ಕಡಿಯುತ್ತಿರುವ ಮರಗಳನ್ನು ಬುಡಸಮೇತ ತೆಗೆದು ಸ್ಥಳಾಂತರ ಮಾಡಿ ಇನ್ನೊಂದೆಡೆ ನೆಟ್ಟು ಮರಗಳನ್ನು ಬದುಕಿಸುತ್ತಿರುವ ಬೆಳಗಾವಿಯ ಯುವಕ.!

0
284

ದೇಶದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಇನ್ನೂ ಕಡಿಯುತ್ತಾನೆ ಇದ್ದಾರೆ, ಇದಕ್ಕೆ ಭಾರಿ ವಿರೋದ್ಧ ವಿದ್ದರು ಅನಿವಾರ್ಯವಾಗಿ ಕಡೆಯಬೇಕಾದ ಪರ್ಸಂಗ ಬರುತ್ತಿದೆ, ಹೀಗೆ ಕಡಿಯಲು ಇಚ್ಚಿಸಿದ ಮರಗಳನ್ನು ಹೇಗೆ ರಕ್ಷಿಸಬೇಕು ಎನ್ನುವುದು ಯಾರಿಗೂ ತಿಳಿದಿರದ ವಿಚಾರ ಆದರೆ ಇಲ್ಲೊಬ್ಬ ಯುವಕ ಮಾತ್ರ ನೆಲಸಮ ಮಾಡುವ ಮರಗಳನ್ನು ಬುಡ ಸಮೇತ ಎತ್ತಿ ಬೇರೆ ಸ್ಥಳದಲ್ಲಿ ನೆಟ್ಟು ಬೆಳೆಸುತ್ತಿದ್ದು ಭಾರಿ ಮೆಚ್ಚುಗೆ ಪಡೆದಿದ್ದಾನೆ. ಕೇವಲ 6 ತಿಂಗಳ ಹಿಂದಿನಿಂದ ಮರಗಳ ಮರು ನೆಟ್ಟುವ ಕಾಲದಲ್ಲಿ ಈಗಾಗಲೇ 48 ಮರಗಳನ್ನು ಕಾಪಾಡಿದ್ದಾನೆ.

Also read: ಕೊಳೆಗೇರಿಯಲ್ಲಿರುವ ಮನೆಯಲ್ಲಿ ನೆಲಸಿದ ಯುವಕ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯದಲ್ಲಿ PHD ಪ್ರವೇಶ ಪಡೆದುಕೊಂಡು ಮಾದರಿಯಾದ..

ಹೌದು ಪರಿಸರ ಉಳಿಸುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ ಆಗಿದ್ದು, ಹಕ್ಕು ಕೂಡಾ ಆಗಿದೆ. ಆದರೆ ಇವೆಲ್ಲವನ್ನೂ ಮರೆತು ಪರಿಸರವನ್ನು ನಿರ್ನಾಮ ಮಾಡುಲು ಹೊರೆಟ ಅಭಿವೃದ್ಧಿಯ ನೇಪ ಮುಂದೊಂದು ದಿನ ಅಪಾಯ ತರುತ್ತದೆ ಎಂದು ಪರಿಸರ ತಜ್ಞೆರು ಹೇಳಿದ್ದಾರೆ. ಇದೆಲ್ಲವೂ ತಿಳಿದ ಬೆಳಗಾವಿ ಜಿಲ್ಲೆಯ ಯುವಕ ಪರಿಸರ ಸಂರಕ್ಷಣೆ ಹೋರಾಟಗಾರ ಕಿರಣ್ ನಿಪ್ಪಾಣಿಕರ್ ಮಾಡಿರುವ ಕೆಲಸ ಮಾದರಿಯಾಗಿ ಮೆಚ್ಚುಗೆ ಪಡೆದುಕೊಂಡಿದ್ದು. ಯುವ ಪೀಳಿಗೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ.

