ಹೆಚ್ಚು ವೇಗವಾಗಿ ನಡೆದರೆ ಹೆಚ್ಚು ಕಾಲ ಬದುಕಬಹುದಂತೆ; ನಿಮ್ಮ ನಡೆಗೆಯ ಮೇಲೆ ನಿಮ್ಮ ಅಯುಷ್ಯ ಹೇಗಿದೆ ಎನ್ನುವುದನ್ನು ತಿಳಿಸಿದ ಹೊಸ ಸಂಶೋಧನೆ..

0
511

ಮನುಷ್ಯ ಹುಟ್ಟುವುದು ಒಂದು ರೀತಿಯಾದರೆ ಸಾಯಿವುದು ಮಾತ್ರ ಸಾವಿರಾರು ರೀತಿಯಲ್ಲಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ಬದುಕಿರುವವಷ್ಟು ಸಮಯ ಹೇಗೆ ತನ್ನ ಆಯುಷ್ಯ ಹೆಚ್ಚಿಸಿಕೊಳಬೇಕು ಎನ್ನುವುದು ಅವರವರ ಕೈಯಲ್ಲಿ ಇರುತ್ತದೆ ಆದರೆ ಕೆಲವೊಂದು ಕೆಟ್ಟ ಸಮಯದಲ್ಲಿ ಎಲ್ಲೇ ಇದರು, ಹೇಗೆ ಇದರು ಸಾವು ಬರುತ್ತದೆ. ಆದರೆ ವ್ಯಕ್ತಿ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಂಡಿರುವ ಕೆಲವೊಂದು ಕ್ರಮಗಳು ಅವರ ಬದುಕುವ ವಯಸ್ಸನ್ನು ತಿಳಿಸುತ್ತೇ, ಅದರಂತೆ ವೇಗವಾಗಿ ನಡೆಯಿವ ವ್ಯಕ್ತಿ ಕೂಡ ಹೆಚ್ಚು ಬದುಕುತ್ತಾನೆ ಎಂದು ಸಂಶೋಧನೆಯೊಂದು ತಿಳಿಸಿದೆ.

Also read: ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..

ಜೋರಾಗಿ ನಡೆಯಿವರು ಹೆಚ್ಚು ಬದುಕುವರ?

ಇಂದಿನ ಮುಂದುವರೆದ ಆಧುನಿಕ ಯುಗದಲ್ಲಿ ಹಲವಾರು ರೀತಿಯಿಂದ ನಿಮ್ಮ ಸಾವು ಯಾವಾಗ ಬರುತ್ತದೆ ಎಂದು ದಿನಕ್ಕೊಂದು ರೀತಿಯಲ್ಲಿ ಕಂಡುಹಿಡಿಯುವ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುತ್ತಾನೆ ಇರುತ್ತೇವೆ. ಆದರೆ ಇದು ಎಷ್ಟು ನಿಖರ ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ನೀವು ನಡೆಯುವ ವೇಗದಿಂದ ಎಷ್ಟು ವರ್ಷಗಳ ಕಾಲ ಬದುಕಲಿದ್ದೀರಿ ಎನ್ನುವುದನ್ನು ಇತ್ತೀಚೆಗೆ ನಡೆಸಿರುವ ಅಧ್ಯಯನ ಒಂದರ ಪ್ರಕಾರ ನಡೆಯುವ ವೇಗದಿಂದ ನೀವು ಎಷ್ಟು ಸಮಯ ಬದುಕಲಿದ್ದೀರಿ ಎಂದು ಹೇಳಬಹುದಾಗಿದೆ. ಅದರಂತೆ ವ್ಯಕ್ತಿಯ ಆಯುಷ್ಯದ ಜೊತೆಗೆ ಅವನ ಆರೋಗ್ಯದ ಮೇಲೆ ಕೂಡ ಹಲವು ಲಾಭಗಳಿವೆ ಎನ್ನುವುದನ್ನು ಸಂಶೋಧನೆ ತಿಳಿಸಿದೆ.

ಏನಿದು ಸಂಶೋಧನೆ?

Also read: ಹೃದಯಾಗಾತಕ್ಕೆ ಕಾರಣವಾಗಿರುವ ರಕ್ತದಲ್ಲಿ ಕೊಬ್ಬು ಸೇರುವಿಕೆಯನ್ನು ಈ ಒಂದು ಸರಳ ಉಪಾಯದಿಂದ ನಿಲ್ಲಿಸಿ!!

