ಓಮ ಕಾಳಿನ ನೀರಿನಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಅನುಕೂಲಗಳು ಆಗುತ್ತೆ ಅಂತ ಗೊತ್ತಾದ್ರೆ, ದಿನಾಗ್ಲೂ ಮರಿದೇ ಕುಡಿಯಲು ಶುರು ಮಾಡ್ತೀರ..!!

0
4327

Kannada News | Health tips in kannada

ಓಮ ಕಾಳು ಪ್ರತಿದಿನ ನಾವು ಉಪಯೋಗಿಸುತ್ತಲೇ ಇರುತ್ತವೆ. ಇದನ್ನು ಅಜ್ವಾನ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಇದು ಬರೀ ಮಸಾಲೆ ಪದಾರ್ಥ ಆಗಿರದೆ ಔಷದೀಯ ವಸ್ತುವಾಗಿಯೂ ಕೆಲಸ ಮಾಡುತ್ತದೆ. ಅದರಲ್ಲೂ ಓಮ ಕಾಳು ನೆನಸಿದ ನೀರು ಕುಡಿಯುವುದರಿಂದ ಅಧಿಕ ಲಾಭವನ್ನು ಬಡೆಯಬಹುದು.. ಇದರ ಲಾಭ ಪಡೆಯಬೇಕಾದರೆ ಒಂದು ತಿಂಗಳ ಕಾಲ ಹೀಗೆ ಮುಂದುವರೆಸಿ, ಆರೋಗ್ಯ ವೃದ್ಧಿಸಿಕೊಳ್ಳಿ…. ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು

ಓಮ ಕಾಳಿನ ನೀರು ಹೆಣ್ಣುಮಕ್ಕಳಿಗೆ ತುಂಬಾ ಒಳ್ಳೆಯದು.

  • ಶೀತದ ಸಮಯದಲ್ಲಿ ಓಮ ಕಾಳನ್ನು ಬಿಸಿ ನೀರಿನೊಂದಿಗೆ ಸೇರಿಸಿ ಆ ನೀರನ್ನು ಮೂರು ದಿನಗಳವರೆಗೆ ದಿನಕ್ಕೆ ಎರಡರಿಂದ ಮೂರು ಬಾರಿ ಸ್ವಲ್ಪ ಸ್ವಲ್ಪ ಕುಡಿಯಬೇಕು.
  • ಓಮಿನ ಕಾಳಿನ ನೀರು ಕುಡಿಯುವುದರಿಂದ ದೇಹದ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಊಟಕ್ಕೂ ಒಂದು ಗಂಟೆ ಮುಂಚೆ ಅಥವಾ ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿದರೆ ಕೇವಲ ಎರಡು ವಾರದಲ್ಲೇ ದೇಹದ ತೂಕದಲ್ಲಿ ವ್ಯತ್ಯಾಸವನ್ನು ಕಂಡುಕೊಳ್ಳಬಹುದು.
  • ಓಮ ಕಾಳನ್ನು ಬಿಸಿ ನೀರಿನೊಂದಿಗೆ ಸೇರಿಸಿ ಅದನ್ನು ಕುದಿಸಿ ಅದರ ನೀರಿನಿಂದ ಆವಿಯನ್ನು ತೆಗೆದುಕೊಂಡರೆ ಹಲ್ಲು ನೋವು ಕಿವಿ ನೋವನ್ನು ದೂರ ಮಾಡಬಹುದು.
  • ಅಜೀರ್ಣ ಸಮಸ್ಯೆ ಕಂಡುಬಂದಲ್ಲಿ ಒಂದು ಲೋಟ ಬಿಸಿ ನೀರಿನಲ್ಲಿ 1/4 ಟೀ ಸ್ಪೂನ್​​ ಅಜ್ವಾನ ಮತ್ತು 1/4 ಟೀ ಸ್ಪೂನ್​ ಬೇಕಿಂಗ್​​ ಸೋಡ ಹಾಕಿ ಕುಡಿಯಿರಿ.
  • ನಾಲ್ಕು ಟೀ ಸ್ಪೂನ್ ಓಮ ಕಾಳಿಗೆ ಒಂದು ಲೋಟ ನೀರು ಹಾಕಿ ಓಲೆ ಮೇಲೆ ಇತ್ತು ಬೇಯಿಸಬೇಕು ಆಮೇಲೆ ರಾತ್ರಿಯೆಲ್ಲಾ ಹಾಗೆ ಇಟ್ಟು ಬೆಳಿಗ್ಗೆ ಅದನ್ನು ಜಾಲಿಸಿ ಕಾಲಿ ಹೊಟ್ಟೆಯಿಂದ ಆ ನೀರನ್ನು ಕುಡಿಯಬೇಕು ಇದೆ ತರಾ ನೀವು ಹತ್ತು ದಿನ ಮಾಡಿದರೆ ನಿಮ್ಮ ಹೊಟ್ಟೆ ಬೇಗ ಕಡಿಮೆ ಆಗುತ್ತೆ.

ಸೂಚನೆ:

ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ. ಅದನ್ನು ಸೋಸಿ ನೀರನ್ನು ಕುಡಿದು, ಗಂಟೆ ನಂತರ ಏನಾದರೂ ತಿನ್ನಿ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಹುಣಸೆ ಎಲೆ, ಹಣ್ಣು, ಬೀಜ, ತೊಗಟೆಯಲ್ಲಿನ ಔಷಧೋಪಯೋಗಗಳು..!!