ರಾಜ್ಯದಲ್ಲಿ ಕುಡುಕರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಖುಷಿ ಪಡುವುದನ್ನು ಬಿಟ್ಟು, ಇದರ ಕಾರಣ ಕಂಡು ಹಿಡಿದು ಮತ್ತೆ ಸಂಖ್ಯೆ ಏರಿಸಲು ಹೊರಟಿದ್ಯಾ ಘನ ಸರ್ಕಾರ??

0
256

ರಾಜ್ಯದಲ್ಲಿ ಮಾರಾಟವಾಗುವ ಸರಾಯಿಗೂ ಸರ್ಕಾರದ ಆದಾಯಕ್ಕೂ ದೊಡ್ಡ ಸಂಬಂಧವಿದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರ ಕೈಯಲ್ಲಿ ಹಣ ವಿಲ್ಲದ ಕಾರಣ ಮತ್ತು ಆರೋಗ್ಯದ ದೃಷ್ಟಿಯಿಂದ ಕುಡಿತ ಕಡಿಮೆ ಮಾಡಿದ್ದಾರೆ. ಎನ್ನುವುದು ಬಹುತೇಕ ಕುಟುಂಬಗಳ ಸಂತಸವಾದರೆ ಸರ್ಕಾರಕ್ಕೆ ಮಾತ್ರ ದೊಡ್ಡ ಸಂಕಷ್ಟ ಎದುರಾಗಿದೆ ಅಂತೆ. ಅದಕ್ಕಾಗಿ ಆದಾಯ ಕೈ ತಪ್ಪಿ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಬಕಾರಿ ಇಲಾಖೆ, ಆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯದ ಎಲ್ಲ ಅಬಕಾರಿ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಸೂಚನೆ ನೀಡಿದೆ ಅಂತೆ.

Also read: ಮೈತ್ರಿ ತೊರೆದು ಸಿದ್ದರಾಮಯ್ಯನವರ ಹೃದಯ ಒಡೆದ ರಮೇಶ್ ಈಗ ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಸಿದ್ದರಾಮಯ್ಯ ಬೇಟಿ ಮಾಡಿ ಹೇಳಿದ್ದೇನು??

ಹೌದು ರಾಜ್ಯದಲ್ಲಿ ಬಿಯರ್‌‌‌ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದ್ದು, ಆ ಕುರಿತು ಅಧ್ಯಯನ ನಡೆಸಿ ಮೂರು ದಿವಸದೊಳಗೆ ವರದಿ ಸಲ್ಲಿಸಲು ರಾಜ್ಯದ ಎಲ್ಲಅಬಕಾರಿ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ಕುರಿತು ಸುತೋಲೆ ಹೊರಡಿಸಿರುವ ಆಯುಕ್ತರು, ಈ ವರ್ಷ ನೀರಿಕ್ಷಿತ 20,950 ಕೋಟಿ ಆದಾಯದ ಗುರಿ ತಲುಪಲು ಸಾಧ್ಯವಿಲ್ಲ ಇದಕ್ಕೆ ಕಾರಣ ಬಿಯರ್‌ ಹೆಚ್ಚು ಮಾರಾಟವಾಗಬೇಕು ಅಂತ ಹೇಳಿದ್ದಾರೆ. 2019-20ನೇ ಸಾಲಿನ ಇದೇ ಅವಧಿಗೆ ರಾಜ್ಯದಲ್ಲಿ 192.67 ಲಕ್ಷ ಪೆಟ್ಟಿಗೆ ಮಾರಾಟವಾಗಿದ್ದು, 2018-19ನೇ ಸಾಲಿನ ಏಪ್ರಿಲ್‌ನಿಂದ ನವೆಂಬರ್‌-2018ವರೆಗಿನ ಅವಧಿಯಲ್ಲಿ ಜ್ಯಾದ್ಯಂತ ಮಾರಾಟವಾದ ಬಿಯರ್‌ ಪ್ರಮಾಣ 192.08 ಲಕ್ಷ ಪೆಟ್ಟಿಗೆ ಮಾರಾಟವಾಗಿದೆ. ಅದಕ್ಕಾಗಿ ಕೂಡಲೇ ತನಿಖೆಗೆ ಅದೇಶಿಸಿದೆ.

Also read: 5 ಲಕ್ಷ ರೈತರಿಗೆ 786 ಕೋಟಿ ರೂ. ಬೆಳೆ ಪರಿಹಾರ ವಿತರಣೆ ಆಗಿದೆ ಎನ್ನುತ್ತಿರುವ ಸರ್ಕಾರ; ಬಿಡಿಗಾಸು ಸಿಕ್ಕಿಲ್ಲ ಎನ್ನುತ್ತಿರುವ ಅನ್ನದಾತ, ಎಲ್ಲೋಯ್ತು ಹಣ??

ಸುತೋಲೆಯಲ್ಲೇನಿದೆ?:

2018-19ನೇ ಸಾಲಿನ ಏಪ್ರಿಲ್‌ನಿಂದ ನವೆಂಬರ್‌-2018ವರೆಗಿನ ಅವಧಿಯಲ್ಲಿರಾಜ್ಯಾದ್ಯಂತ ಮಾರಾಟವಾದ ಬಿಯರ್‌ ಪ್ರಮಾಣ 192.08 ಲಕ್ಷ ಪೆಟ್ಟಿಗೆಗಳು, 2019-20ನೇ ಸಾಲಿನ ಇದೇ ಅವಧಿಗೆ ರಾಜ್ಯದಲ್ಲಿ ಮಾರಾಟವಾದ ಬಿಯರ್‌ ಪ್ರಮಾಣ 192.67 ಲಕ್ಷ ಪೆಟ್ಟಿಗೆಗಳಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭೌತಿಕ ವ್ಯತ್ಯಾಸ ಕೇವಲ 0.58 ಲಕ್ಷ ಪೆಟ್ಟಿಗೆಗಳಾಗಿದ್ದು, ಶೇಕಡಾವಾರು ಬೆಳವಣಿಗೆ ಹೆಚ್ಚಳ ಶೇ.0.30ರಷ್ಟು ಮಾತ್ರ. ಮದ್ಯ ಮಾರಾಟದ ಶೇಕಡಾವಾರುಗೆ ಹೋಲಿಸಿದರೆ ಇದು ತೀರಾ ಕಡಿಮೆ.

Also read: ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ; ಅದಕ್ಕಾಗಿ ಲಾಬಿ ಮಾಡುವ ಅವಶ್ಯಕತೆಯೂ, ನನಗಿಲ್ಲ ಡಿ.ಕೆ.ಶಿವಕುಮಾರ್ ಸ್ಪಷ್ಟನೆ.!

ತಮ್ಮ ಕಾರ‍್ಯವ್ಯಾಪ್ತಿಯಲ್ಲಿರುವ ಬಿಯರ್‌ ಮಾರಾಟದ ಪ್ರಮಾಣ ಮತ್ತು ಶೇಕಡಾವಾರು ಬೆಳವಣಿಗೆ ಕುಂಠಿತಗೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮಾರಾಟ ಕಡಿಮೆಯಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಿ, ಕೂಲಂಕಷವಾಗಿ ವಿಶ್ಲೇಷಿಸಿ ಗುರಿ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಅಬಕಾರಿ ಆಯುಕ್ತರು ರಾಜ್ಯದ ಎಲ್ಲ ವಿಭಾಗಗಳ ಅಬಕಾರಿ ಜಂಟಿ ಆಯುಕ್ತರಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.ಈ ವರದಿ ಹಾಸ್ಯಾಸ್ಪದವಾಗಿದ್ದು, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಸೇಲ್ ಆಗುವುದು ಹೇಗೆ ಎಂದು ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ ಅವರು ಟಾಂಗ್ ಕೊಟ್ಟಿದ್ದಾರೆ.

ಅಬಕಾರಿ ಇಲಾಖೆ ಬೇರೆ ಮದ್ಯ ಪೂರೈಕೆ ಮಾಡುತ್ತದೆ. ಏಕೆಂದರೆ ಆದಾಯದ ಪ್ರಮಾಣ ಹೆಚ್ಚಾಗಿರುತ್ತೆ. ಬಿಯರ್ ಸೇಲ್‍ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ. ಹೀಗಾಗಿ ಪೂರೈಕೆ ಕಡಿಮೆ ಮಾಡಿದೆ. ನಾವು ಬಿಯರ್ ಪೂರೈಕೆಗೆ ದುಂಬಾಲು ಬಿದರೂ ಕಳುಹಿಸುತ್ತಿರಲಿಲ್ಲ ಎಂದು ಬಾರ್ ಮಾಲೀಕರು ಹೇಳಿದ್ದಾರೆ. ಒಟ್ಟಾರೆಯಾಗಿ ನೋಡಿದರೆ ಸರ್ಕಾರ ಕುಡಿಯಲು ಎಣ್ಣೆ ಕೊಡುವುದು ಅದೇ, ಕುಡಿದು ಅರೋಗ್ಯ ಹಾಳಾದ ಮೇಲೆ ಹಲವು ಅರೋಗ್ಯ ಯೋಜನೆ ಮೂಲಕ ಚಿಕಿತ್ಸೆ ಕೊಡಿಸುವುದು ಸರ್ಕಾರವೇ. ಇದೆಲ್ಲ ನೋಡಿದರೆ ಅಮಾಯಕ ಜನರನ್ನು ಹೇಗೆ ಬೇಕೋ ಹಾಗೇ ಇಟ್ಟುಕೊಂಡು ಸರ್ಕಾರ ಮಾತ್ರ ಆದಾಯ ಲೆಕ್ಕ ಹಾಕುತ್ತಿದೆ.