ಈ ಭಿಕ್ಷುಕನಿಗೆ ತಿಂಗಳಿಗೆ 30 ಸಾವಿರ ಸಂಬಳ; ಮೂವರು ಮುದ್ದಿನ ಪತ್ನಿಯರು, ಕೇಳಿ ಶಾಕ್ ಆಗ್ತೀರಾ!!

0
753

ಹೆಡ್‘ಲೈನ್ ಓದಿ ಆಶ್ಚರ್ಯ ಆಯ್ತಾ..! ಶಾಕ್ ಆಗ್ಬೇಡಿ ಫ್ರೆಂಡ್ಸ್.. ಇನ್ಮುಂದೆ ಭಿಕ್ಷುಕರನ್ನು ಭಿಕ್ಷುಕ ಅಂತ ಕೀಳಾಗಿ ನೋಡ್ಬೇಡಿ..ಕಾರಣ ಯಾವ ಐಟಿ-ಬಿಟಿ ಉದ್ಯೋಗಸ್ಥರಿಗೂ ಕಡಿಮೆ ಇಲ್ಲದಂತೆ ಕೇವಲ ಭಿಕ್ಷಾಟನೆಯಿಂದಲೇ ತ್ಂಗಳಿಗೆ ಸಾವಿರಾರು ರಬಪಾಯಿ ಆದಾಯ ಗಳಿಸುತ್ತಿದ್ದಾರೆ. ಹೌದು..ಜಾರ್ಖಂಡ್‘ನಲ್ಲಿ ಓರ್ವ ಭಿಕ್ಷುಕ ಕೇವಲ ಭಿಕ್ಷಾಟನೆಯಿಂದಲೇ ತಿಂಗಳಿಗೆ ಬರೊಬ್ಬರಿ 30 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಾನೆ. ಅಲ್ಲದೇ ಈತನಿಗೆ ಮೂವರು ಪತ್ನಿಯರಿದ್ದಾರೆ.

ಈತನ ಹೆಸರು ಚೋಟು ಬೈರಕ್..ಈತ ಜಾರ್ಖಂಡ್‘ನ ಚಕ್ರಧರ್ ಪುರ್ ರೈಲ್ವೇ ನಿಲ್ದಾಣದಲ್ಲಿ ಭಿಕ್ಷಾಟನೆ ಮೂಲಕ ಹಣ ಸಂಪಾದಿಸಿ ತನ್ನ ಜೀವನ ನಡೆಸುತ್ತಿದ್ದಾನೆ. ಇಷ್ಟೇ ಆಗಿದ್ದರೆ ಈತ ಇಷ್ಟು ಸುದ್ದಿಗೆ ಗ್ರಾಸವಾಗುತ್ತಿರಲಿಲ್ಲ. ಆದರೆ ಈತನ ಮಾಸಿಕ ಆದಾಯ ಮತ್ತು ಈತನ ವೈಯುಕ್ತಿಕ ಜೀವನ ಇದೀಗ ಈತನನ್ನು ಸುದ್ದಿಗೆ ಗ್ರಾಸವಾಗುವಂತೆ ಮಾಡಿದೆ.
ಚೋಟು ಬೈರಕ್‘ನ ಮಾಸಿಕ ಆದಾಯ 30 ಸಾವಿರ ರೂ.. ಅರೆ ದೊಡ್ಡ ದೊಡ್ಡ ನಗರಗಳಲ್ಲಿ ಸೂಟು-ಬೂಟು ಹಾಕಿಕೊಂಡು ದುಡಿಯುವವರಿಗೂ ಇಷ್ಟು ವೇತನವಿಲ್ಲ..ಈತ ಕೇವಲ ಭಿಕ್ಷಾಟನೆಯಿಂದಲೇ ಇಷ್ಟು ಹಣ ಸಂಪಾದಿಸುತ್ತಾನೆಯೇ ಎಂದು ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

ಆದರೆ ಈತನ ಉದ್ಯೋಗ ಕೇವಲ ಭಿಕ್ಷಾಟನೆಗೇ ನಿಂತಿಲ್ಲ. ಬದಲಿಗೆ ಈತ ಭಿಕ್ಷಾಟನೆಯಲ್ಲದೇ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡಿದ್ದು, ಈತನಿಗೊಂದು ಪಾತ್ರೆ ಅಂಗಡಿ ಕೂಡ ಇದೆ. ಅಲ್ಲದೆ ವೆಸ್ಟಿಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆ. ಚೋಟುಗೆ ಈಗ 40 ವರ್ಷ. ಬಡ ಕುಟುಂಬದಲ್ಲಿ ಜನಿಸಿದ ಈತನಿಗೆ ಹುಟ್ಟಿನಿಂದಲೇ ಸೊಂಟದ ಭಾಗದಲ್ಲಿ ಸಾಮರ್ಥ್ಯವಿಲ್ಲ. ಆದ್ದರಿಂದ ಸಣ್ಣವನಿರುವಾಗಿನಿಂದಲೇ ಭಿಕ್ಷೆ ಬೇಡುವುದು ಅಭ್ಯಾಸವಾಗಿ ಹೋಗಿದೆಯಂತೆ. ಆಗೆಲ್ಲ ಏನಿಲ್ಲ ಎಂದರೂ ಮಾಸಿಕ 1000 ರಿಂದ 1500 ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ ಎಂದರೂ ಭಿಕ್ಷಾಟನೆಯಿಂದಲೇ ರೂ. 4 ಲಕ್ಷ ಸಂಪಾದಿಸುತ್ತಾನಂತೆ. ತನ್ನ ಭಿಕ್ಷಾಟನೆಯಿಂದ ಸಂಪಾದಿಸಿದ ಆದಾಯದಿಂದ ಚೋಟು ಇದೀಗ ಪಾತ್ರೆ ಅಂಗಡಿ ತೆರೆದಿದ್ದಾನೆ.

ಇನ್ನು ಈ ಚೋಟು ಮೂವರು ಪತ್ನಿಯರ ಮುದ್ದಿನ ಪತಿಯಾಗಿದ್ದು, ಪ್ರತಿಯೊಬ್ಬ ಪತ್ನಿಗೂ ತಿಂಗಳಿಗೆ ಇಂತಿಷ್ಟು ಎಂದು ಹಣ ನೀಡುತ್ತಾನಂತೆ. ಮೂವರು ಪತ್ನಿಯರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರಂತೆ. ಇವನ ಒಬ್ಬ ಪತ್ನಿ ಪಾತ್ರೆ ಅಂಗಡಿ ಜವಾಬ್ದಾರಿ ನೋಡಿಕೊಳ್ಳುತ್ತಾಳೆ. ಇನ್ನಿಬ್ಬರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮನೆ ನೋಡಿಕೊಳ್ಳುತ್ತಾರೆ ಎಂದು ಚೋಟು ಹೇಳಿಕೊಂಡಿದ್ದಾನೆ.