ಮೊಬೈಲ್​ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರ; ಹೊಸ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಸೈಬರ್ ಕಳ್ಳರು..

0
900

ದೇಶದಲ್ಲಿ ಬದಲಾವಣೆ ತಂದ ವಿಷಯಗಳಲ್ಲಿ ಕ್ಯಾಸ್ ಲೆಸ್ ವ್ಯವಹಾರಗಳು ಕೂಡ ಒಂದು ಇದರಿಂದ ಎಷ್ಟೊಂದು ಪ್ರಯೋಜನ ಇದೆಯೋ ಅಷ್ಟೊಂದು ಅಪಾಯವು ಇದೆ. ಏಕೆಂದರೆ ಸೈಬರ್ ಕಳ್ಳರು ವಿಬ್ಬಿನ್ನ ರೀತಿಯ ಕಳ್ಳತನ ಮಾಡುತ್ತಿದ್ದಾರೆ. ಅದನ್ನು ಕಂಡು ಹಿಡಿದು ಅದರ ಬಗ್ಗೆ ಜಾಗೃತಿ ಮೂಡಿಸುವ ವೇಳೆಗೆ ಮತ್ತೊಂದು ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕೇಳಿ ಬರುತ್ತಿವೆ. ಸದ್ಯ ನೂತನ ರೀತಿಯಲ್ಲಿ ನಡೆಯುತ್ತಿರುವ ವಂಚನೆ ಬೆಳಕಿಗೆ ಬಂದಿದು. ಫ್ರೀ ವೈ ಪೈ ಬಳಕೆ ಮಾಡಿ ಪೇಟಿಎಂ, ಫೋನ್‌ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ವೇಳೆ ವಂಚನೆಗಳು ನಡೆಯುತ್ತಿದೆ.

ಏನಿದು ಪ್ರಕರಣ?

ಹೌದು ಡಿಜಿಟಲ್​ ವ್ಯವಹಾರದಿಂದ ಗ್ರಾಹಕರಿಗೆ ಎಷ್ಟು ಅನುಕೂಲ ಇದೆಯೋ, ಅಷ್ಟೇ ಅನಾನುಕೂಲವಿದೆ ಎಂಬ ವರದಿಯನ್ನು ಆರ್​ಬಿಐ ನೀಡಿದೆ. ಉಚಿತವಾಗಿ ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್, ಏರ್ಪೋರ್ಟ್, ಹೀಗೆ ಬಹುತೇಕ ಸ್ಥಳಗಳಲ್ಲಿ ಸಿಗುವ ಫ್ರೀ ವೈ ಪೈ ಕನೆಕ್ಟ್ ಮಾಡಿಕೊಂಡು ಆನ್ಲೈನ್ ವ್ಯವಹಾರ ಮಾಡುತ್ತಾರೆ ಈ ವೇಳೆ ವಿಚಾರ ಮಾಡುವುದು ಒಂದೇ ಫ್ರೀ ಸಿಗುವ ನೆಟ್ ಅಲ್ಲಿ ಎಲ್ಲ ಕೆಲಸ ಮಾಡಿಕೊಂಡು ತನ್ನ ದಿನದ ಡೇಟಾ ಉಳಿಸಿಕೊಳ್ಳುವುದು ಎಲ್ಲರ ಇಚ್ಚೆಯಾಗಿರುತ್ತೆ. ಆದರೆ ಇದೆ ಅವರ ಹಣ ವಂಚನೆಯಾಗಲು ಕಾರಣವಾಗಿದೆ ಎನ್ನುವುದನ್ನು RBI ತಿಳಿಸಿದೆ.

ಆರ್​ಬಿಐ ಬಿಡುಗಡೆ ಮಾಡಿರುವ ವರದಿ ಪ್ರಕಾರ 2016-17 ರ ಅವಧಿಯಲ್ಲಿ ದೇಶದಲ್ಲಿ ಶೇ.55ರಷ್ಟು ಜನರು ಆನ್​ಲೈನ್​ ಮೂಲಕ ವ್ಯವಹಾರ ನಡೆಸಿದ್ದಾರೆ. ಈ ಪ್ರಕಾರ ದೇಶದಲ್ಲಿ ನಡೆಯುವ 10 ಆನ್​ಲೈನ್​ ವ್ಯವಹಾರಗಳಲ್ಲಿ ಒಬ್ಬರು ವಂಚನೆಗೆ ಒಳಗಾಗುತ್ತಿದ್ದಾರೆ. 2015-16 ರಲ್ಲಿ ದೇಶದಲ್ಲಿ 16,468 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದೆ. 2016-17 ರಲ್ಲಿ 13,653 ಪ್ರಕರಣಗಳ ದೂರುಗಳನ್ನು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ವಂಚನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ . ಹೀಗಾಗಿಯೇ ಆದಷ್ಟು ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.

