ಇದನ್ನು ಓದಿದ ಮೇಲೆ ದಿನಾಗ್ಲು ಶೂ ಹಾಕಿಕೊಳ್ಳೋ ಮುಂಚೆ ಎರೆಡೆರಡು ಸಲ ನೋಡ್ಕೊತಿರ, ಶೂ ನಲ್ಲಿ ಏನು ಅಡಗಿತ್ತು ಗೊತ್ತ??

0
306

ಪ್ರತಿಯೊಬ್ಬರೂ ಶೂ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಪ್ರತಿದಿನವೂ ಆಫೀಸ್, ಸ್ಕೂಲ್ ಗಳಿಗೆ ಶೂ-ಗಳ ಬಳಕೆ ಕಡ್ಡಾಯವಾಗಿದೆ. ಹೀಗೆ ಬಳಕೆ ಮಾಡಿದ ಶೂ ಗಳನ್ನು ಮನೆಯ ಮೂಲೆಯಲ್ಲಿ ಇಲ್ಲ ಫುಟ್ವೇರ್ ಸ್ಟಾಂಡ್ ನಲ್ಲಿ ಇಟ್ಟಿರುತ್ತಾರೆ. ಹೀಗೆ ಇಟ್ಟ ಬೂಟ್ಸ್ ನೆನಪಾಗುವುದು ಮತ್ತೆ ಬೇಕಾದಾಗ ಮಾತ್ರ ಈ ಸಮಯದಲ್ಲಿ ಕೆಲವೊಬ್ಬರು ಅವುಗಳನ್ನು ಪರೀಕ್ಷಿಸಿ ಹಾಕಿಕೊಂಡರೆ ಕೆಲವೊಬ್ಬರು ಏನು ನೋಡದೆ ಅರ್ಜೆಂಟ್ -ನಲ್ಲಿ ಶೂ ಹಾಕಿಕೊಂಡು ನಡೆಯುತ್ತಾರೆ ಹೀಗೆ ಮಾಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಮರೆಯಬೇಡಿ.

Also read: ಪ್ರಕೃತಿ ವಿಸ್ಮಯ: ಹಾವುಗಳಿಗೇಕೆ ಎರಡು ನಾಲಿಗೆ?

ಹೌದು ಮನೆಯಲ್ಲಿಟ್ಟ ಶೂ ಗಳಲ್ಲಿ ಹಾವುಗಳು ಸೇರಿಕೊಳ್ಳುತ್ತಿವೆ. ಇಂತಹದೇ ಘಟನೆ ಬೆಂಗಳೂರಿನ ನೆಲಮಂಗಲ ಸಮೀಪದ ನಾರಾಯಣಪ್ಪನ ಪಾಳ್ಯದಲ್ಲಿ ಕಂಡು ಬಂದಿದೆ. ಮನೆಯ ಮುಂದೆ ಬಿಟ್ಟಿರುವ ಶೂ ಒಳಗೆ ನಾಗರಹಾವು ಇರುವುದು ಎಲ್ಲರಿಗೂ ಭಯ ಹುಟ್ಟಿಸಿದೆ. ಈ ಮೊದಲು ಇಂತಹ ವಿಷಯಗಳು ಹಳ್ಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕೇಳಿ ಬರುತ್ತಿದವು, ಈಗೀಗ ನಗರ ಪ್ರದೇಶಗಳಲ್ಲಿ ಅದರಲ್ಲೂ ಮನೆಯಲ್ಲೇ ಇಟ್ಟಿರುವ ಶೂ ಮತ್ತು ವಾಹನಗಳಲ್ಲಿ ಕಂಡು ಬರುತ್ತಿವೆ.

ಶೂ ನಲ್ಲಿ ನಾಗರ ಹಾವು?

ನೆಲಮಂಗಲ ಸಮೀಪದ ನಾರಾಯಣಪ್ಪನ ಪಾಳ್ಯದಲ್ಲಿ ಮೂರ್ತಿ ಎಂಬವವರ ಮನೆಯಲ್ಲಿ ನಾಗರ ಹಾವು ಪತ್ತೆಯಾಗಿದೆ. ಮನೆಯ ಮುಂದೆ ಬಿಟ್ಟಿದ್ದ ಶೂ ಒಳಗೆ ಸುಮಾರು 5 ಅಡಿಯ ನಾಗರಹಾವು ಪತ್ತೆಯಾಗಿದ್ದು, ನಾಗರಹಾವು ಕಂಡು ಮನೆಯವರು ಗಾಬರಿಯಾಗಿದ್ದು, ತಕ್ಷಣ ನೆಲಮಂಗಲದ ಉರಗ ರಕ್ಷಕ ಸ್ನೇಕ್ ಲೋಕೇಶ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಲೋಕೇಶ್ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಮೂರ್ತಿಯವರ 7 ಇಂಚು ಶೂ ಒಳಗೆ 5 ಅಡಿ ಉದ್ದದ ಹಾವು ಕಂಡು ಜನರು ಆತಂಕಗೊಂಡಿದ್ದಾರೆ. ಬಳಿಕ ದೈತ್ಯ ನಾಗರಹಾವು ರಕ್ಷಣೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಕಾಡು ಬಿಟ್ಟು ಮನೆಗೆ ಹಾವು ಸೇರಲು ಕಾರಣ?

