ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಎಷ್ಟು ಪತ್ತೆಯಾಗಿದೆ ಗೊತ್ತಾ.!

0
1566

ಕರ್ನಾಟಕದಲ್ಲಿ ಭಾರಿ ಸಂಚಲ ಸೃಷ್ಟಿಸಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ ಬಳಿಕ ಬೇನಾಮಿ ಆಸ್ತಿ ಪತ್ತೆಯಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದರೂ ಈ ಆಸ್ತಿಗಳ ಮೌಲ್ಯ ಎಷ್ಟು ಎನ್ನುವುದನ್ನು ಆದಾಯ ತೆರಿಗೆ ಇಲಾಖೆ ಇದೂವರೆಗೂ ಬಹಿರಂಗಪಡಿಸಿಲ್ಲ.

ಆದರೆ ಈಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪತ್ತೆಯಾದ ಬೇನಾಮಿ ಆಸ್ತಿಯ ಮೌಲ್ಯದ ವಿವರವನ್ನು ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ಇಲಾಖೆ ಕರ್ನಾಟಕದಲ್ಲಿ ಹುಟ್ಟಿಲ್ಲ. ಸ್ವಾತಂತ್ರ್ಯ ದಿನದಿಂದ ಅದು ಹುಟ್ಟಿದೆ. ನಮಗೆ ಬಂದ ಮಾಹಿತಿ ಪ್ರಕಾರ ಡಿಕೆಶಿ ಮನೆಯಲ್ಲಿ ಬೇನಾಮಿ ಆಸ್ತಿ ಇದ್ದು, ಇದರ ಮೌಲ್ಯ 300 ಕೋಟಿ ರೂ. ಎಂದು ಶೆಟ್ಟರ್ ತಿಳಿಸಿದರು.

ಇನ್ನು ಕಾಂಗ್ರೆಸ್ ಪಕ್ಷದವರು ಎಷ್ಟು ಜನ ದಲಿತ ಮಹಿಳೆಯರನ್ನು ಮದುವೆಯಾಗಿದ್ದಾರೆ ಎಂದು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಪೃಶ್ಯತೆಯ ಬಗ್ಗೆ ಸವಾಲ್ ಹಾಕಿದ ಶೆಟ್ಟರ್, ಮಾತನಾಡಿದ್ರೆ ಅಹಿಂದ ಸರ್ಕಾರ ಎನ್ನುವ ಸಿಎಂ ಇದರ ಬಗ್ಗೆ ಉತ್ತರ ಕೊಡಬೇಕಾಗಿದೆ. ಇನ್ನು ರಾಜ್ಯಕ್ಕೆ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತು ಬೇಸರ ವ್ಯಕ್ತಪಡಿಸಿಲ್ಲ. ಕೇವಲ ಪಕ್ಷದ ಸಂಘಟನೆ ಬಗ್ಗೆ ಮಾತ್ರ ಚರ್ಚಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.