ಈ ವೇಳೆ ಗ್ರಾಹಕರು ವಹಿಸಬೇಕಾದ ಎಚ್ಚರಿಕೆಗಳು;

ನಕಲಿ ವೆಬ್​ಸೈಟ್ ಮೇಲೆ ಎಚ್ಚರ:

ನೀವು ಬ್ರೌಸರ್​ ಅಥವಾ ಇತರೆ ಪೇಜ್​ಗಳಲ್ಲಿರುವ ವೆಬ್​ಸೈಟ್​ನ ಹೆಸರನ್ನು ನೋಡಿ ಕ್ಲಿಕ್ ಮಾಡಬೇಡಿ. ಅದರ ಬದಲಾಗಿ ನೇರವಾಗಿ ಟೈಪಿಸಿ ವೆಬ್​ಸೈಟ್​ಗಳಿಗೆ ಬೇಟಿ ನೀಡುವುದು ಸೂಕ್ತ. ಏಕೆಂದರೆ ಸೈಬರ್​ ವಂಚಕರು ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿ ಆಫರ್​ಗಳನ್ನು ನೀಡಿರುತ್ತಾರೆ. ಈ ವೇಳೆ ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಹುಡುಕಾಟ ನಡೆಸುವ ವೆಬ್​ಸೈಟ್​ನಲ್ಲಿ HTTP ಪಕ್ಕದಲ್ಲಿ S ಎಂಬ ಅಕ್ಷರ ಇದೆಯೇ ಎಂಬುದನ್ನು ಪರೀಕ್ಷಿಸಿ. HTTPS ಎಂಬ ಅಕ್ಷರ ಇದ್ದರೆ ಅಂತಹ ವೆಬ್‌ಸೈಟ್ ಸುರಕ್ಷಿತ ಎಂದರ್ಥ.

ಆನ್​ಲೈನ್​ ಶಾಪಿಂಗ್ ಮಾಡುವ ವೇಳೆ ನಿಮ್ಮ ಬ್ಯಾಕಿಂಗ್ ಮಾಹಿತಿಗಳನ್ನು ಕದಿಯಲು ನಕಲಿ ಶಾಪಿಂಗ್ ವೆಬ್​ಸೈಟ್​ಗಳು ಬರುತ್ತೇವೆ ಇವುಗಳ ಬಗ್ಗೆ ಎಚ್ಚರವಹಿಸಿ.
ನೀವು ಎರಡಕ್ಕಿಂತ ಹೆಚ್ಚು ಬಾರಿ ನೆಟ್​ ಬ್ಯಾಂಕಿಂಗ್ ಆ್ಯಪ್​ ಬಳಸಿ ಹಣ ಪಾವತಿ ಮಾಡಿದ್ದರೆ, ಪಾಸ್​ವರ್ಡ್​ ಅನ್ನು ಬದಲಿಸುವುದು ಉತ್ತಮ.
ಆನ್​ಲೈನ್ ವ್ಯವಹಾರ ನಡೆಸುವಾಗ ಪಬ್ಲಿಕ್ ವೈಫೈ ಬಳಸಬೇಡಿ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಕನೆಕ್ಷನ್​ನನ್ನು ಹ್ಯಾಕರುಗಳು ತುಂಬಾ ಸುಲಭವಾಗಿ ಹ್ಯಾಕ್​ ಮಾಡುತ್ತಾರೆ.

ನೆಟ್​ ಬ್ಯಾಂಕಿಂಗ್ ಅಥವಾ ಆನ್​ಲೈನ್ ವಹಿವಾಟಿನ ಬಳಿಕ ನಿಮ್ಮ ಖಾತೆಯನ್ನು ಲಾಗೌಟ್ ಮಾಡಲು ಮರೆಯಬೇಡಿ. ಇಲ್ಲದಿದ್ದರೆ ಇನ್ಯಾವುದೋ ರೀತಿಯಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಹ್ಯಾಕರುಗಳ ಪಾಲಾಗುವ ಸಾಧ್ಯತೆ ಇರುತ್ತದೆ.

ಶಾಪಿಂಗ್ ಆ್ಯಪ್​ಗಳು ಡೌನ್​ಲೋಡ್​ಗೆ ಲಭ್ಯವಿರುತ್ತದೆ. ಇಂತಹ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುವ ಮುನ್ನ ಪರೀಕ್ಷಿಸಿಕೊಳ್ಳಿ. ಏಕೆಂದರೆ ಬಳಕೆದಾರರ ಮಾಹಿತಿಗಳನ್ನು ಕದಿಯಲೆಂದೇ ನಕಲಿ ಆ್ಯಪ್​ ಬಂದಿವೆ, ಇವುಗಳ ಬಗ್ಗೆ ಎಚ್ಚರವಹಿಸಿ.

Also read: ನಿಮಗೆ ಗೊತ್ತಿಲ್ಲದೇ ಖದೀಮರು ನಿಮ್ಮ Accountನಿಂದ ಹಣ ವರ್ಗಾಯಿಸಿಕೊಂಡಿದ್ದರೆ, ಅದನ್ನು ಹಿಂಪಡೆಯುವುದು ಹೇಗೆ ಅಂತ ನೋಡಿ!!