ದೇಶಾದ್ಯಂತ ಹೆಸರು ಮಾಡಿದ ಬೆಳಗಾಂ ಕುಂದಾ ತಯಾರಿಸುವ ವಿಧಾನ..!!

0
952

ರಾಜ್ಯದ ಎರಡನೇ ರಾಜಧಾನಿ ಎಂದು ನೇಮಿಸಲ್ಪಟ್ಟ ಮಹಾನಗರ ಬೆಳಗಾವಿ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ. ಹಾಗೆಯೆ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವದರಿಂದ ಬೆಳಗಾವಿಯಲ್ಲಿ ಅಲ್ಯುಮಿನಿಯಂ ಉತ್ಪಾದಿಸುತ್ತದೆ. ಇತ್ತಿಚಿನ ದಿನಗಳಲ್ಲಿ ಬೆಳಗಾಂ-ನಲ್ಲಿ ಯುರೇನಿಯಂ ಅದಿರು ಕೂಡ ದೊರೆತಿದೆ.

Also read: ವಿಶ್ವದ ನಾಲ್ಕನೇ ಅತಿದೊಡ್ಡ ಆಹಾರ ಬೆಳೆಯಾಗಿರುವ ಸ್ಪೆಷಲ್ ಬೇಬಿ ಆಲೂ ಫ್ರೈ ಮಾಡುವ ವಿಧಾನ..!!

ರಾಜಧಾನಿ ಬೆಂಗಳೂರಿನಂತೆ ಇಲ್ಲಿಯೂ ಐಟಿ ಉದ್ಯಮ ಬೆಳೆಯುತ್ತಿದೆ. ಇಷೆಲ್ಲ ಹೆಸರು ಪಡೆದ ಬೆಳಗಾಂ ವಿಶೇಷತೆ ಅಂದ್ರೇನೆ ಕುಂದಾ. ಬೆಳಗಾವಿ ನೋಡಲು ಹೋದ ಪ್ರತಿಯೊಬ್ಬರೂ ತಪ್ಪದೆ ಮನೆಗೆ ತರುವ ಕುಂದಾ ದೇಶಾದ್ಯಂತ ಹೆಸರು ಮಾಡಿದೆ. ಇಷ್ಟೊಂದು ಹೆಸರು ಮಾಡಿರುವ ಕುಂದಾವನ್ನು ಸರಳವಾಗಿ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

Also read: ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಮತ್ತು ಪೌಷ್ಟಿಕಾಂಶಭರಿತ ಆಹಾರವಾದ ರಾಜಗಿರಿ ಅರಳಿನ ಲಾಡು ಮಾಡುವ ವಿಧಾನ..!!

 • ಒಂದು ಲೀ ಹಾಲು
 • 1/2 + 1/4 ಕಪ್ ಸಕ್ಕರೆ
 • ಶುದ್ದವಾದ ಅರ್ಧ ಕಪ್ ಮೊಸರು
 • ಪುಡಿಮಾಡಿದ 2 ಏಲಕ್ಕಿ

ತಯಾರಿಸುವ ವಿಧಾನ :

 • ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಲನ್ನು ಕುದಿಯಲು ಇಡಿ
 • ಹಾಲು ಅರ್ಧ ಲೀಟರ್ ಆಗುವಷ್ಟು ಕೆಂಪಗೆ ಕಾಯುವಂತೆ ನೋಡಿಕೊಳ್ಳಬೇಕು
 • ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಕುದಿಸಬೇಕು. ಆಗಾಗ ಕೈಯಾಡಿಸುತ್ತಿರಬೇಕು.
 • ಹಾಲಿನೊಂದಿಗೆ ಚೆನ್ನಾಗಿ ಬೆರೆತು ಕೆಂಪಗಾಗುವಂತೆ ಕಾಯಿಸಬೇಕು.

Also read: ದಸರಾ ಆಹಾರ ಮೇಳದ ವಿಶೇಷ ತಿನಿಸು ಬಿದಿರಕ್ಕಿ ಪಾಯಸ

 • ಹಾಲು ಒಡೆಯಲು ಪ್ರಾರಂಭವಾದಾಗ ಸಕ್ಕರೆ ಸೇರಿಸಿ ಕುದಿಸುವುದನ್ನು ಮುಂದುವರೆಸಿ
 • ಇನ್ನೊಂದು ಬಾಣಲೆಯಲ್ಲಿ ಉಳಿದ 1/4 ಕಪ್ ಸಕ್ಕರೆ ಹಾಕಿ ಬಿಸಿ ಮಾಡಿ
 • ನೀರು ಹಾಕದೆ ಕಂದುಬಣ್ಣಕ್ಕೆ ತಿರುಗುವವರೆಗೆ ಬಿಸಿಮಾಡಿ
 • ಇದನ್ನು ಕುದಿಯುತ್ತಿರುವ ಹಾಲು, ಸಕ್ಕರೆ, ಮೊಸರು ಇರುವ ಬಾಣಲೆಗೆ ಹಾಕಿ
 • ಪೂರ್ತಿಯಾಗಿ ನೀರು ಆರುವವರೆಗೆ ಕುದಿಸಿ
 • ಏಲಕ್ಕಿ ಪುಡಿ ಹಾಕಿ, ಮುಚ್ಚಿ ಬೆಂಕಿ ಆರಿಸಿ
 • ಕೊನೆಯದಾಗಿ ಗೋಡಂಬಿ ಹಾಕಿ ಅಲಂಕರಿಸಿದರೆ ರುಚಿಕರವಾದ ಬೆಳಗಾವಿ ಕುಂದಾ ಸವಿಯಲು ಸಿದ್ಧ.