ನಿಮಗೆ ಗೊತ್ತೇ ಬೀಟ್‍ರೂಟ್‍ನಲ್ಲಿ ಇರುವಷ್ಟು ಆರೋಗ್ಯಕಾರಿ ಗುಣಗಳು ಮತ್ತೇಲ್ಲೂ ಸಿಗಲು ಸಾಧ್ಯವಿಲ್ಲ..!

0
1216

ನೋಡಲು ಆಕರ್ಷಕ ಬಣ್ಣ ಹೊಂದಿರುವ ಬೀಟ್‍ರೂಟ್ ತುಂಬಾ ಜನಕ್ಕೆ ಇಷ್ಟವಾಗದ ತರಕಾರಿ. ಆದರೆ ಬೀಟ್‍ರೂಟ್‍ನಲ್ಲಿ ಇರುವಷ್ಟು ಆರೋಗ್ಯಕಾರಿ ಗುಣಗಳು ಮತ್ತೇಲ್ಲೂ ಸಿಗಲು ಸಾಧ್ಯವಿಲ್ಲ. ಎಲ್ಲ ವಯಸ್ಸಿನವರಿಗೆ ಎಲ್ಲ ರೀತಿಯಲ್ಲಿಯೂ ಸಹಕಾರಿಯಾಗಿರುವ ತರಕಾರಿ ಇದು.

source: nutraingredients-usa.com

ಕಬ್ಬಿಣ ಅಂಶ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಸುವಂತಹ ಗುಣ ಹೊಂದಿರುವ ಇದು ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ರಾಮಬಾಣದಂತೆ. ಕೊಬ್ಬಿನಾಂಶವಿಲ್ಲದ ಈ ತರಕಾರಿ ಡೈಯಟ್ ಮಾಡುವವರಿಗೆ ಹೇಳಿ ಮಾಡಿಸಿದಂತಹ ತರಕಾರಿ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮ ಔಷಧವಾಗಿದೆ. ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸಿ, ಇದರಲ್ಲಿರುವ ಪೋಲಿಕ್ ಆಸಿಡ್ ಹೊಸ ರಕ್ತಕಣಗಳ ಉತ್ಪಾದನೆಗೆ ನೆರವಾಗುತ್ತದೆ.

source: cdn2.stylecraze.com

ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಾಗಿಸಿ, ಶ್ವಾಸನಾಳಗಳಲ್ಲಿನ ಸೊಂಕು ಹಾಗೂ ಇತರೇ ಸಮಸ್ಯೆಗಳನ್ನು ಬಗೆಹರಿಸುತ್ತದೆ ಜೊತೆಗೆ ಹೃದಯಾಘಾತವಾದಂತೆ ನೋಡಿಕೊಳ್ಳುತ್ತದೆ. ನಿರಂತರ ಬೀಟ್‍ರೂಟ್ ಸೇವನೆಯಿಂದ ರಕ್ತ ಗಟ್ಟಿಗೊಳ್ಳದೇ ಸರಾಗವಾಗಿ ರಕ್ತನಾಳಗಳಲ್ಲಿ ರಕ್ತದ ಸಂಚಾರವಾಗುವುದು. ಚರ್ಮದ ಸಮಸ್ಯೆ ಇರುವವರು ಹಾಗೂ ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಪ್ರತಿನಿತ್ಯ ಒಂದು ಲೋಟ ಬೀಟ್‍ರೂಟ್ ಜ್ಯೂಸ್ ಸೇವಿಸಬೇಕು.

source: keepfitkingdom.com

ಪ್ರೋಟಿನ್, ಪ್ರೋನ್ ಆಸಿಡ್, ಮಾಲಿಕ್ ಆಸಿಡ್ ಆಕ್ಸಾಲಿಕ್ ಆಸಿಡ್’ನಂಥ ಆರೋಗ್ಯಾನುಕೂಲ ಅಂಶಗಳಿವೆ. ವಿಟಮಿನ್ ಸಿ, ಬಿ, ಎ, ಪಿಪಿ, ಇ ಹಾಗೂ ಕ್ಯಾಲ್ಷಿಯಮ್, ಪೆÇಟ್ಯಾಶಿಯಮ್, ಮ್ಯಾಗ್ನೀಶಿಯಮ್, ಜಿಂಕ್, ಐರನ್ ಮತ್ತಿತರ ಅಂಶಗಳಿವೆ. ನಿತ್ಯ ಬೀಟ್ ರೂಟ್ ಸೇವಿಸುತ್ತಿದ್ದರೆ ಮೆದುಳಿನ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ಮೂಳೆಗಳನ್ನು ಬಳಗೊಳಿಸುತ್ತದೆ. ಹೃದ್ರೋಗ, ಬಿಪಿ ಮತ್ತು ಲಕ್ವಾ ಅಪಾಯಗಳನ್ನು ದೂರ ಮಾಡುತ್ತದೆ.

source: i.ndtvimg.com

ಯಾವುದೇ ಎನರ್ಜಿ ಡ್ರಿಂಗ್ಸ್’ಗಿಂತ ಆರೋಗ್ಯಕ್ಕೆ ಬೀಟ್ ರೂಟ್ ಪಾನೀಯ ಉತ್ತಮ ಪೇಯ. ಯೌವ್ವನವನ್ನು ವೃದ್ಧಿಸುತ್ತದೆ. ನಿತ್ಯ ಬೀಟ್ ರೂಟ್ ಸೇವಿಸಿದರೆ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಪಲ್ಯ ಅಥವಾ ಸಾಂಬರ್ ಮಾಡಿದರೆ ಮಕ್ಕಳು ತಿನ್ನುವುದು ತುಂಬಾ ಕಷ್ಟ ಅದಕ್ಕಾಗಿ ಪರೋಟ, ಹಲ್ವಾ ಅಥವಾ ರುಚಿಕರವಾಗಿ ಜ್ಯೂಸ್ ಮಾಡಿಕೊಟ್ಟು ನೋಡಿ, ಇಷ್ಟಪಟ್ಟು ಸೇವಿಸುತ್ತಾರೆ.