Also read: ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

ಕಿರಣ್ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಕಡಿದು ನೆಲಸಮವಾಗಬೇಕಿದ್ದ ಮರಗಳನ್ನು ಸರ್ಕಾರಿ ಅಧಿಕಾರಿಗಳ ಮನವೊಲಿಸಿ ಬುಡಸಮೇತ ತೆಗೆದು ಸ್ಥಳಾಂತರ ಮಾಡಿ ಇನ್ನೊಂದೆಡೆ ನೆಟ್ಟು ಅಲ್ಲಿ ಬೆಳೆದು ನೆರಳು ಕೊಡುವ ವ್ಯವಸ್ಥೆ ಮಾಡಿದ್ದಾರೆ. ಕಿರಣ್ ಅವರ ಈ ಕೆಲಸದಿಂದಾಗಿ ಅವರು ಜಿಲ್ಲೆಯ ಟ್ರೀ ಮ್ಯಾನ್ ಎಂದು ಜನರಿಂದ ಕರೆಯಲ್ಪಡುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಕಿರಣ್ 48 ಮರಗಳನ್ನು ಸ್ಥಳಾಂತರಗೊಳಿಸಿ ಬೇರೆಡೆ ನೆಟ್ಟು ಅಲ್ಲಿ ಚೆನ್ನಾಗಿ ಬೆಳೆಯುತ್ತಿದೆ. ಇವರ ಈ ಕಾಳಜಿಯ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ, ಕಂಟೋನ್ಮೆಂಟ್ ಬೋರ್ಡ್, ಅರಣ್ಯ ಇಲಾಖೆ ಮತ್ತು ಕೆಲ ದಾನಿಗಳು ಸಹಾಯ ನೀಡಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಿರಣ್ ನಿಪ್ಪಾಣಿಕರ್, ಜಾಗತಿಕ ತಾಪಮಾನ ಗಂಭೀರ ವಿಷಯವಾಗಿದ್ದರೂ ಕೂಡ ಬಹುತೇಕ ಮಂದಿಯ ಮನೋಧರ್ಮ ಇಂದಿಗೂ ಬದಲಾಗಿಲ್ಲ. ಅಭಿವೃದ್ಧಿ ಹೆಸರಿನಲ್ಲಿ, ವಿಲಾಸಿ ಜೀವನ ನಡೆಸಲು ಮರ ಗಿಡಗಳನ್ನು ಕಡಿಯಲಾಗುತ್ತದೆ. ಮರ ಗಿಡಗಳನ್ನು ನಾಶ ಮಾಡದೆಯೂ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದಾರೆ. ಈಗಾಗಲೇ ಮರಗಳನ್ನು ಸ್ವಿಫ್ಟ್ ಮಾಡಿ ಬೇರೆ ಕಡೆಗೆ ಬೆಳಸುವ ಕೆಲಸ ಬೇರೆ ದೇಶಗಳಲ್ಲಿ ಭಾರಿ ಯಶಸ್ವಿಯಾಗಿದೆ. ಇದು ನಮ್ಮ ದೇಶದಲ್ಲಿವೂ ಒಂದು ಕಾನೂನು ರೂಪದಲ್ಲಿ ಬಂದು ಪರಿಸರವನ್ನು ಕಾಪಾಡು ಅವಶ್ಯಕತೆ ಹೆಚ್ಚಿದೆ.

Also read: ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸಿ ಭಾರತದ ನೂತನ ಬಿಲಿಯನೇರ್ ಆದ ಬೆಂಗಳೂರಿನ ಶಿಕ್ಷಕ; ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ..

ಒಟ್ಟಾರೆಯಾಗಿ ರಾಜ್ಯದಲ್ಲಿ ಪರಿಸರದ ಬಗ್ಗೆ ಕಾಳಜಿ ಕೂಡಾ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಮರಗಳನ್ನು ಕಡಿಯಲು ಯೋಚನೆ ಮಾಡುತ್ತಿದ್ದಾರೆ. ಏಕೆಂದರೆ ಭಯದಿಂದ ಮಾತ್ರ ಮರಗಳನ್ನು ಕಡಿಯುವ ಕೆಲಸ ನಿಂತಿಲ್ಲ ಪರಿಸರದ ಪ್ರೇಮಿಗಳು ಮಾಡುವ ಕೆಲವು ಕೆಲಸಗಳು ಕೂಡ ಮರಗಳ ರಕ್ಷಣೆಗೆ ನಿಂತಿವೆ.