ಮಕ್ಕಳ ಬಟ್ಟೆಗಳನ್ನು ವಾಷಿಂಗ್ ಮೆಷಿನ್ ನಲ್ಲಿ ಯಾವುದೇ ಕಾರಣಕ್ಕೂ ಹಾಕಬೇಡಿ.. ಕಾರಣ ಇಲ್ಲಿದೆ ನೋಡಿ..

0
2809

ಈಗ ಎಲ್ಲವೂ ಮೆಷಿನ್ ಮಯವಾಗಿದೆ.. ಅದರಲ್ಲೂ ಬಟ್ಟೆಗಳನ್ನು ಒಗೆಯಲು ವಾಷಿಂಗ್ ಮೆಷಿನ್ ಬಂದು ಯಾವುದೋ ಕಾಲವಾಯಿತು ಬಿಡಿ.. ಇದು ಒಂದು ರೀತಿಯಲ್ಲಿ ಒಳ್ಳೆಯದೇ.. ಅಮ್ಮಂದಿರು ಲಾಟು ಲಾಟು ಬಟ್ಟೆಗಳನ್ನು ಒಗೆದು ಕೈ ನೋವು ಬರುವುದು ತಪ್ಪಿತು..

ಹಿಂದಿನ ಕಾಲದಲ್ಲಿ ಮಕ್ಕಳ ಬಟ್ಟೆಗಳನ್ನು ಹಳ್ಳಿಗಳಲ್ಲಿ ಹೊಳೆ, ಕ್ಯಾನಲ್ ಗಳಿಗೆ ಹೋಗಿ ಬಟ್ಟೆಗಳನ್ನು ಒಗೆದುಕೊಂಡು ಬರುತ್ತಿದ್ದರು.. ಮಕ್ಕಳ ಬಟ್ಟೆಗಳಿಗೆ ಆ ಮಟ್ಟದ ಪ್ರಾಮುಖ್ಯತೆ ಏಕೆ ಎನ್ನುವಿರಾ.. ಕಾರಣ ಇಲ್ಲಿದೆ ನೋಡಿ..

ಈಗಿನ ಬ್ಯುಸಿ ಯುಗದಲ್ಲಿ ಬಟ್ಟೆಗಳನ್ನು ಯಾರೂ ಕೂಡ ಕೈಯಲ್ಲಿ ಒಗೆಯುವುದಿಲ್ಲ.. ಇನ್ನು ಮಕ್ಕಳಿರುವ ಮನೆಯಲ್ಲಿ ಕೆಲಸ ಹೆಚ್ಚಾಗೆ ಇರುತ್ತದೆ.. ಅಂತಹದರಲ್ಲಿ ಯಾರು ತಾನೆ ಕೈಯಲ್ಲಿ ಒಗೆಯುತ್ತಾರೆ ಹೇಳಿ.. ಆದರೆ ಮಕ್ಕಳ ಬಟ್ಟೆಯನ್ನು ಮೆಷಿನ್ ಗಳಲ್ಲಿ ಒಗೆಯಬಾರದು ಏಕೆಂದರೆ ಮೆಷಿನ್ ನಲ್ಲಿ ಮಕ್ಕಳ ಬಟ್ಟೆಯಷ್ಟೇ ಅಲ್ಲಾ ಎಲ್ಲಾ ಬಟ್ಟೆಗಳೂ ಕೂಡ ಒಗೆದಾಗ ನಾವು ಬಳಸುವ ವಾಷಿಂಗ್ ಪೌಡರ್ ಕಂಟೆಂಟ್ ಹಾಗೆಯೇ ಬಟ್ಟೆಯಲ್ಲಿಯೇ ಉಳಿದುಬಿಡುತ್ತದೆ..

ಬಟ್ಟೆಗಳ ಕೊಳೆ ತೆಗೆಯಲು ಪೌಡರ್ ಗಳಲ್ಲಿ.. ಅತಿಯಾದ ಕೆಮಿಕಲ್ ಗಳನ್ನು ಬಳಸಿರುತ್ತಾರೆ.. ಬಟ್ಟೆ ಒಣಗಿದ ಮೇಲೆ ಬಿಳಿ ಬಿಳಿ ಬಣ್ಣ ದ ಡಸ್ಟ್ ಪಾರ್ಟಿಕಲ್ ಗಳನ್ನು ನೀವು ನೋಡಬಹುದು.. ಇವು ಬಟ್ಟೆಯ ಕೊಳೆಗಿಂತ ಅಪಾಯಕಾರಿ.. ಪುಟ್ಟ ಮಕ್ಕಳು ಸಾಮಾನ್ಯವಾಗಿ ಬಟ್ಟೆಯನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಈ ಕೆಮಿಕಲ್ ಗಳು ಹೊಟ್ಟೆಗೆ ಸೇರುತ್ತದೆ..

ಇದರಿಂದ ಮಕ್ಕಳು ಬೇಗನೆ ಖಾಯಿಲೆಗೆ ತುತ್ತಾಗುತ್ತಾರೆ.. ಅಷ್ಟೇ ಅಲ್ಲದೇ ಮಕ್ಕಳ ಸ್ಕಿನ್ ಸೆನ್ಸಿಟಿವ್ ಆಗಿರುತ್ತದೆ.. ವಾಷಿಂಗ್ ಪೌಡರ್ ನ ಕೆಮಿಕಲ್ ನಿಂದ ಮಕ್ಕಳಿಗೆ ಸ್ಕಿನ್ ಅಲರ್ಜಿ ಕೂಡ ಆಗಬಹುದು.. ತುರಿಕೆ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.. ಮೈಯಲ್ಲಿ ಗುಳ್ಳೆಗಳು ಆಗುವ ಸಂಭವವಿರುತ್ತದೆ.. ಆದ್ದರಿಂದ ಸಾಧ್ಯವಾದರೆ ಮಕ್ಕಳ ಬಟ್ಟೆಗಳನ್ನು ಕೈಯಿಂದ ಒಗೆಯಿರಿ.. ಸಾಧ್ಯವಾಗದಿದ್ದರೆ ಮೆಷಿನ್ ಇಂದ ತೆಗೆದ ಮೇಲೆ ಒಮ್ಮೆ ಬಕೆಟ್ ನೀರಿನಲ್ಲಿ ಬಟ್ಟೆಗಳನ್ನು ಜಾಲಸಿ ನಂತರ ಒಣಗಲು ಹಾಕಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು.