ಟ್ವಿಟ್ಟರ್​ನಲ್ಲಿ ಇನ್ಮುಂದೆ ಅಸಭ್ಯ ಮತ್ತು ಅವಾಚ್ಯ, ನಿಂದನೆಯ ಪೋಸ್ಟ್​ಗಳನ್ನು ಹಾಕಿವ ಮುನ್ನ ಎಚ್ಚರ; ಬೀದಿಯಲ್ಲಿ ಹರಾಜ್ ಆಗುತ್ತೆ ಮಾನ..

0
634

ಟ್ವಿಟ್ಟರ್’ನಲ್ಲಿ ಬರವಣಿಗೆಗೆ ಸಂಬಂಧಪಟ್ಟಂತೆ ವಿವಾದಗಳು ಕೇಳಿಬರುತ್ತಾನೆ ಇವೆ ಇವೆಲ್ಲದಕ್ಕೂ ಹೇದರದ ಕೆಲವೊಂದು ಜನರು ಪ್ರತಿದಿನವೂ ಒಂದಿಲ್ಲ ಒಂದು ಸಂದೇಶವನ್ನು ಬರೆದು ಇಲ್ಲ ಅಸಭ್ಯ ಬರವಣಿಗೆ ಮಾಡಿ ಇಲ್ಲ ಗಣ್ಯರ ಫೋಟೋ ಇಲ್ಲ ಮಾಹಿತಿಗೆ ವಿರೋಧವಾಗಿ ಮಾಡುವ ಪೋಸ್ಟ್’ಗಳಿಗೆ ಇನ್ಮುಂದೆ ಹಿಂದೆ ಇದ ಶಿಕ್ಷೆಗಿಂತ ಬಾರಿ ಬೆಲೆಯ ಶಿಕ್ಷೆಯೊಂದು ನೀಡಲು ಟ್ವಿಟ್ಟರ್​ ನಿರ್ಧರಿಸಿದೆ. ಅದನ್ನು ಪ್ರತಿಯೊಬ್ಬರೂ ನೋಡಲೇಬೇಕು.


Also read: ಬೆಂಗಳೂರಿನಲ್ಲಿದೆ ಆಕಾಶದಲ್ಲಿ ತೇಲುವ ರೆಸ್ಟೋರೆಂಟ್; ಇನ್ಮುಂದೆ ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಗೆ ದುಬೈಗೆ, ಸಿಂಗಪೂರ್​ಗೆ ಹೋಗಬೇಕಿಲ್ಲ..

ಹೌದು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಮನ ಬಂದಂತೆ ಬರೆಯುವ ಹುಚ್ಚು ನಿಮಗಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಲೇಬೇಕು. ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಇನ್ನು ಮುಂದೆ ಅಸಭ್ಯ ಪೋಸ್ಟ್​ಗಳನ್ನು ಹಾಕಿದರೆ ಮತ್ತು ಅಸಭ್ಯ, ಅವಾಚ್ಯ, ನಿಂದನೆಯ ಪೋಸ್ಟ್​ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವತ್ತ ಚಿಂತನೆ ನಡೆಸಿರುವ ಟ್ವಿಟ್ಟರ್​ ಹಳೆಯ ಪದ್ದತಿಯನ್ನು ಬದಲಾಯಿಸಿ. ಟ್ವಿಟ್ಟರ್​ನಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್​ ಮಾಡಿದವರ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕಲು ಟ್ವಿಟ್ಟರ್​ ನಿರ್ಧರಿಸಿದೆ.

Also read: ರಾಜಕೀಯ ಲಾಭಕ್ಕಾಗಿ ಯೋಧರನ್ನು ಬಳಸಿಕೊಳ್ಳುತ್ತಿದೆ ಕಮಲ; ನಾಚಿಕೆ ಬಿಟ್ಟು ಸರ್ಜಿಕಲ್ ಸ್ಟ್ರೈಕ್ ದಿನವನ್ನು ಆಚರಿಸಿದ ಬಿಜೆಪಿ..!

