ಈ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಸೌಂದರ್ಯ ವರ್ಧನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.!

0
2263

ಹೆಣ್ಣು ಸ್ವಭಾವತಃ ಶೃಂಗಾರಪ್ರಿಯಳು. ಸುಂದರವಾಗಿ ಕಾಣಲು ಆಕೆ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ. ಆದರೆ ಈಗ ಹೆಣ್ಣು ಅಷ್ಟೇ ಅಲ್ಲ ಪುರುಷರೂ ಸುಂದರವಾಗಿ ಕಾಣಲು ಬಯಸುತ್ತಿದ್ದು, ಇದಕ್ಕಾಗಿ ಸಾಕಷ್ಟು ಹಣವನ್ನು ಬ್ಯೂಟಿಪಾರ್ಲರ್, ಸಲೂನ್‍ಗಳಿಗೆ ವ್ಯಯಿಸುತ್ತಾರೆ. ಆದರೆ ದುಬಾರಿ ವೆಚ್ಚದ ನಂತರವೂ ಅಡ್ಡ ಪರಿಣಾಮಗಳನ್ನು ಅನುಭವಿಸುವ ಬದಲು ಮನೆಯಲ್ಲೇ ದೊರಕುವ ಸಾಮಗ್ರಿಗಳ ಮೂಲಕ ಆರೈಕೆ ಮಾಡಿಕೊಂಡಲ್ಲಿ ಚೆಲುವು ಇಮ್ಮಡಿಸುವುದರಲ್ಲಿ ಸಂಶಯವೇ ಇಲ್ಲ.

ತುಳಸಿ-ಜೇನು
ಪ್ರತೀದಿನ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುತ್ತ ಬಂದಲ್ಲಿ ಮುಖದ ಮೇಲಿನ ಕಚ್ಚು, ಕಲೆ ಮಾಯವಾಗಿ ಮುಖದ ಕಳೆ ಹೆಚ್ಚಾಗುತ್ತದೆ.

source: imgur.com

ಕಹಿಬೇವು
ಕಹಿವೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ. ಉಗುರು ಬೆಚ್ಚಗಾದಾಗ ಈ ನೀರಿನಿಂದ ಮುಖ ತೊಳೆಯುತ್ತ ಬಂದಲ್ಲಿ ಮುಖದ ಮೇಲಿನ ಸಣ್ಣ, ಸಣ್ಣ ಗುಳ್ಳೆಗಳು, ಕಲೆ, ಬೆವರುಸಾಲೆ ಎಲ್ಲ ಮಾಯವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಜೊತೆಗೆ ಸಿಡಿಬಿನ ಕಲೆ ಇದ್ದರೆ ಕ್ರಮೇಣ ಅದೂ ಕಡಿಮೆಯಾಗುತ್ತಾ ಹೋಗುತ್ತದೆ.

source: divalikes.com

ಹಾಲು
ಬಿಸಿ ಮಾಡದ ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೂದಲಿಗೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಒಣಗಿದ ನಂತರ ಸ್ನಾನ ಮಾಡಿ. ಇದರಿಂದ ಚರ್ಮದ ಬಣ್ಣ ತಿಳಿಯಾಗಿ ಸ್ನಿಗ್ಧತೆ ಹೆಚ್ಚುತ್ತದೆ. ಕೂದಲು ನೈಸರ್ಗಿಕ ಕಂಡೀಷನರ್ ಮಾಡಿದಂತೆ ಹೊಳಪು ಪಡೆಯುತ್ತದೆ.

source: India.com

ಕಡಲೆ ಹಿಟ್ಟು
ಕಡಲೆಹಿಟ್ಟಿಗೆ ನಿಂಬೆ ರಸ ಮತ್ತು ಸೌತೆಕಾಯಿ ರಸ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ, ಕೈ ಮತ್ತು ಕಾಲುಗಳಿಗೆ ತೆಳುವಾಗಿ ಹಚ್ಚಿ. ಒಣಗಿದ ನಂತರ ಹಗುರವಾಗಿ ಸ್ಕ್ರಬ್ ರೀತಿ ಉಜ್ಜಿ ನಂತರ ಉಗುರುಬೆಚ್ಚನೆ ನೀರಿನಲ್ಲಿ ತೊಳೆಯುತ್ತಾ ಬಂದಲ್ಲಿ ತ್ವಚೆಯ ಬಣ್ಣ ಬಿಳಿಯಾಗುವುದರ ಜೊತೆಗೆ ಮೃದು ಮತ್ತು ಕೋಮಲ ತ್ವಚೆಯ ಒಡತಿಯ ರಾಗುವುದರಲ್ಲಿ ಸಂಶಯವೇ ಇಲ್ಲ.

