ನಿಮ್ಮ ಮನೆಯಲ್ಲೇ ಬೆಳೆಯಲಾಗುವ ಈ ಔಷಧೀಯ ಗಿಡವನ್ನು ಸಮರ್ಪಕವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ…!

0
1242

ಆಯುರ್ವೇದ ಔಷಧಿಯಾಗಿ ಹಾಗಲಕಾಯಿ

1. ಹಾಗಲಕಾಯಿ ಕಹಿಯಾದರುಚಿಯನ್ನು ಹೊಂದಿದ್ದು ಪಚನ(ಜೀರ್ಣ)ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

source: specialtyproduce.com

2. ಅಜೀರ್ಣ ಹಾಗೂ ಮಲಬದ್ಧತೆ ನಿವಾರಣೆಯಲ್ಲಿ ಸಹಕಾರಿಯಾಗಿದೆ.

source: static.phunukieuviet.com

3. ಹಾಗಲಕಾಯಿ ರಸವನ್ನು ಕರುಳಿನ ಲಾಡಿ ಹುಳು ನಿರೋಧಕವಾಗಿ ಬಳಸಲಾಗುತ್ತದೆ.

source: juicing-for-health.com

4. ಹಾಗಲಕಾಯಿಯ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆ ಹಾಗೂ ಇದು ಮಲೇರಿಯಾರೋಗಕ್ಕೆ ರಾಮಬಾಣವಾಗಿದೆ.

source: livestrongcdn.com

5. ಪನಾಮ ಹಾಗೂ ಕೊಲಂಬಿಯಾ ದೇಶದಲ್ಲಿ ಮಲೇರಿಯಾ ನಿರೋಧಕ ಅಂಶಗಳ ಕಾರಣದಿಂದಲೇ ಇದರ ಎಲೆಯಿಂದ ತಯಾರಿ ಸಲಾಗುವ ಟೀಯನ್ನು ಹೆಚ್ಚಾಗಿ ಬಳಸುತ್ತಾರೆ.

source: juicing-for-health.com

6. ಹಾಗಲಕಾಯಿಯಲ್ಲಿರುವ ವಿಶೇಷ ಔಷಧೀಯ ಅಂಶಗಳು HIV ಸೋಂಕಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಾಯೋಗಿಕವಾಗಿ ದೃಢಪಟ್ಟಿದ್ದು, ಇದರ ರಸವನ್ನು ಕುಡಿಯುವ ಸೋಂಕಿತ ಜನರಲ್ಲಿ HIV ಹರಡುವ ಪರಿಣಾಮ ನಿಧಾನಗೊಳ್ಳುತ್ತದೆ ಎಂದು ದೃಢಪಟ್ಟಿದೆ.

source: healthxwellness.com

7. ಹಾಗಲಕಾಯಿಯು ಮಧುಮೇಹ (diabetes) ಪೀಡಿತರಿಗೆ ಒಂದು ಅತ್ಯುತ್ತಮ ಆಹಾರವಾಗಿದ್ದು, ರೋಗ ಲಕ್ಷಣಗಳನ್ನು ತಡೆಗಟ್ಟಲು ಹಾಗೂ ನಿಷ್ಫಲಗೊಳಿಸಲು ಸಹಕಾರಿಯಾಗಿದೆ.

9. ಹಾಗಲಕಾಯಿಯ ವಿಶೇಷತೆ ಎಂದರೆ ಮನುಷ್ಯನಲ್ಲಿನ ಇನ್ಸುಲಿನ್‍ನ ಸೂಕ್ಷ್ಮ ಸಂವೇದನೆಗಳನ್ನು ಹೆಚ್ಚಿಸುತ್ತದೆ ಎಂದು ಖಚಿತವಾಗಿದೆ.

10. ಮಲೇರಿಯಾ ನಿರೋಧಕ: ಹಾಗಲಕಾಯಿಗೆ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಹಾಗಲಕಾಯಿಯು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಹಾಗು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆಯೆಂದು ಏಷಿಯಾದಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗುತ್ತದೆ.

ಪ್ರಕೃತಿ ನೀಡಿರುವ ಸಂಪನ್ಮೂಲಗಳನ್ನು ಅಗತ್ಯಕ್ಕನುಗುಣವಾಗಿ ಬಳಸಿ ಜೀವನಶೈಲಿಯಲ್ಲಿ ಸುಸ್ಥಿರತೆಯನ್ನ ಕಂಡುಕೊಂಡು ಉತ್ತಮ ಜೀವನದತ್ತ ಸಾಗುವಂತಾಗಲಿ. ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಯಿಂದ ಹೊರ ಬಂದು ಮನೆಯಲ್ಲೇ ಬೆಳೆಯಲಾಗುವ ಈ ಔಷಧೀಯ ಗಿಡವನ್ನು ಸಮರ್ಪಕವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಮುಂಜಾಗ್ರತೆಗಳು

ಹಾಗಲಕಾಯಿಯ ಬೀಜಗಳು ವಿಷಕಾರಿಯೆನಿಸಿದ ವಿಸಿನೆಯನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಈ ರೀತಿಯಾಗಿ ಇದಕ್ಕೆ ಈಡಾಗುವ ವ್ಯಕ್ತಿಗಳಲ್ಲಿ ರಕ್ತಹೀನತೆಯ ಫಾವಿಸಂನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಯಲ್ಲಿ, ಬೀಜಗಳ ಕೆಂಪು ರಸಲೆಗಳು ಮಕ್ಕಳಿಗೆ ವಿಷಕಾರಿಯೆಂದು ವರದಿಯಾಗಿದೆ, ಹಾಗು ಹಣ್ಣನ್ನು ಗರ್ಭಧಾರಣೆಯ ಸಮಯದಲ್ಲಿ ಸೇವಿಸುವುದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.