ಈ ವೀಕೆಂಡ್ ಎಲ್ಲಾದ್ರೂ ಟ್ರೆಕ್ ಮಾಡಬೇಕು ಅಂತಿದ್ರೆ ಊಟಿ ಕೊಡೈಕನಾಲ್ ಅಷ್ಟೇ ರಮಣೀಯವಾಗಿರೋ ಸ್ಕಂದಗಿರಿಗೆ ಹೋಗ್ಬನ್ನಿ..

0
1070
skandagiri5

Kannada News | Karnataka Temple History

ಬೆಟ್ಟದ ತುತ್ತ ತುದಿಯಲ್ಲೊಂದು ಕೋಟೆ, ಆ ಕೋಟೆಯ ನಡುವೆ ಪಾಳ್ಬಿದ್ದ ಪುಟ್ಟ ಮಂದಿರ, ಅದರ ಹಿಂದೆ ಅವಶೇಷದಂತೆ ಕಾಣುವ ಹಾಲು ಮಂಟಪ, ಅನಾಥವಾಗಿ ಬಿದ್ದಿರುಅ ಸುಂದರ ಕೆತ್ತನೆಯುಳ್ಳ ಬಸವ, ಕಣ್ಣು ಹಾಯಿಸಿದಷ್ಟು ಬೆಟ್ಟಗಳ ದೃಶ್ಯ , ತೀವ್ರತೆಯಿಂದ ಕೂಡಿದ ಸುಳಿಗಾಳಿ ಇಂತಹ ಅನಂತ ರಮ್ಯಾನುಭವವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಂತಹ ತಾಣವೇ ಅಂದದ ಸ್ಕಂದಗಿರಿ.

ನಂದಿಬೆಟ್ಟದಷ್ಟೇ ಎತ್ತರವಿರುವ, ಕಳವಾರ ಬೆಟ್ಟವೆಂತಲೂ ಕರೆಯುವ ಈ ಸ್ಕಂದಗಿರಿ ಬೆಂಗಳೂರಿನಿಂದ ೭೦ ಕಿಮಿ ದೂರದಲ್ಲಿದ್ದು ಚಿಕ್ಕಬಳ್ಳಾಪುರದಿಂದ ಕೇವಲ ೫ ಕಿಮಿ ದೂರದಲ್ಲಿದೆ. ಸುಮಾರು ವರ್ಷದ ಇತಿಹಾಸ ಹೊಂದಿರುವ ಪಾಪಾಗ್ನಿ ಮಠದ ಹಿಂಬಾಗದಲ್ಲಿರುವ ಈ ಬೆಟ್ಟವು ಪಿರಮಿಡ್ ಆಕೃತಿಯಲ್ಲಿದೆ. ಬೆಟ್ಟವೇರಲು ಇಲ್ಲಿಂದ ಕಾಲ್ನಡಿಗೆಯಲ್ಲಿ ಸುಮಾರು ೨ ತಾಸು ಸವೆಸಿದಲ್ಲಿ ಸ್ಕಂದಗಿರಿಯ ತುದಿಯನ್ನು ತಲುಪಬಹುದು,

ಈ ಎರಡು ತಾಸಿನ ಚಾರಣ ಅವಿಸ್ಮರಣೀಯ. ಇಂಗ್ಲಿಷ್ ವರ್ಣಮಾಲೆಯ u ಮಾದರಿಯಲ್ಲಿ ಸೃಷ್ಟಿಯಾಗಿರುವ ಬೆಟ್ಟಗುಡ್ಡಗಳ ಸಾಲಿನ ನಡುವೆ ಸಾಗುವ ಏರು ಹಾದಿ, ಮರಗಿಡಗಳಿಂದ ಆವೃತವಾದ ಪ್ರಕೃತಿಯು ಏರುವ ಆಯಾಸವನ್ನು ತಣಿಸಿ ಕಣ್ಮನಗಳಿಗೆ ತಂಪೆರೆಯುತ್ತದೆ.ಸ್ಕಂದಗಿರಿಯ ಮುಡಿಯೇರಿ ನಿಂತರೆ ಕಾಣುವ ನಿಸರ್ಗ ಸೊಬಗು ನಿಜಕ್ಕೂ ವರ್ಣನಾತೀತ.

