ಹಣೆಯ ಮೇಲೆ ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?

0
8074

ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್‌ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ …

ಸಿಂಧೂರಂ ಸೌಂದರ್ಯಾ ಸಾಧನಂ ಎಂಬ ಮಾತಿದೆ. ಅದರಂತೆ ಕುಂಕುಮ ಧರಿಸುವ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ.

ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ. ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ,  ಹೆಣ್ಣು ಮಕ್ಕಳು ಕುಂಕುಮ ಇಡುವುದು ಸಂಪ್ರದಾಯವಾಗಿದೆ.

ಭ್ರೂಮಧ್ಯ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ. ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥೀಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ.

ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.

ಶಾಸ್ತ್ರ: ಕುಂಕುಮ ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ವ್ಯಕ್ತಿಯ ಕಡೆಗೆ ಆಕರ್ಷಿತವಾಗಿರುತ್ತದೆ ಮತ್ತು ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಅಲ್ಲದೇ ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳಬೇಕು.

ಕುಂಕುಮ ಇಡುವುದು ಪ್ರಾಚೀನ ಕಾಲದಿಂದಲೂ ರೂಢಿಯಾಗಿರುವ ಪದ್ಧತಿಯಾಗಿದ್ದು, ಇಂದಿಗೂ ಅದು ಮುಂದುವರಿದುಕೊಂಡು ಬಂದಿದೆ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲದೇ ಎಲ್ಲಾ ಹೆಣ್ಣು ಮಕ್ಕಳು ಹಣೆಯ ಮೇಲೆ ಕುಂಕುಮ ಇಡುವುದು ಶುಭ ಸೂಚಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಹಿಂದೂಗಳು ತಮ್ಮ ದೈನಂದಿನ ಜೀವನದಲ್ಲಿ ತಿಲಕವನ್ನು ಹಚ್ಚಿಕೊಳ್ಳುವುದಿಲ್ಲ. ಮಹಿಳೆಯರು ಅದನ್ನು ಹಳೆಯ ಸಂಪ್ರದಾಯದ್ದೆಂದು ಹಾಗೂ ತಮ್ಮ ಪಾಶ್ಚಿಮಾತ್ಯ ಉಡುಗೆಗಳಿಗೆ ಹೊಂದುವುದಿಲ್ಲವೆಂದು ಪರಿಗಣಿಸುತ್ತಾರಾದರೂ ಹಲವು ಹಿಂದೂ ಮಹಿಳೆಯರು ಬಿಂದಿಯನ್ನು ಹಚ್ಚಿಕೊಳ್ಳುತ್ತಾರೆ. ಈ ತಿಲಕವನ್ನು ಸರ್ವೇಸಾಮಾನ್ಯವಾಗಿ ಧಾರ್ಮಿಕ ಸಂದರ್ಭಗಳಲ್ಲಿ ಹಾಗೂ ಮಂಗಳಕರ ದಿನಗಳಲ್ಲಿ (ಹುಟ್ಟಿದಹಬ್ಬದ ದಿನಗಳು, ವಿವಾಹಗಳು etc.) ಅಥವಾ ವಿವಾಹದ ನಂತರ ಹಚ್ಚಿಕೊಳ್ಳಲಾಗುತ್ತದೆ.

ತಿಲಕವು ಹಲವು ಹಿಂದೂ ದೇವತೆಗಳ ವಿಚಾರದಲ್ಲಿ ಕಂಡುಬರುವ ಮೂರನೆಯ ಕಣ್ಣು ಅಥವಾ ಮನಸ್ಸಿನ ಕಣ್ಣನ್ನು ಪ್ರತಿನಿಧಿಸುತ್ತದೆ ಹಾಗೂ ದೈವಧ್ಯಾನ ಮತ್ತು ಪಾರಮಾರ್ಥಿಕ ಜ್ಞಾನೋದಯಗಳಿಗೆ ಸಂಬಂಧಪಟ್ಟಿರುತ್ತದೆ. ಹಿಂದಿನ ಕಾಲದಲ್ಲಿ ತಿಲಕಗಳನ್ನು ಸಾಧಾರಣವಾಗಿ ದೇವತೆಗಳು, ಅರ್ಚಕ/ಪೂಜಾರರು, ಸಂನ್ಯಾಸಿಗಳು ಅಥವಾ ಆರಾಧಕರು ಹಚ್ಚಿಕೊಳ್ಳುತ್ತಿದ್ದರು, ಆದರೆ ಪ್ರಸ್ತುತ ಕಾಲದಲ್ಲಿ ಬಹುತೇಕ ಹಿಂದೂಗಳು ಅವುಗಳನ್ನು ಧರಿಸುವುದು ವಾಡಿಕೆಯಾಗಿಬಿಟ್ಟಿದೆ. ಕೆಲವೊಮ್ಮೆ ಇದು ಆಯಾ ವ್ಯಕ್ತಿಯು ಪಾಲಿಸುವ ಹಿಂದೂ ಸಂಪ್ರದಾಯಗಳನ್ನು ಸೂಚಿಸಬಲ್ಲಂತಹುದಾಗಿರುತ್ತದೆ. ಇದನ್ನು ಶ್ರೀಗಂಧದ ಲೇಪ, ಭಸ್ಮ (ವಿಭೂತಿ), ಕುಂಕುಮ, ಸಿಂಧೂರ, ಮೃತ್ತಿಕೆ ಅಥವಾ ಇತರೆ ವಸ್ತುಗಳಿಂದ ತಯಾರಿಸಬಹುದಾಗಿರುತ್ತದೆ. ಇದರಿಂದ ತಯಾರಾದ ಲೇಪವನ್ನು ಹಣೆಯ ಮೇಲೆ ಅಥವಾ ಕೆಲವು ಸಂದರ್ಭಗಳಲ್ಲಿ ತಲೆಯ ಮೇಲ್ಭಾಗದಲ್ಲಿ ಹಚ್ಚಿಕೊಳ್ಳಲಾಗುತ್ತದೆ.