Faceapp​- ಬಳಸುವ ಮುನ್ನ ಎಚ್ಚರ; ಕೇವಲ ಟೈಮ್-ಪಾಸ್ ಮಾಡಲು ಹೋಗಿ ನಿಮ್ಮ ವೈಯಕ್ತಿಕ ವಿಚಾರವನ್ನು ಬಹಿರಂಗಪಡಿಸಿಕೊಳ್ಳಬೇಡಿ..

0
595

ಈ ಕಾಲವೇ ಹೀಗಿದೆ ಒಂದು ಯಾವುದೊ ಸಾಮಾಜಿಕ ಜಾಲತಾಣದಲ್ಲಿ app ಬಳಕೆಯ ಬಗ್ಗೆ ತಿಳಿದರೆ ರಾತ್ರೋರಾತ್ರಿ ಅದು ಪೇಮಸ್ ಆಗುತ್ತೆ. ಈಗಾಗಲೇ facebook, whatsapp, ಅಂತಹ app-ಗಳು ಹೆಚ್ಚು ಮೆಚ್ಚುಗೆ ಪಡೆದಿದ್ದು ಜನರು ಅವುಗಳೇ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಅದರಂತೆ ಕೆಲವು ದಿನಗಳ ಹಿಂದೆ ಬಂದ tiktok app ಕೂಡ ಪೇಮಸ್ ಆಗಿ ಈಗಾಗಲೇ ಹಲವರನ್ನು ಬಲಿ ತೆಗೆದುಕೊಂಡಿದೆ. ಅದರಂತೆ ಮತ್ತೆ ಮಿಂಚ್ಚುತ್ತಿರುವ faceapp ರಾತ್ರೋರಾತ್ರಿ ಜನರಿಂದ ಸದ್ದು ಮಾಡಿದ್ದು ಜನರು ಮುಂಗಡವಾಗಿ ತಾವು ವಯಸ್ಸಾದವರಂತೆ ಕಾಣುತ್ತಿದ್ದಾರೆ. ಇದೆ ಹುಚ್ಚಲಿರುವ ಜನರಿಗೆ ಆಘಾತ ತರುವ ಸುದ್ದಿಯೊಂದು ಕೇಳಿಬಂದಿದ್ದು. ಜೊತೆಗೆ ಕಂಪನಿ ಖಾಸಗಿ ನಿಯಮಗಳು ನಿಮ್ಮ ಫೋಟೊ ಹಾಗೂ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಅನುಮತಿಯನ್ನು ಪಡೆಯುವುದರಿಂದ ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುತ್ತೆ ಎನ್ನುವ ಚರ್ಚೆಗಳು ನಡೆಯುತ್ತಿದ್ದೆ.

ಹೌದು ಫೇಸ್ ಆಪ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೇಸ್ ಬುಕ್ ನ ನ್ಯೂಸ್ ಫೀಡ್ ತುಂಬಾ ಫೇಸ್ ಆಪ್ ಚಿತ್ರಗಳೇ ತುಂಬಿ ಹೋಗಿದೆ. ವಾಸ್ತವದಲ್ಲಿ ಈ ಆಪ್ ಹೊಸದಾಗಿ ಲಾಂಚ್ ಆಗಿದ್ದೇನೂ ಅಲ್ಲ. ಇದು ಹಳೆಯ ಆಪ್. ಆದರೆ ನಿನ್ನೆಯಿಂದ ವೈರಲ್ ಆಗಿದೆ. ಕ್ರಿಕೆಟ್ ಆಟಗಾರರು, ಬಾಲಿವುಡ್ ನಟರು ಹಾಗೂ ಇನ್ನಿತರ ಸೆಲೆಬ್ರಿಟಿಗಳು ತಮ್ಮ ಫೋಟೋ ಗಳನ್ನು ವೃದ್ಧಾಪ್ಯದಲ್ಲಿ ಯಾವ ರೀತಿ ಕಾಣುತ್ತೆ ಅಂತ ಫೇಸ್ ಆಪ್ ನಲ್ಲಿ ಎಡಿಟ್ ಮಾಡಿ ಹಾಕಿದ್ದಾರೆ. ವಾಸ್ತವಕ್ಕೆ ತುಂಬಾ ಹತ್ತಿರವಾಗಿ ಕಾಣುವ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈ ಆಪ್ ಬಳಕೆ ದಾರರನ್ನು ಹೆಚ್ಚಿಸಿದೆ.