ಮೊದಲು ಹಾವುಗಳು ಮನೆಯ ಆಸು -ಪಾಸು ಸುಳಿದರು ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ, ಆದರೆ ಈಗೀಗ ಜನರು ಬಳಕೆ ಮಾಡುತ್ತಿರುವ ಕೆಮಿಕಲ್ ವಸ್ತುಗಳು ಪರಿಸದಲ್ಲಿ ಮಿಶಿತ್ರವಾಗಿ ಸರಿಸೃಪಗಳಿಗೆ ತೊಂದರೆ ಆಗುತ್ತಿದೆ. ಅವುಗಳು ಹರಿದಾಡುವಾಗ ಮೈಮೇಲೆ ಕೆಮಿಕಲ್ ಅಂಶ ಹತ್ತಿ ಪ್ರಾಣಿಗಳ ಮತ್ತು ಜೀವಗಳ ಚರ್ಮ ಉರಿಯುತ್ತೆ ಇದರಿಂದ ಚರ್ಮ ಸುಲಿದು ಸಾಯುತ್ತಿವೆ. ಇಷ್ಟೇ ಅಲ್ಲದೆ ಸೊಳ್ಳೆ ಅಥವಾ ಬ್ಯಾಕ್ಟಿರಿಯಗಳ ನಿರ್ಮೂಲನೆಗಾಗಿ ಸಿಂಪಡಿಸುವ ಔಷದವು ಹಾವುಗಳಿಗೆ ಆಹಾರ ಇಲ್ಲದ ಹಾಗೆ ಮಾಡಿದೆ. ಏಕೆಂದರೆ ಹಾವುಗಳಿಗೆ ಪ್ರಿಯವಾದ ಇಲಿ, ಕಪ್ಪೆಗಳು ಸಾಯುತ್ತಿವೆ. ಅಲ್ಲಿ ಇಲ್ಲಿ ಉಳಿದ ಕೆಲವೊಂದು ಕಪ್ಪೆ, ಇಲಿಗಳು ಮನೆಯ ಆಸಿಪಾಸು ವಾಸಿಸಿ ಲೈಟ್ ಬೆಳಕಿನಲ್ಲಿ ಬರುವ ಹುಳುಗಳನ್ನು ತಿಂದು ಅಲ್ಲೇ ಒಂದು ಬಿಲ್ಲ ಮಾಡಿಕೊಂಡು ವಾಸಿಸುತ್ತೇವೆ.

Also read: ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು! ಮೈಜುಮ್ಮೆನಿಸುವ ಘಟನೆ

ಇಂತಹ ಕಪ್ಪೆ ಇಲಿಗಳನ್ನು ತಿನ್ನಲು ಬರುವ ಹಾವುಗಳು ತನ್ನ ಪ್ರಿಯ ಆಹಾರವಾದ ಉಳಿದವುಗಳಿಗೆ ಕಾಣದ ರೀತಿಯಲ್ಲಿ ಅವಿತುಕೊಂಡಿರುತ್ತೇವೆ, ನಂತರ ರಾತ್ರಿ ವೇಳೆಯಲ್ಲಿ ಬರುವ ಕಪ್ಪೆಗಳನ್ನು ನುಗ್ಗುತ್ತೇವೆ. ಈ ಸಮಯದಲ್ಲಿ ಅವಿತುಕೊಳ್ಳಲು ಬೂಟ್ ಅಥವಾ ವಾಹನಗಳಲ್ಲಿ ಸೇರಿಕೊಳ್ಳುತ್ತೇವೆ. ಇದರ ಅರಿವಿಲ್ಲದ ಜನರು ಮನೆಯಲ್ಲಿ ಇಟ್ಟ ಶೂ ಗಳನ್ನು ಹಾಕಿಕೊಳ್ಳಲು ಹೋದಾಗ ಹಾವುಗಳು ತಮ್ಮ ಪ್ರಾಣ ಉಳಿಸಲು ಕಚ್ಚುತ್ತೆ. ಅದರಲ್ಲಿ ನಾಗರ ಹಾವುಗಳು ಹೆಚ್ಚು ವಿಷ ಹೊಂದಿರುವುದರಿಂದ ಜನರ ಪ್ರಾಣವೇ ಹೋಗುವ ಸಂಭವ ವಿರುತ್ತದೆ ಆದಕಾರಣ ನಿಮ್ಮ ಮನೆಯಲ್ಲಿ ಬೂಟ್ ಅಥವಾ ವಾಹನಗಳ ಬಳಕೆ ಮಾಡುವಾಗ ಸರಿಯಾಗಿ ಪರೀಕ್ಷಿಸಿ ಉಪಯೋಗ ಮಾಡುವುದು ಒಳ್ಳೆಯದು.