ನಿಮಗೆ ಗೊತ್ತೇ ಎಲೆಕೋಸಿನಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಷ್ಟು ಗುಣಗಳಿವೆ ಅಂತ…?

0
803

ಎಲೆಕೋಸು ನಿತ್ಯ ಜೀವನದಲ್ಲಿ ಬಳಸುವ ತರಕಾರಿ. ಕೋಸಿನ ಪಲ್ಯವೆಂದರೆ ಹೆಚ್ಚಿನವರಿಗೆ ಇಷ್ಟ. ಕೆಲವರಿಗೆ ಇದರ ರುಚಿ, ಪರಿಮಳ ಯಾವುದೂ ಒಗ್ಗುವುದಿಲ್ಲ. ಆದರೆ ಎಲೆಕೋಸನ್ನು ಮಿತವಾಗಿ, ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಲಾಭಗಳುಂಟು. ಏಕೆಂದರೆ ಇದೊಂದು ಆರೋಗ್ಯಕರ ತರಕಾರಿ.

1. ದಪ್ಪ ಹೊಟ್ಟೆಯ ಸಮಸ್ಯೆ ಇರುವವರಿಗಂತೂ ಇದು ಬಹಳ ಒಳ್ಳೆಯದು.

source: a57.foxnews.com

2. ಎಲೆಕೋಸಿನಲ್ಲಿರುವ ಬೀಟಾ ಕೆರೋಟಿನ್ ಕಣ್ಣಿನ ರಕ್ಷಣೆಗೆ ಅಗತ್ಯವಾಗಿದ್ದು, ಇದರ ಸೇವನೆಯಿಂದ ಕಣ್ಣಿನ ರಕ್ಷಣೆಗೆ ಸಹಕಾರು. ಕಣ್ಣಿನ ಪೊರೆ ಉಂಟಾಗದಂತೆ ಎಲೆಕೋಸು ನೋಡಿಕೊಳ್ಳುತ್ತದೆ.

source: liveindia.live

3. ಎಲೆಕೋಸು ಅಧಿಕ ನಾರಿನಂಶ ಹೊಂದಿದ್ದು ಜೀರ್ಣಕ್ರಿಯೆ ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

source: pixserv.clipmass.com

4. ಮಲಬದ್ಧತೆ, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳನ್ನು ನಿವಾರಿಸಿ, ಜೀರ್ಣಕ್ರಿಯೆ ಉತ್ತಮಗೊಳಿಸುವ ಶಕ್ತಿ ಎಲೆಕೋಸಿಗಿದ್ದು, ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಎಲೆಕೋಸನ್ನು ಧಾರಾಳವಾಗಿ ಸೇವಿಸಬಹುದು.

source: kenko100.jp

5. ಕಬ್ಬಿಣಾಂಶವನ್ನು ಹೊಂದಿರುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ.

source: i.ytimg.com

6. ರಕ್ತಸಂಚಾರ ಉತ್ತಮಗೊಳಿಸಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

source: media.zeppfeed.com

7. ವಿಟಮಿನ್ ಸಿ ಹೇರಳವಾಗಿದ್ದು, ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿ ಹಲವಾರು ರೀತಿಯ ರೋಗಗಳು ಬಾರದಂತೆ ತಡೆಗಟ್ಟುತ್ತದೆ.

source: biotrendies.com

8. ವೃದ್ಧಾಪ್ಯದಲ್ಲಿ ಕಾಡುವ ಅಲ್ಜೈಮರ್ಸ್ ರೋಗ ಬಾರದಂತೆ ತಡೆಗಟ್ಟುವ ಶಕ್ತಿ ಇದಕ್ಕಿದೆ.

source: ibelieveinsci.com

9. ಎಲೆಕೋಸಿನಲ್ಲಿರುವ ವಿಟಮಿನ್ ಕೆ ಜೀವಸತ್ವಕ್ಕೆ ಮರೆವಿನ ರೋಗ ಬಾರದಂತೆ ತಡೆಯುವ ಶಕ್ತಿಯಿದೆ.

10. ವಿಟಮಿನ್ ಕೆ ಎಲೆಕೋಸಿನಲ್ಲಿದ್ದು ಮೂಳೆಗಳನ್ನು ಬಲಪಡಿಸುವ ಶಕ್ತಿಯಿದೆ. ಪ್ರೊಟೀನ್ ಬಿಡುಗಡೆ ಮಾಡಿ ಮೂಳೆಗಳ ಖನಿಜಾಂಶವನ್ನು ಕಾಪಾಡುತ್ತದೆ.

source: static.commentcamarche.net

11. ಎಲೆಕೋಸಿನ ಸೇವನೆ ಮಾಡುವುದರಿಂದ ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಬೆಳೆಯದಂತೆ ತಡೆಯಬಹುದು.

source: udayavani.com

12. ಇದರಲ್ಲಿ ಇರುವಂತಹ ಕಬ್ಬಿನಾಂಶವು ಶಕ್ತಿಯ ಮಟ್ಟ ಹೆಚ್ಚಿಸಿ, ರಕ್ತಪರಿಚಲನೆಯನ್ನು ಹೆಚ್ಚಿಸಿ ಚಯಾಪಚಾಯ ಕ್ರಿಯೆಯನ್ನು ಸುಗಮಗೊಳಿಸುವುದು.

13. ವಿಟಮಿನ್ ಸಿ ಸಮೃದ್ಧವಾಗಿರುವ ಎಲೆಕೋಸು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸುವುದು.

14. ಎಲೆಕೋಸು ಅಸ್ಥಿರಂಧ್ರತೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳ ಆರೋಗ್ಯ ಕಾಪಾಡಲು ಎಲೆಕೋಸು ಮಹತ್ವದ ಪಾತ್ರ ನಿರ್ವಹಿಸಲಿದೆ.

15. ಎಲೆಕೋಸಿನಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಉರಿಯೂತವನ್ನು ಕಡಿಮೆ ಮಾಡುವುದು. ಎಲೆಕೋಸನ್ನು ನಿಯಮಿತವಾಗಿ ಸೇವನೆ ಮಾಡಿದರೆ ದೇಹದಲ್ಲಿನ ನೋವು ನಿವಾರಣೆಯಾಗುವುದು.