ಸೊಪ್ಪಿನಿಂದ ನಿಮ್ಮ ತ್ವಚೆಗೆ ಕಾಂತಿ ಬರುತ್ತೆ. ಇದಕ್ಕಿಂತ ಒಳ್ಳೆ ಕಾರಣ ಬೇಕಾ ಸೊಪ್ಪುನ್ನು ಬಳಸೋಕೆ?

0
1760

ಸೊಪ್ಪು ತಿಂದ್ರೆ ಅರೋಗ್ಯ ಮಾತ್ರ ವೃದ್ಧಿ ಆಗೋಲ್ಲ, ಸೌಂದರ್ಯಕೂಡಾ ವೃದ್ಧಿಯಾಗುತ್ತೆ..!

ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ ಮೇಲೆ ಶಾಶ್ವತ ಕಲೆಗಳಾಗಿ ಉಳಿದುಬಿಡಬಹುದು. ಸುಂದರವಾದ ತ್ವಚೆ ಪಡೆಯಲು ಹಣ್ಣಿನ ಫೇಸ್ ಪ್ಯಾಕ್ ಬಳಸಿ ಕೊಳ್ಳುವುದರ ಬಗ್ಗೆ ನಿಮಗೆಲ್ಲ ತಿಳಿದಿರುವ ವಿಷಯ. ನಿಮಗೆ ತಿಳಿದಿರದ ವಿಷಯವೆನೆಂದರೆ ಸೊಪ್ಪುಗಳನ್ನು ಬಳಸಿರುವುದರಿಂದ ತ್ವಚೆಯ ರಕ್ಷಣೆ ಮಾಡುವುದು.

beauty-tips-2-9
source: vijaykarnataka.indiatimes.com

ಸಾಮಾನ್ಯವಾಗಿ ಆರೋಗ್ಯದ ದೃಷ್ಟಿಯಿಂದ ತರಕಾರಿ, ಹಣ್ಣು, ಹಾಲು, ಸೊಪ್ಪುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಸೊಪ್ಪುಗಳ ಸೇವನೆ ಆರೋಗ್ಯ ವದ್ಧಿಗೆ ಮಾತ್ರವಲ್ಲ. ಸೌಂದರ್ಯಕ್ಕೂ ಪ್ರೇರಕ. ನಮ್ಮ ಆಹಾರ ಸೇವನಾ ಕ್ರಮದಿಂದಲೂ ಕೂಡ ಚರ್ಮದ ಕಾಂತಿಯನ್ನು ಪಡೆಯಬಹುದು. ತಾಜಾ ಸೊಪ್ಪುಗಳಲ್ಲಿ ಅಧಿಕ ಪ್ರಮಾಣದ ಆಸಿಡ್‍ಗಳು ಇರುವುದರಿಂದ ಹಲವಾರು ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಇದು ಸಹಕಾರಿ, ಅಲ್ಲದೆ ಸ್ವಾಭಾವಿಕವಾದ ಪ್ಯಾಕ್‍ಗಳಲ್ಲಿ ಯಾವುದೇ ರಾಸಾಯನಿಕಗಳು ಇರುವುದಿಲ್ಲ ಮತ್ತು ಅವುಗಳು ನಿಮ್ಮ ತ್ವಚೆಯ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುವುದಿಲ್ಲ. ಅಧಿಕ ವಿಟಮಿನ್ ಮತ್ತು ಕಿಣ್ವಗಳನ್ನು ಒಳಗೊಂಡಿರುವ ಸೊಪ್ಪುಗಳು ತ್ವಚೆಯ ಮೇಲೆ ಅದ್ಭುತವಾದ ಎಕ್ಸ್‌ಫೋಲಿಯೇಶನ್ ಕ್ರಿಯೆಯನ್ನು ಮಾಡುತ್ತವೆ.

ಬನ್ನಿ ಹಾಗಾದರೆ ಸೊಪ್ಪುಗಳಿಂದ ಸೌಂದರ್ಯ ವದ್ಧಿ ಹೇಗೆ ಎಂಬುದನ್ನು ಈಗ ತಿಳಿಯೋಣ.

ಮೆಂತೆ ಸೊಪ್ಪು
ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಎಲೆಗಳನ್ನು ಸೋಸಿ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಅದಕ್ಕೆ ನಾಲ್ಕು ಚಮಚ ಮೊಸರು ಸೇರಿಸಿ ಮುಖಕ್ಕೆ ಪ್ಯಾಕ್ ಹಾಕಿ. ಇಪ್ಪತ್ತು ನಿಮಿಷ ಬಿಟ್ಟು ತೊಳೆಯಿರಿ. ಮೊಡವೆ ಕಲೆ ನಿವಾರಣೆ ಆಗುವುದು.