ಇದೆಲ್ಲವೂ ಕಂಡು ಬರುತ್ತಿರುವುದು ಜನರು ಹೆಚ್ಚು ಹೆಚ್ಚು ಇಂಟರ್ನೆಟ್ ಬಳಕೆಯಲ್ಲಿ ಮಂಗರಾಗಿ ತಾವು ಮಾಡುವ ಪೋಸ್ಟ್ ಎಷ್ಟರ ಮಟ್ಟಿಗೆಯಿದೆ ಎಂಬುವುದನ್ನು ಪರೀಕ್ಷಿಸದೆ ಮನಬಂದಂತೆ ಕಾಮೆಂಟ್ ಮಾಡುತ್ತಾರೆ ಇವರೆಲ್ಲರಿಗೆ ಎಷ್ಟೇ ಕೇಸ್ ದಾಖಲುಮಾಡಿರು ಮತ್ತೆ ಮತ್ತೆ ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಉದಾಹರಣಗೆ ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾ ನಟಿ ರಮ್ಯಾ ನರೇಂದ್ರ ಮೋದಿ ಚೋರ್ ಅಂತ ಪೋಸ್ಟ್ ಮಾಡಿದರ ಹಿಂದೆ ಕೇಸ್ ನಡೆಯುತ್ತಿದೆ. ಇದು ಒಂದೇ ಅಲ್ಲ ಪ್ರತಿನಿತ್ಯವೂ ಕಂಡು ಬರುವ ವಿವಾದಕ್ಕೆ ಬೇಸತ ಟ್ವಿಟ್ಟರ್ ಮಂಡಳಿ ಇಂತಹ ಹೊಸ ಶಿಕ್ಷೆಯನ್ನು ತಂದಿದೆ.


Also read: ಇನ್ಮುಂದೆ ಕ್ಯಾನ್ಸರ್ ಚಿಕ್ಸಿತೆಗೆ ಹಣದ ಚಿಂತೆ ಬಿಡಿ; ಕೇವಲ 7 ರೂ ಪಾವತಿಸಿ 50 ಲಕ್ಷದವರೆಗೆ ವಿಮಾ ಪಡೆಯರಿ, ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ ..

ಏನದು ಶಿಕ್ಷೆ?

ಯಾವುದೇ ಟ್ವಿಟ್ಟರ್​ ಬಳಕೆದಾರ ಹಾಕಿದ ಟ್ವೀಟ್​ನಲ್ಲಿ ಅವಹೇಳನಾಕಾರಿ ಅಂಶವಿದ್ದರೆ ಅದನ್ನು ವರದಿ ಮಾಡಬಹುದು. ಒಂದು ಟ್ವೀಟ್​ ವಿರುದ್ಧ ವರದಿಗಳು ಬಂದಾಗ ಟ್ವಿಟ್ಟರ್​ ಅದನ್ನು ಪರಿಶೀಲಿಸುತ್ತದೆ. ಅದು ಅವಹೇಳನಾಕಾರಿ ಎಂದು ತಿಳಿದು ಬಂದರೆ ಆ ಟ್ವೀಟನ್ನು ಟ್ವಿಟ್ಟರ್​ ತೆಗೆದು ಹಾಕುತ್ತದೆ. ಜತೆಗೆ “ಈ ಟ್ವಿಟ್ಟರ್​ ಬಳಕೆದಾರ ಅಸಭ್ಯ ಪೋಸ್ಟ್​ ಹಾಕಿದ್ದರು, ಅದಕ್ಕಾಗಿ ತೆಗೆದು ಹಾಕಲಾಗಿದೆ,” ಎಂದು ಬಳಕೆದಾರನ ಖಾತೆಯಲ್ಲಿ ಕಾಣಿಸಲಿದೆ. ಈ ಹಿಂದೆ ಟ್ವಿಟ್ಟರ್​ ಕಡಿವಾಣ ಹಾಕುವಲ್ಲಿ ಸೋತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಟ್ವಿಟ್ಟರ್​ ಈಗ ಹೊಸ ಪಾಲಿಸಿ ತಂದಿದೆ ಎಂದು ಟ್ವಿಟ್ಟರ್​ ಮುಖ್ಯಸ್ಥ ಜ್ಯಾಕ್​ ಡೊರ್ಸೆ ಹೇಳಿದ್ದಾರೆ.
ಒಟ್ಟಾರೆಯಾಗಿ; ಸುಳ್ಳು ಸುದ್ದಿಗಳು, ದ್ವೇಷ ಭಾಷಣ, ಕೋಮು ಸೌಹಾರ್ದತೆ ಕದಡುವ ಯತ್ನಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಈ ಎಲ್ಲಾ ಯೋಚನೆ ಟ್ವಿಟ್ಟರ್​ ಬಳಕೆದಾರರ ಸುರಕ್ಷತೆಗಾಗಿ ಮತ್ತು ಅಸಭ್ಯ ವರ್ತನೆಗಳನ್ನು ತಡೆಗಟ್ಟಲು ಟ್ವಿಟ್ಟರ್​ ತೆಗೆದುಕೊಂಡ ಒಳ್ಳೆಯ ಹಿಡಿತವಾಗಿದೆ.