ಜರ್ನಲ್ ಆಫ್ ಮಯೋ ಕ್ಲಿನಿಕ್ ಪ್ರೊಸೀಡಿಂಗ್ ನಲ್ಲಿ ಪ್ರಕಟವಾಗಿರುವಂತೆ, ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ತುಂಬಾ ನಿಧಾನವಾಗಿ ನಡೆಯುವವರಿಗಿಂತ ವೇಗವಾಗಿ ನಡೆಯುವವರು ಹೆಚ್ಚು ಕಾಲ ಬಾಳುತ್ತಾರೆ. ಅದು ಹೇಗೆ ಎನ್ನುವ ಬಗ್ಗೆ ಕೂಡ ಅಧ್ಯಯನ ತಿಳಿಸಿದ್ದು, ಕಡಿಮೆ ತೂಕ ಹೊಂದಿರುವ ಮತ್ತು ತುಂಬಾ ನಿಧನವಾಗಿ ನಡೆಯುವಂತಹ ಪುರುಷರು 64.8 ವರ್ಷಗಳ ಕಾಲ, ಅದೇ ಮಹಿಳೆಯುರು 72.4 ವರ್ಷಗಳ ಕಾಲ ಬದುಕುವರು ಎಂದು ಪ್ರೊಫೆಸರ್ ಟಾಮ್ ಯಾಟ್ಸ್ ತಿಳಿಸಿದ್ದಾರೆ. ದೇಹದ ತೂಕಕ್ಕೆ ಹೋಲಿಸಿದರೆ ದೈಹಿಕ ಸಾಮರ್ಥ್ಯದ ಪ್ರಾಮುಖ್ಯತೆಯು ವ್ಯಕ್ತಿಗಳ ಜೀವಿತಾವಧಿಯಲ್ಲಿ ಮುಖ್ಯವೆಂದು ಸ್ಪಷ್ಟಪಡಿಸಲು ನಮ್ಮ ಅಧ್ಯಯನವು ನೆರವಾಗಿದೆ. ಎಂದು ಪ್ರೊಫೆಸರ್ ಟಾಮ್ ಯಾಟ್ಸ್ ತಿಳಿಸಿದ್ದಾರೆ.

ಅದನ್ನೇ ಮತ್ತೊಂದು ರೀತಿಯಲ್ಲಿ ಹೇಳಬೇಕಾದರೆ ದೈಹಿಕ ಫಿಟ್ನೆಸ್ ಎನ್ನುವುದು ಬಾಡಿ ಮಾಸ್ ಇಂಡೆಕ್ಸ್(ಬಿಎಂಐ)ಗಿಂತ ತುಂಬಾ ಒಳ್ಳೆಯದು ಮತ್ತು ಇದರಿಂದ ಜನರು ತುಂಬಾ ವೇಗವಾಗಿ ನಡೆಯಲು ಮತ್ತು ತಮ್ಮ ಜೀವಿತಾವಧಿಗೆ ಮತ್ತಷ್ಟು ವರ್ಷಗಳನ್ನು ಸೇರಿಸಿಕೊಳ್ಳಲು ನೆರವಾಗುವುದು, ಮತ್ತು ಇಲ್ಲಿಯವರೆಗೆ ತಿಳಿಸಿರುವ ಸಂಶೋಧನೆಗಳು ಹೇಳುವ ಪ್ರಕಾರ ದೇಹದ ತೂಕ ಮತ್ತು ದೈಹಿಕ ಫಿಟ್ನೆಸ್ ನಿಂದಾಗಿ ಜೀವಿತಾವಧಿ ಮೇಲೆ ಪರಿಣಾಮ ಬೀರುತ್ತದೆ. ದೇಹದ ತೂಕಕ್ಕೆ ಐದು ಕಿ.ಲೋ ಹೆಚ್ಚಾದರೆ ಆಗ ಸಾಯುವ ಪ್ರಮಾಣವು ಶೇ.20ರಷ್ಟು ಹೆಚ್ಚಾಗುವುದು. ಬಿಎಂಐ ಮೌಲ್ಯದ ಪ್ರಕಾರ ಮೀಟರ್ ಗೆ 25 ಕಿ.ಲೋ. ತೂಕ ಅಥವಾ ಅಧಿಕ ತೂಕ ಇರುವುದು. ಎಂದು ಸಂಶೋಧಕ ಡಾ. ಫ್ರಾನ್ಸೆಸ್ಕೊ ಜಕ್ಕಾರ್ಡಿ ತಿಳಿಸಿದ್ದಾರೆ.

Also read: ವಿಕೆಂಡ್ -ನಲ್ಲಿ ಒಂದು ವಾರದ ನಿದ್ರೆಯನ್ನು ಒಂದೇ ದಿನಕ್ಕೆ ಮಾಡುವುದು ಎಷ್ಟೊಂದು ಅಪಾಯಕರ ಗೊತ್ತಾ? .

ಹೊಸ ಅಧ್ಯಯನದ ಪ್ರೊಪೆಸರ್ ಯೇಟ್ಸ್ ನಡೆಸಿರುವಂತಹ ಅಧ್ಯಯನದ ಪ್ರಕಾರ, ತುಂಬಾ ನಿಧಾನವಾಗಿ ನಡೆಯುವಂತಹ ಮಧ್ಯ ವಯಸ್ಸಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ತುಂಬಾ ಅಧಿಕವಾಗಿರುವುದು ಎಂದು ತಿಳಿಸಿದ್ದಾರೆ. ಸಂಪೂರ್ಣ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಈ ಅಪಾಯವು ಅಧಿಕ ಆಗಿದೆ. ಅದಕ್ಕಾಗಿ ಈ ಅದ್ಯಯನ ಹೇಳುವ ಪ್ರಕಾರ ನಿಮ್ಮ ನಡಗೆಯನ್ನು ಬದಲಾಯಿಸಿಕೊಳ್ಳಿ.