ಕಾಡುತ್ತಿದೆಯೇ? ಹಾಗಾದ್ರೆ ಕೂಡಲೇ ಎಚ್ಚರವಹಿಸಿ, ಇದರಿಂದಲೇ ಮಿದುಳು ಕ್ಯಾನ್ಸರ್ ಕೂಡ ಬರಬಹುದು..

ಹೌದು ಕನ್ನಡ ಸಿನಿಮಾ ಲೂಸಿಯಾದಲ್ಲಿ ತೋರಿಸಿದ ಟ್ಯಾಬ್ಲೆಟ್-ಗಳು ಈಗಾಗಲೇ ಬೆಂಗಳೂರಿನ ಜನರಿಗೆ ಸಿಗುತ್ತಿವೆ. ಇದು ಎಲ್ಲ ಮಾದಕ ವಸ್ತುಗಳಿಗಿಂತ ಹೆಚ್ಚು ಅಪಾಯಕರವಾಗಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಈ ಮಾತ್ರೆಯನ್ನು ತೆಗೆದುಕೊಂಡರೆ ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ
ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ. ಇದೀಗ ನಗರದಲ್ಲಿ ಈ ಮಾತ್ರೆಗಳ ಲಭ್ಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಲೂಸಿಯಾ ಅಲಿಯಾಸ್ ಮೆಥಾಂಪ್ಟಮೈನ್ ಮಾತ್ರೆ ಮಾರಾಟದ ಆರೋಪದ ಮೇರೆಗೆ ಈ ಮೂಲಕ ಲೂಸಿಯಾ(ಮೆಥಾಂಪ್ಟಮೈನ್) ಟ್ಯಾಬ್ಲೆಟ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ನಗರದಲ್ಲಿರುವ ಪಶ್ಚಿಮ ಬಂಗಾಳ ಮೂಲದವರೇ ಈತನ ಟಾರ್ಗೆಟ್ ಆಗಿದ್ದು, ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಜಾಲದ ಬೇರುಗಳ ಬೆನ್ನತ್ತಿದ್ದಾರೆ. ಆದರೆ ಗುಪ್ತವಾಗಿ ನಡೆಯುವ ಈ ವ್ಯವಹಾರಕ್ಕೆ ವಿದ್ಯಾರ್ಥಿಗಳು ಬಲಿಯಾಗುವುದನ್ನು ಕಂಡು ಪಾಲಕರು ಆತಂಕದಲ್ಲಿದ್ದಾರೆ.

Also read: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ಎಚ್ಚರ; ಹಾಲಿ ಇರುವ 200 ರು. ದಂಡದ ಬದಲಾಗಿ 2000 ರು. ದಂಡ ಕಟ್ಟಬೇಕಾಗುತ್ತೆ..

ವ್ಯಸನ ಪತ್ತೆ ಹೇಗೆ?:

ನಿಮ್ಹಾನ್ಸ್‌ ನಿರ್ದೇಶಕ ಪ್ರೊ.ಬಿ.ಎನ್‌.ಗಂಗಾಧರ್‌ ಅವರ ಪ್ರಕಾರ, ಮಾದಕ ದ್ರವ್ಯ ಒಂದು ರೀತಿ ‘ಸ್ಲೋ ಪಾಯಿಸನ್‌’ ಇದ್ದಂತೆ. ಮಾದಕ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಯು ಸದಾ ಮನೆಯ ಸದಸ್ಯರಿಂದ ದೂರವಿದ್ದು ಕೊಠಡಿಯಲ್ಲಿ ಏಕಾಂತವಾಗಿರಲು ಬಯಸುತ್ತಾನೆ. ಜತೆಗೆ ಸದಾ ತುಂಬು ತೋಳಿನ ಉಡುಪು ಮಾತ್ರ ಧರಿಸಲು ಯತ್ನಿಸುತ್ತಾನೆ. ಮನೆಯಲ್ಲಿ ವ್ಯಕ್ತಿ ವಾಸವಿರುವ ಕೊಠಡಿಯ ಅಲ್ಮೇರಾ ಹಾಗೂ ಕೊಠಡಿಯ ಬಾಗಿಲುಗಳು ಸದಾ ಬಿಗಿಯಾಗಿ ಮುಚ್ಚಿದ ಸ್ಥಿತಿಯಲ್ಲೇ ಕಂಡುಬರುತ್ತವೆ. ವ್ಯಸನಿಯನ್ನು ಹುಡುಕಿಕೊಂಡು ಯಾವ ಸ್ನೇಹಿತರೂ ಮನೆಗೆ ಬರುವುದಿಲ್ಲ. ಕಾರಣ ವ್ಯಸನಿಯು ಹೊರಗಡೆ ಚಟವಿರುವವರೊಂದಿಗೆ ಮಾತ್ರ ಬೆರೆಯುತ್ತಿರುತ್ತಾನೆ.

Also read: ಆನ್ಲೈನ್- ನಲ್ಲಿ ಬ್ಯುಸಿನೆಸ್ ನಂಬಿ ಹಣ ಹೂಡುವ ಮುನ್ನ ಎಚ್ಚರ; 1000 ಕೋಟಿ ಹಗರಣ ಮಾಡಿದ eBiz.com ಎನ್ನುವ ಕಂಪನಿ..

ಈ ವ್ಯಸನದಲ್ಲಿರುವ ವ್ಯಕ್ತಿ ಕಡಿಮೆ ಸ್ನೇಹಿತರನ್ನು ಮಾತ್ರ ಹೊಂದಿರುತ್ತಾನೆ. ಡ್ರಗ್ಸ್‌ ಸಿಗದಿದ್ದಾಗ ತೀರಾ ಸಿಟ್ಟಿನ ವರ್ತನೆ ತೋರುತ್ತಾನೆ. ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಎಚ್ಚರಿಕೆ ವಹಿಸಿ ಆಪ್ತ ಸಮಾಲೋಚನಾ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂದು ಮನೋವೈದ್ಯರು ಹೇಳುತ್ತಾರೆ. ಅದರಂತೆ ವಿದ್ಯಾರ್ಥಿಗಳ ಮೇಲೆ ಪೋಷಕರು ಸಂಪೂರ್ಣ ನಿಗಾ ವಹಿಸಿರಬೇಕು. ಮಗ ಅಥವಾ ಮಗಳ ವರ್ತನೆಯಲ್ಲಿ ಯಾವುದೇ ಬದಲಾವಣೆಯಾದರೆ ಕೂಡಲೇ ಲಕ್ಷ್ಯ ವಹಿಸಬೇಕು. ವೈದ್ಯರನ್ನು ಸಂಪರ್ಕಿಸಬೇಕು. ಹಾಗಾಂತ ಎಲ್ಲಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಮಕ್ಕಳ ಮೇಲೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದು ತಿಳಿಸಿದ್ದಾರೆ.