ಹಿನ್ನಲೆ:

ಈ ಕೋಟೆಯನ್ನು ಸರ್ಜಪ್ಪನಾಯಕನೆಂಬ ಪಾಳೇಗಾರನು ನಿರ್ಮಿಸಿದನು. ಟಿಪ್ಪು ಸುಲ್ತಾನನು ಈ ಸ್ಕಂದಗಿರಿ ಕೋಟೆಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಮಾರಕ್ಕಳೆಂಬ ಹಾಲು ಮಾರುವವಳಿಗೆ ಬಳುವಳಿಯ ಆಮಿಷ ತೋರಿಸಿ ಆಕೆಯ ನೆರವಿನಿಂದ ಸ್ಕಂದಗಿರಿಯ ಕೋಟೆಯಲ್ಲಿ ಸುಭದ್ರವಾಗಿದ್ದ ಸರ್ಜಪ್ಪ ನಾಯಕನನ್ನು ಸೆರೆ ಹಿಡಿದು ಹತ್ಯೆ ಗೈದನು. ನಂತರ ಈ ಸ್ಕನಾದಾಗಿರಿಯನ್ನು ಮಾರಕ್ಕಳಿಗೆ ಬಳುವಳಿಯಾಗಿ ನೀಡಿದನೆಂದು ಹೇಳುವ ಹಲವು ಶಿಲಾಶಾಸನಗಳು ಬೆಟ್ಟದ ತಪ್ಪಲಿನಲ್ಲಿ ಕಾಣಬಹುದಾಗಿದೆ. ಕ್ರಮೇಣ ಮಾರಕ್ಕಲನ್ನು ರಾಜದ್ರೋಹಿಯೆಂದು ಟಿಪ್ಪು ಸುಲ್ತಾನನು ಹತ್ಯೆ ಮಾಡಿದನೆಂದು ಇತಿಹಾಸವು ಹೇಳುತ್ತದೆ.

ಇಲ್ಲಿರುವ ಪಾಳು ವಿಗ್ರಹಗಳು, ಕೋಟೆ, ಹಾಲು ಮಂಟಪಗಳು ಹಿಂದೆ ಇಲ್ಲೊಂದು ಆಳ್ವಿಕೆ ಇರುವಿಕೆಯ ಮೂಕ ಸಾಕ್ಷಿಯಾಗಿದೆ.ಮುಂಜಾನೆ ಸೂರ್ಯೋದಯ ವಾಗುವ ಮುನ್ನ ಸ್ಕಂದಗಿರಿಯ ಮೇಲಿದ್ದಲ್ಲಿ ಸಿಗುವ ಸೂರ್ಯೋದಯದ ದೃಶ್ಯ ಅತ್ಯಂತ ರಮಣೀಯ. ಉದಯ ರವಿಯ ಕೆಳಗೆ ಓಲಾಡುವ ಮೋಡಗಳು ಒಂದು ಸಾಗರವನ್ನೇ ಸೃಷ್ಟಿಸುತ್ತವೆ. ಸಾದ್ಯವಾಡಿಸ್ತು ಬೆಳಗಿನ ಅವಧಿಯಲ್ಲೇ ಹೋಗಿ ಬರುವುದು ಉತ್ತಮ. ಇಲ್ಲವಾದಲ್ಲಿ ಬಿಸಿಲ ಬೇಗೆಗೆ ಬಳಲಬೇಕಾಗಬಹುದು.

ಫ್ರೆಂಡ್ಸ್ ಜೊತೆ ಎಲ್ಲಾದ್ರೂ ಟ್ರೆಕಿಂಗ್ ಹೋಗ್ಬೇಕು ಅಂತಿದ್ರೆ ಸ್ಕಂದಗಿರಿಗಿಂತ ಒಳ್ಳೆ ಮತ್ತು ಹತ್ತಿರದ ಜಾಗ ಇನ್ನೊಂದಿಲ್ಲ..ಅಲ್ಲೊಂದು ಹೋಟೆಲ್ ಗಳು ಇಲ್ಲದ ಕಾರಣ ಹೋಗ್ತಾ ತಿನ್ನಲು ತಿಂಡಿ ಮತ್ತು ನೀರನ್ನು ತೆಗೆದುಕೊಂಡು ಹೋಗಲು ಮರೆಯದಿರಿ.

Also Read:

Also read: ಗುಹಾಂತರ ದೇಗುಲಗಳ ಆಗರ ಐಹೊಳೆ ಒಂದೇ ಸಾಕಲ್ಲವೆ ಕರ್ನಾಟಕದ ಶಿಲ್ಪಕಲಾ ಹಿರಿಮೆಯನ್ನು ಇಡೀ ವಿಶ್ವಕ್ಕೆ ಸಾರಲು…

Also Read: ಗುಹಾಂತರ ದೇಗುಲಗಳ ಆಗರ ಐಹೊಳೆ ಒಂದೇ ಸಾಕಲ್ಲವೆ ಕರ್ನಾಟಕದ ಶಿಲ್ಪಕಲಾ ಹಿರಿಮೆಯನ್ನು ಇಡೀ ವಿಶ್ವಕ್ಕೆ ಸಾರಲು…