source: ladycarehealth.com

ಮೆಂತೆ ಸೊಪ್ಪು
ಮೆಂತೆ ಸೊಪ್ಪನ್ನು ಸೋಸಿ ಎಲೆಗಳನ್ನು ಅರೆದು ಅದಕ್ಕೆ ನಿಂಬೆರಸ ಸೇರಿಸಿ ಜಿಡ್ಡಿನಿಂದ ಕೂಡಿದ ಮುಖಕ್ಕೆ ಮಸಾಜ್ ಮಾಡುತ್ತಾ ಬಂದರೆ ಜಿಡ್ಡು ಮಾಯವಾಗುತ್ತದೆ. ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ಕಾಟ ಇರುವುದಿಲ್ಲ.

source: ladycarehealth.com

ಗೋಣಿಸೊಪ್ಪು
ಗೋಣಿಸೊಪ್ಪುನ್ನು ಜಜ್ಜಿ ರಸ ತೆಗೆದು ಕೊಳ್ಳಬೇಕು. ಈ ರಸಕ್ಕೆ ಒಂದು ಚಮಚ ನಿಂಬೆ ರಸವನ್ನು ಮಿಶ್ರಮಾಡಿ, ಕಜ್ಜಿ, ತುರಿ ಮತ್ತು ಯಾವುದೇ ಚರ್ಮ ರೋಗವಿದ್ದರೂ ಅದಕ್ಕೆ ದಪ್ಪನೆಯವಾಗಿ ಲೇಪಿಸಬೇಕು. ಎರಡು ಗಂಟೆಯ ನಂತರ ಬಿಸಿ ನೀರಿನಿಂದ ತೊಳೆಯಬೇಕು.

source: robertsranch.org

ಬೇವಿನ ಸೊಪ್ಪು
ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆರಿದ ಮೇಲೆ ಸೋಸಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಈ ರಸವನ್ನು ಅದ್ದಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕರಿ ಮಚ್ಚೆ ಮಾಯಾವಾಗುತ್ತದೆ.

source: boldsky.com

ಮೆಂತೆ ಸೊಪ್ಪು
ಮೆಂತೆ ಸೊಪ್ಪಿನೊಂದಿಗೆ ಪುದೀನಾ ಎಲೆ ಸೇರಿಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಾಕಿ ತೊಳೆಯುವುದರಿಂದ ಸುಕ್ಕುಗಳನ್ನು ತಡೆಯಬಹುದು.

source: 1.bp.blogspot.com

ಸಬ್ಬಸಿಗೆ ಸೊಪ್ಪು
ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು.

health-benefits-of-dill1

ಬೇವಿನ ಸೊಪ್ಪು
ಬೇವಿನರಸವನ್ನು ಮುಖದ ಮೇಲೆ ಲೇಪಿಸಿದರೆ ಮುಖದಮೇಲೆ ಸಿಡುಬಿನ ಕಲೆಯನ್ನು ಬೇಗನೆ ಹೋಗಲಾಡಿಸುತ್ತದೆ.

source: i.ndtvimg.com

ಮೂಲಂಗಿ ಸೊಪ್ಪು
ಕೈಗಳ ಮೊಣಕೈ ಗಂಟು ಹಾಗೂ ಮೊಣಕಾಲು ಕಪ್ಪಾಗಿದ್ದಲ್ಲಿ ಮೂಲಂಗಿ ಸೊಪ್ಪನ್ನು ರುಬ್ಬಿ ಹಗುರ ಮಸಾಜ್ ಮಾಡಿ. ಕಪ್ಪು ನಿವಾರಣೆ ಆಗುವುದು.

source: specialtyproduce.com

ಚಕ್ಕೋತ ಸೊಪ್ಪು
ಎರಡು ದಿನಕ್ಕೊಮ್ಮೆ ಚಕ್ಕೋತಾ ಸೊಪ್ಪನ್ನು ರುಬ್ಬಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಮುಖದಲ್ಲಿ ಎಣ್ಣೆ ಅಂಶ ಕಡಿಮೆ ಆಗುವುದು.

source: vijaykarnataka.indiatimes.com

ದಂಟಿನ ಸೊಪ್ಪು
ಮುಖದಲ್ಲಿ ಬಿಸಿಲಿನಿಂದಾಗಿ ಕಪ್ಪಗಾಗಿದ್ದಲ್ಲಿ ದಂಟಿನ ಸೊಪ್ಪನ್ನು ನುಣ್ಣಗೆ ರುಬ್ಬಿ, ನಿಂಬೆರಸ ಸೇರಿಸಿ ಪ್ಯಾಕ್ ಮಾಡಿಕೊಂಡು ಮಸಾಜ್ ಮಾಡಿ. ಹಾಗೆ ಒಂದು ಗಂಟೆ ಇದ್ದು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ರೀತಿ ಮಾಡಿಕೊಳ್ಳಬಹುದು.

source: jnmarket.net

ನುಗ್ಗೆಸೊಪ್ಪು
ನುಗ್ಗೆ ಎಲೆಗಳನ್ನು ನುಣ್ಣಗೆ ಅರೆದು ವಾರಕ್ಕೊಮ್ಮೆ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಳ್ಳಿ. ಕಲೆಗಳಿಲ್ಲದ ಚಂದ್ರಕಾಂತಿ ನಿಮ್ಮ ಮುಖದಲ್ಲಿ ಅರಳುವುದು.

source: kannada.boldsky.com