source: acdn.newshunt.com

ಪಪ್ಪಾಯಿ
ಹಣ್ಣಾದ ಪಪ್ಪಾಯಿ ಹಣ್ಣಿನ ಹೋಳನ್ನು ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಒಣಗಿದ ನಂತರ ತೊಳೆದುಕೊಳ್ಳಿ. ಅಥವಾ ಪಪ್ಪಾಯಿ ತಿರುಳಿಗೆ ಕೊಂಚ ಹಾಲು, ನಿಂಬೆರಸ ಬೆರೆಸಿ ಮುಖಕ್ಕೆ ಪ್ಯಾಕ್ ತರಹ ಹಚ್ಚಿ ಒಣಗಿದ ನಂತರ ಮುಖ ತೊಳೆಯುತ್ತಾ ಬಂದಲ್ಲಿ ಸುಕ್ಕುಗಟ್ಟಿದ ಚರ್ಮಕ್ಕೆ ಚೈತನ್ಯ ದೊರಕಿ ಮುಖದ ಅಂದ ಹೆಚ್ಚಾಗುತ್ತದೆ. ನೆರಿಗೆ, ಸುಕ್ಕು ಮಾಯವಾಗುತ್ತದೆ.

source: misremedios.com

ಟೊಮೆಟೊ
ಟೊಮೆಟೊದಲ್ಲಿರುವ ಹುಳಿ ಅಂಶ ಬ್ಲೀಚ್‍ನಂತೆ ಕೆಲಸ ಮಾಡುತ್ತದೆ. ಕಾರಣ ಹಣ್ಣಾದ ಟೊಮೆಟೊ ಕತ್ತರಿಸಿ ಒಂದು ಬಿಲ್ಲೆಯಿಂದ ಮುಖ ಮತ್ತು ಕೈ, ಕಾಲುಗಳಿಗೆ ಹಗುರವಾಗಿ ಮಸಾಜ್ ಮಾಡಿ. ಒಣಗಿದ ನಂತರ ತೊಳೆಯುತ್ತಾ ಬಂದಲ್ಲಿ ಕಪ್ಪಾದ ಚರ್ಮ ಬೆಳ್ಳಗಾಗುತ್ತದೆ.

source: 2.bp.blogspot.com

ತಾಜಾ ಕೆನೆ
ಹಾಲಿನ ಮೇಲೆ ಬರುವ ತಾಜಾ ಕೆನೆಯನ್ನು ಪ್ರತಿದಿನ ಅರ್ಧ ಚಮಚ ಸೇವಿಸುತ್ತ ಬಂದಲ್ಲಿ ಚರ್ಮ ನಯವಾಗುವುದರ ಜೊತೆಗೆ ಮುಖದ ಕಾಂತಿ ಹೆಚ್ಚಾಗುತ್ತದೆ. ಜೊತೆಗೆ ಕೆನೆಯೊಂದಿಗೆ ಒಂದೆರಡು ಹನಿ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳೆಯುತ್ತಾ ಬಂದಲ್ಲಿ ಮುಖಕ್ಕೆ ತಕ್ಷಣ ಹೊಳಪು ನೀಡುತ್ತದೆ.

source: BollywoodShaadis.com

ಕಪ್ಪು ವರ್ತುಲ
ನಿದ್ರಾಹೀನತೆಯಿಂದ, ಹೆಚ್ಚು ಕಂಪ್ಯೂಟರ್ ಕೆಲಸ ಮಾಡುವುದರಿಂದ ಕಣ್ಣ ಕೆಳಗೆ ಕಪ್ಪು ವರ್ತುಲ ಸಾಮಾನ್ಯ. ಇದಕ್ಕೆ ಕಣ್ತುಂಬ ನಿದ್ರೆ ಅತ್ಯಗತ್ಯ. ಜೊತೆಗೆ ಕಣ್ಣಿಗೆ ಅರ್ಧ ಗಂಟೆಗೊಮ್ಮೆ ವಿಶ್ರಾಂತಿ ನೀಡುವುದು ತುಂಬಾ ಅವಶ್ಯ. ಇದರೊಂದಿಗೆ ಫ್ರಿಜ್‍ನಲ್ಲಿಟ್ಟ ರೋಸ್‍ವಾಟರ್ ಅನ್ನು ಹತ್ತಿಯಲ್ಲಿ ಅದ್ದಿ ಕಣ್ಣ ಮೇಲಿರಿಸಿ 20 ನಿಮಿಷ ವಿರಮಿಸಿ.

source: s3.india.com

ಸೌತೆಕಾಯಿ ಬಿಲ್ಲೆ, ಕ್ಯಾರೆಟ್ ತುರಿ ಅಥವಾ ಆಲೂ ತುರಿ ಕಣ್ಣ ಮೇಲಿರಿಸಿ ವಿರಮಿಸುವುದರಿಂದಲೂ ಕಣ್ಣ ಕೆಳಗಿನ ಕಪ್ಪು ವರ್ತುಲ ತಿಳಿಯಾಗುತ್ತದೆ. ಕಣ್ಣಿಗೆ ವಿಶ್ರಾಂತಿ ದೊರಕಿ ನೇತ್ರಜ್ಯೋತಿ ಚುರುಕಾಗುವುದರಿಂದ ಕಣ್ಣಿನ ಹೊಳಪೂ ಹೆಚ್ಚುತ್ತದೆ.