ದಾಳಿಂಬೆಯಲ್ಲಿರುವ 7 ಅದ್ಭುತ ಆರೋಗ್ಯಕರ ಗುಣಗಳನ್ನು ತಿಳಿದರೆ ನಿತ್ಯವು ಸೇವಿಸುತ್ತೀರ…!

0
1764

ದಾಳಿಂಬೆಯಲ್ಲಿರುವ 7 ಅದ್ಭುತ ಆರೋಗ್ಯಕರ ಗುಣಗಳು.

1. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ:

ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಆಂಟಿಟ್ಯೂಮರ್ ಪರಿಣಾಮಗಳನ್ನು ಉಂಟುಮಾಡುತ್ತದೆ, ಇದು ಕೆಲವು ರೀತಿಯ ಕ್ಯಾನ್ಸರ್ ತಡೆಗಟ್ಟಲು ಮತ್ತು ಅದರ ವಿರುದ್ಧ ಹೋರಾಡುತ್ತದೆ. ದಾಳಿಂಬೆ ರಸವುನ್ನು ಕುಡಿಯುವದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

2. ನೈಸರ್ಗಿಕ ಕಾಮೋತ್ತೇಜಕ:

ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಫಲವತ್ತತೆ ಮತ್ತು ಸಮೃದ್ಧತೆಗೆ ಸಹಕಾರಿಯಾಗಲಿದೆ ಇದಲ್ಲದೆ ಇದನ್ನು ತಿನ್ನುವುದರಿಂದ ನಿಮ್ಮ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಅದಲ್ಲದೆ ನೈಸರ್ಗಿಕವಾಗಿ ಲೈಂಗಿಕ ಸಮಸ್ಯೆ ದೂರವಾಗಿ ಫಲವತ್ತತೆ ಹೆಚ್ಚುತ್ತದೆ.

3. ಸಂಧಿವಾತ ಮತ್ತು ಕೀಲು ನೋವು ಕಡಿಮೆಮಾಡುತ್ತದೆ:

ಸಂಧಿವಾತವು ಒಂದು ಅಥವಾ ಹೆಚ್ಚು ಕೀಲುಗಳ ಉರಿಯೂತವಾಗಿದ್ದು, ಇದು ತುಂಬ ನೋವು ಉಂಟುಮಾಡುತ್ತದೆ. ದಾಳಿಂಬೆಯಲ್ಲಿ ಉರಿಯೂತದ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುವ ಫ್ಲೇವೊನಾಲ್ಸ್ ಎಂದು ಕರೆಯಲಾಗುವ ಆಂಟಿಆಕ್ಸಿಡೆಂಟ್ಗಳು ಇರುವುದರಿಂದ ಇದು ಉರಿಯೂತವನ್ನು ಕಡಿಮೆ ಮಾಡಿ ಸಂಧಿವಾತ ಮತ್ತು ಕೀಲು ನೋವು ನಿವಾರಣೆಗೆ ಸಹಕರಿಸುತ್ತದೆ.

4. ರಕ್ತದೊತ್ತಡ ಕಡಿಮೆ ಮಾಡುತ್ತದೆ:

ದಾಳಿಂಬೆ ಹಣ್ಣಿನ ರಸವು ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಮತ್ತು ಜೈವಿಕ ಕ್ರಿಯಾತ್ಮಕ ಪಾಲಿಫಿನಾಲ್ಗಳನ್ನು ಒಳಗೊಂಡಿರುತ್ತದೆ, ಇದು ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸಲು ಮತ್ತು ಅಧಿಕ ರಕ್ತದೊತ್ತಡದವನ್ನು ನಿಯಂತ್ರಿಸಿ ಕಡಿಮೆ ಮಾಡಲು ಸಹಕರಿಸುತ್ತದೆ.

5. ಬ್ಯಾಕ್ಟೀರಿಯಾದ ಸೋಂಕುಗಳು ವಿರುದ್ಧ ಹೋರಾಡುತ್ತದೆ:

ದಾಳಿಂಬೆ ನೂರಾರು ವಿವಿಧ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ, ಅದಲ್ಲದೆ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಉತ್ತೇಜಿಸಿ, ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅದಲ್ಲದೆ ಪ್ಯಾರಾಸಿಟಿಕ್ ಮತ್ತು ಸೂಕ್ಷ್ಮಜೀವಿಯ ಸೋಂಕುಗಳು, ಅತಿಸಾರ, ಹುಣ್ಣುಗಳು, ರಕ್ತಸ್ರಾವ ಮತ್ತು ಉಸಿರಾಟದ ತೊಡಕುಗಳನ್ನು ನಿವಾರಿಸುತ್ತದೆ.

6. ಹೃದಯದ ಆರೋಗ್ಯಕ್ಕೆ ಸಹಕಾರಿ:

ಇತರ ಹಲವು ಹಣ್ಣಿನ ಜ್ಯೂಸ್-ಗಳಿಗೆ ಹೋಲಿಸಿದರೆ ದಾಳಿಂಬೆಯಿಂದ ತಯಾರಿಸಿದ ಜ್ಯೂಸ್-ನಲ್ಲಿ ಉನ್ನತ ಮಟ್ಟದಲ್ಲಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತದೆ ಮತ್ತು ಇದು ಅಪಧಮನಿಗಳಲ್ಲಿ ಇರುವ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ ಇದರಿಂದ ಮುಚ್ಚಿಕೊಂಡಿರುವ ಅಪಧಮನಿಗಳು ತೆರಿದುಕೊಂಡು ಹೃದಯಕ್ಕೆ ಸುಲಭ ರಕ್ತಸಂಚಾರವಾಗುತ್ತದೆ.

7. ನೆನೆಪಿನ ಶಕಿಯನ್ನು ಹೆಚ್ಚಿಸುತ್ತದೆ:

ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸ್ನಾಯುಗಳ ಸಮನ್ವಯದ ಚಿಕಿತ್ಸೆಗೆ ನೇರವಾಗಿ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ಅಲ್-ಝೆಮಾರ್ಸ್ ಕಾಯಿಲೆಯನ್ನು ನಿಧಾನಗೊಳಿಸುತ್ತದೆಯಂತೆ