ನಿಮ್ಮ ಹತ್ತಿರದಲ್ಲೇ ಇರುವ ಪುಂಡಿ ಗಿಡ ಉಪಯೋಗಿಸಿ ಆರೋಗ್ಯವಂತರಾಗಿರಿ..!

0
2173

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಿಗುವ ಈ ಪುಂಡಿ ಗಿಡವು ಹಲುವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತೆ.
ಮಾನವ ಆರೋಗ್ಯಕ್ಕೆ ಮತ್ತು ಆಹಾರಕ್ಕೆ. ಹಾಗು ಇದರಿಂದ ನಾರು ಸಹ ತಯಾರಿಸಬಹುದು. ಹಾಗಾದ್ರೆ ಇದರ ಲಾಭಗಳೇನು ಅಂತ ನೋಡಣ ಬನ್ನಿ.

be-healthy-with-pundi-leaves-1
source:pinterest.com

ಔಷಧೀಯ ಗುಣಗಳು:

  1. ಈ ಸೊಪ್ಪು ಅಗ್ನಿ ಮಾಂದ್ಯವನ್ನು ನಿವಾರಣೆ ಮಾಡುತ್ತದೆ,
  2. ಆಹಾರದ ರುಚ್ಚಿ ಹೆಚ್ಚಿಸುತ್ತದೆ ಮತ್ತು ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.
  3. ಒಂದು ಚಮಚ ಹೂವಿನ ರಸಕ್ಕೆ ಸ್ವಲ್ಪ ಸಕ್ಕರೆ ಮತ್ತು ಕರಿಮೆಣಸಿನ ಪುಡಿ ಸೇರಿಸಿ ದಿನಕ್ಕೆ 2 ಬಾರಿ ಕೊಡುವುದರಿಂದ ಪಿತ್ತದಿಂದ ಉಂಟಾದ ವಾಕರಿಕೆ ನಿವಾರಣೆಯಾಗುತ್ತದೆ.
  4. ಸೊಪ್ಪು ಮೃದು ವಿರೇಚಕವಾದ ಕಾರಣ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
  5. ಎಲೆಗಳಿಂದ ಕಷಾಯ ತಯಾರಿಸಿ ತೆಗೆದುಕೊಂಡರೆ ಕೆಮ್ಮು ಗುಣವಾಗುತ್ತದೆ.
  6. ಬೀಜಗಳನ್ನು ಅರೆದು ನೋವಿರುವ ಜಾಗಕ್ಕೆ ಬೆಚ್ಚಗೆ ಲೇಪ ಮಾಡುವುದರಿಂದ ವೇದನೆ ಕಡಿಮೆ ಮಾಡುತ್ತದೆ.

ಎಲೆಯಿಂದ ಪಲ್ಯ:

be-healthy-with-pundi-leaves-2
source:justinox.ru

ಪುಂಡಿಯಿಂದ ಹಲವು ಉಪಯೋಗ. ಇದರ ಎಲೆಯಿಂದ ರುಚಿಯಾದ ಪಲ್ಯ ಮಾಡುತ್ತಾರೆ. ತೊಗಟೆಯಿಂದ ನಾರು ತಯಾರಾಗುತ್ತದೆ. ಕಾಳಿನಿಂದ ಅಡುಗೆ ಎಣ್ಣೆ ತಯಾರಾಗುತ್ತದೆ. ಇನ್ನು ಗಿಡ (ದಿಂಡು) ಗುಡಿಸಲು, ಚಪ್ಪರ ನಿರ್ಮಾಣಕ್ಕೆ ಬಳಕೆಯಾಗುತ್ತದೆ.

ನಾರು ತಯಾರಿಸುವುದು:

be-healthy-with-pundi-leaves-3
source:prnewswire.com

ಪುಂಡಿ ಗಿಡ ಒಣಗಿದ ನಂತರ ತೆನೆ ಬೇರ್ಪಡಿಸಿ ಗಿಡಗಳನ್ನು ಹಳ್ಳಗಳಲ್ಲಿ ಒಡ್ಡು ನಿರ್ಮಿಸಿ 15 ದಿನಗಳವರೆಗೆ ನೆನೆಯಲು ಬಿಡಲಾಗುತ್ತದೆ. 15 ದಿನಕ್ಕೆ ಅದು ತೊಗಟೆ ಸಂಪೂರ್ಣ ಕಳಿಯುತ್ತದೆ. ಅದನ್ನು ಬಿಡಿಸಿ ಬಿಸಲಲ್ಲಿ ಒಣಗಿಸಿದರೆ ನಾರು ತಯಾರಾಗುತ್ತದೆ. ಈ ನಾರನ್ನು ಹುರಿ ಮಾಡಿ ಹಗ್ಗ ನಿರ್ಮಿಸಲಾಗುತ್ತದೆ.