FaceApp ಬಳಸಿ ಫೋಟೋ ಮೇಲೆ ಬೇರೆ ಬೇರೆ ರೀತಿಯ ಎಫೆಕ್ಟ್ ಗಳನ್ನು ಸೃಷ್ಟಿಸಬಹುದು. ಇದು ಮೊಬೈಲ್ ಬಳಸುವ ಯುವಕ-ಯುವತಿಯರಿಗೆ ಬಿಡಿ, ಅಜ್ಜ-ಅಜ್ಜಿಯಂದರಿಗೂ ಹುಚ್ಚೆಬ್ಬಿಸಿದೆ. ಭೂತಕಾಲದಲ್ಲಿ ನಾವು ಹೇಗಿದ್ದೆವು, ಭವಿಷ್ಯದಲ್ಲಿ ಹೇಗೆ ಕಾಣ್ತೇವೆ ಎಂದು ನೊಡುವ ಕುತೂಹಲ ಎಲ್ಲರಿಗೆ. ಹಾಗಾಗಿ ಎಲ್ಲರಿಗೂ FaceApp ಹೊಸ ಕ್ರೇಜ್ ಹುಟ್ಟುಹಾಕಿದೆ. ಕೆಲವೇ ಕೆಲ ದಿನಗಳಲ್ಲಿ ರಷ್ಯಾದ ಈ ಆ್ಯಪ್ ನೂರಾರು ಮಿಲಿಯನ್ ಸಂಖ್ಯೆಯಲ್ಲಿ ಇನ್ಸ್ಟಾಲ್ ಆಗಿದೆ. ಆ ಮೂಲಕ ನೂರಾರು ಮಿಲಿಯನ್ ಬಳಕೆದಾರರ ಹೆಸರು, ಭಾವಚಿತ್ರಗಳನ್ನು FaceApp ಈಗಾಗಲೇ ಸಂಗ್ರಹಿಸಿದೆ. ಈ ಅಪ್ಲಿಕೇಶನ್ ಅನ್ನು 2017 ರಲ್ಲಿ ಪ್ರಾರಂಭಿಸಲಾಗಿದೆ. ಆದರೆ ಇದನ್ನು ಬಳಸುವುದರಿಂದ ನಿಮ್ಮ ಪ್ರೈವೆಸಿಗೆ ಅಪಾಯವಿದೆಯೇ? ಇದು ನಿಮ್ಮ ಫೋಟೋ ಲೈಬ್ರರಿಗೆ ಸಂಪೂರ್ಣ ಪ್ರವೇಶವನ್ನು ತೆಗೆದುಕೊಳ್ಳುತ್ತದೆಯೇ? ಇಂತಹ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಉದ್ಬವಿಸಿದೆ.

ಫೇಸ್ ಆಪ್ ಪ್ರೈವಸಿ ಪಾಲಿಸಿಯ ಪ್ರಕಾರ, ನೀವು ನಮ್ಮ ಸೇವೆಯನ್ನು ಬಳಸಿದಾಗಲೆಲ್ಲಾ, ನಮ್ಮ ಸೇವೆಯು ಕೆಲವು ಲಾಗ್ ಫೈಲ್ ಮಾಹಿತಿಯನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ. ಇದು ನಿಮ್ಮ ವೆಬ್ ವಿನಂತಿ, ಐಪಿ ವಿಳಾಸ, ಬ್ರೌಸರ್ ಪ್ರಕಾರ, URL ಮತ್ತು ಈ ಸೇವೆಯೊಂದಿಗೆ ನೀವು ಎಷ್ಟು ಬಾರಿ ಸಂವಹನ ನಡೆಸುತ್ತೀರಿ ಎಂಬ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. ಕಂಪನಿಯು ತನ್ನ ಬಳಕೆದಾರರ ಡೇಟಾವನ್ನು ಅವರ ಅನುಮತಿಯಿಲ್ಲದೆ ಯಾರಿಗೂ ಮಾರಾಟ ಮಾಡುವುದಿಲ್ಲ ಮತ್ತು ಅದನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಪ್ರೈವಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ನಿಮ್ಮ ಡೇಟಾವನ್ನು ಫೇಸ್ ಅಪ್ಲಿಕೇಶನ್ ಗುಂಪಿನ ಕಂಪನಿಗಳಿಗೆ ನೀಡಬಹುದು. ಎನ್ನುವ ವಿಚಾರಗಳು ಹರಿದಾಡುತ್ತಿವೆ ಯಾವುದಕ್ಕೂ ಎಚ್ಚರವಹಿಸುವುದು ಒಳ್ಳೆಯದು.