ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಅನ್ನೋದಕ್ಕೆ ಇದೇ ಸಾಕ್ಷಿ, ಈತನಿಗೆ ಜೈಲಿನಲ್ಲಿದ್ದಾಗ ಬರೆದ ಕೃತಿಗೆ ಪ್ರಶಸ್ತಿ ಜೊತೆಗೆ 50 ಲಕ್ಷ ರುಪಾಯಿ ಬಹುಮಾನ ಬಂದಿದೆ!!

0
876

ಸಾಧಿಸುವ ಛಲ ವಿದ್ದರೆ ಯಾವುದು ಅಸಾದ್ಯವಲ್ಲ ಕೆಲವೊಬ್ಬರಿಗೆ ತಾವು ಏನಾದರು ಒಂದು ಸಾಧನೆ ಮಾಡಬೇಕು ಅನ್ನೋ ಹಂಬಲ ವಿರುತ್ತೆ ಆದರೆ ಮೂಲ ಸೌಕರ್ಯಗಳಿಲ್ಲವೆಂದು ಅದೆಷ್ಟೋ ಜನರು ಕುಂಟು ನೆಪದಲ್ಲಿ ಹವಾ ಸೃಷ್ಟಿಸಿಸುತ್ತಾರೆ. ಇದರಲ್ಲಿ ಕೆಲವೊಬ್ಬರು ಎಲ್ಲೇ ಇದ್ದರು ಹೇಗೆ ಇದ್ದರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ. ಇದರಂತೆ ಕೆಲವರು ಜೈಲಿನಲ್ಲಿ ಇದೆ ಏನೆಲ್ಲಾ ಸಾಧನೆ ಮಾಡಿದ್ದಾರೆ. ಕೆಲವರು ಚುನಾವಣೆಯಲ್ಲಿ ಗೆದ್ದರೆ ಇನ್ನೂ ಕೆಲವರು ಬರವಣಿಗೆಯಲ್ಲಿ ಮಿಂಚಿದ್ದಾರೆ. ಇದೆ ಸಾಲಿನಲ್ಲಿ ಬಂಧೀಖಾನೆಯಲ್ಲಿರುವ ವ್ಯಕ್ತಿ ಮೊಬೈಲ್ ನಲ್ಲಿ ಬರೆದು ಕಳುಹಿಸಿದ ಕೃತಿಗೆ ಸಾಹಿತ್ಯ ಪ್ರಶಸ್ತಿ ಪಡೆದುಕೊಂಡಿದೆ.

ಹೌದು, ‘ಬೆಹರೊಜ್ ಬೂಚಾನಿ’ ಎಂಬ ವ್ಯಕ್ತಿ ಇಂತಹದೊಂದು ಸಾಧನೆ ಮಾಡಿದ್ದಾನೆ. ಪಪುವಾ ನ್ಯೂಗಿನಿ ಎಂಬ ದ್ವೀಪ ಒಂದರಲ್ಲಿ ಬಂಧೀಖಾನೆಯಲ್ಲಿರುವ ಆತ ಸ್ಮಾರ್ಟ್‌ಪೊನಿನಲ್ಲಿ ಬರೆದು ವಾಟ್ಸ್ಆಪ್‌ನಲ್ಲಿ ಕಳಿಸಿದ ‘ನೋ ಫ್ರೇಂಡ್ಸ್ ಬಟ್‌ದ ಮೌಂಟೆನ್ಸ್’ ಎಂಬ ಕೃತಿ ಇದೀಗ ವಿಕ್ಟೋರಿಯನ್ ಸಾಹಿತ್ಯ ಪ್ರಶಸ್ತಿಯು 73,390 ಡಾಲರ್ ಬಹುಮಾನವನ್ನು ಪಡೆದು ಆಸ್ಟ್ರೇಲಿಯಾದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ.

ಇನ್ನು ಬಂಧಿಖಾನೆ ಸಾಹಿತ್ಯ ಪ್ರಶಸ್ತಿ ವಿಜೇತ:

ಬೆಹರೊಜ್ ಬೂಚಾನಿ’ ಬರೆದ ಕೃತಿ ಅಲ್ಲಿನ ಹೆಸರಾಂತ ಕೃತಿಯಾಗಿ ಸಾಹಿತ್ಯ ಪ್ರಶಸ್ತಿಯ ಗೆದ್ದರು ಅವರ ಲೇಖಕ ಮಾತ್ರ ಇನ್ನೂ ಬಂಧಿಖಾನೆಯಲ್ಲಿದ್ದಾನೆ. ಈ ಕೃತಿ 2019ರ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸಾಹಿತ್ಯ ಪ್ರಶಸ್ತಿಯ ವೀಜೇತರ ಹೆಸರನ್ನು ಜನೆವರಿ 31 ರಂದು ಘೋಷಿಸಲಾಗಿದ್ದು, ಇದರಲ್ಲಿ ಪ್ರಾಮುಖ್ಯ ಬೆಹರೊಜ್ ಬೂಚಾನಿ’ ಆತ ಬಂಧೀಖಾನೆಯಲ್ಲಿ ತಾನು ಸೇರಿದಂತೆ ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟಗಳನ್ನು, ಅಲ್ಲಿನ ವಾತಾವರಣವನ್ನು ಮತ್ತು ನೋವನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಈಗ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸಿಕ್ಕಿದರೂ ಸಹ ಆತ ದುಖದಲ್ಲಿ ಇದ್ದಾನೆ ಏಕೆಂದರೆ ಅಲ್ಲಿರುವ ಜನರ ಪರಿಸ್ಥಿತಿ ನನ್ನ ಗೆಲುವನ್ನು ಮರೆಮಾಚಿದೆ ಎಂದು ಹೇಳಿದ್ದಾರೆ.

ಈ ಕುರಿತು ಬೆಹರೊಜ್ ಹೇಳಿದ್ದು ಹೀಗೆ:

ಬಂಧೀಖಾನೆಯಲ್ಲಿ ನನ್ನ ಜೊತೆ ಸುಮಾರು ನೂರು ಜನ ನಿರಾಶ್ರಿತರಿದ್ದು, ನನ್ನ ಸುತ್ತಲಿರುವ ಈ ಮುಗ್ಧ ಜನರ ನೋವುಗಳನ್ನು ನೋಡುತ್ತಿದ್ದೆನೆ, ಹೀಗಾಗಿ ನನ್ನ ಕೃತಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಹೆಚ್ಚು ಸಂತಸ ವ್ಯಕ್ತಪಡಿಸಲು ಆಗದು ಎಂದು ಬೆಹರೊಜ್ ಬೂಚಾನಿ ಸಂದೇಶದ ಮೂಲಕ ತಿಳಿಸಿದ್ದಾನೆ. ಆದರೆ ನನ್ನನ್ನು ಬಂಧೀಮಾಡಿದ ದೇಶದಿಂದಲೇ ಪ್ರಶಸ್ತಿ ಪಡೆದಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾನೆ. ಆದರೆ ಅಷ್ಟೊಂದು ಹಿಂಸೆಯಲ್ಲಿ ಈ ಕೃತಿ ಹೇಗೆ ರಚಿಸಿದರು ಎನ್ನುವದು ಕೆಲವರಿಗೆ ನುಂಗಲಾರದ ತುತ್ತಾಗಿದೆ.

ಕೃತಿ ರಚನೆಯ ಹಿಂದಿರುವ ಸತ್ಯೆವೇನು?

ಬಂಧಿತರನ್ನು ಅಲುಗಾಡಲು ಬಿಡದ ಅಲ್ಲಿನ ವ್ಯವಸ್ಥಿತ ಬಂಧಿಖಾನೆಯಲ್ಲಿ ಬೆಹರೊಜ್ ಬೂಚಾನಿ ಗಾರ್ಡ್‌ಗಳಿಗೆ ಮರೆಮಾಡಿ ಮೊಬೈಲ್ ನಲ್ಲಿ ಕೃತಿ ಬರೆದು ಅದನ್ನು ಆಸ್ಟ್ರೇಲಿಯಾದ ಒಬ್ಬ ಅನುವಾದಕರಿಗೆ ವಾಟ್ಸ್‌ಆಪ್‌ ಮೂಲಕ ಕಳುಹಿಸಿಕೊಟ್ಟಿದ್ದರು. ಆರು ವರ್ಷದ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದಾಗ, ನಿರಾಶ್ರಿತರ ದೋಣಿ ವಶಪಡಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಾನುಸ್ ದ್ವೀಪ್ದಲ್ಲಿ ಬೂಚಾನಿಯವರನ್ನು ಬಂಧಿಸಲಾಗಿತ್ತು. ಎಂಬ ವಿವರಣೆ ಹೊಂದಿರುವ ಈ ಕೃತಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದೆ.

Also read: ಜೈಲಿನಲ್ಲಿ 4 ವರ್ಷಗಳ ಕಾಲ ಶಿಕ್ಷೆ ಅನುಭವಿಸುತ್ತಿರುವ ರಿಯಲ್-ಲೈಫ್ ಮುನ್ನಾಭಾಯ್ ಇಂದು ಗಾಂಧಿಯನ್ ತತ್ವ ಶಾಸ್ತ್ರದಲ್ಲಿ ಉಪನ್ಯಾಸಕರಾಗಿದ್ದಾರೆ..!!