ಅಡುಗೆಗೆ ದಿನನಿತ್ಯ ಬಳಸುವ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಇಷ್ಟೊಂದು ಒಳ್ಳೇದಾಗುತ್ತೆ ಅಂತ ಇವತ್ತೇ ಗೊತ್ತಾಗಿದ್ದು!!

0
978

ಅಡುಗೆಗೆ ಪರಿಮಳ ನೀಡುವ ಕೊತ್ತಂಬರಿ ಸೊಪ್ಪು ಗೊತ್ತಿರದವರೇ ಇಲ್ಲ. ಪರಿಮಳವಷ್ಟೇ ಅಲ್ಲ ರುಚಿಯ ಜೊತೆಗೆ ಪದಾರ್ಥದ ಆಕರ್ಷಣೆಯನ್ನೂ ಹೆಚ್ಚಿಸುತ್ತೆ. ಕೊತ್ತಂಬರಿ ಜೊತೆಗೆ ಕರಿಬೇವು ಹಾಕದಿದ್ದರೆ ನಮ್ಮ ಭಾರತೀಯ ಅಡುಗೆಗೆ ಕಳೆಯೇ ಬಾರದು. ಕೊತ್ತಂಬರಿ ಸೊಪ್ಪಿಲ್ಲದೆ ಸಾರು ರುಚಿಸುವುದೇ ಇಲ್ಲ. ಕಡಿಮೆ ಬೆಲೆಯಲ್ಲಿ ದೊರೆಯುವ ಕೊತ್ತಂಬರಿ ಸೊಪ್ಪಿನಲ್ಲಿ ಏನೇನೆಲ್ಲ ಇದೆ ಗೊತ್ತೇ?

1. ಕೊತ್ತಂಬರಿಯಲ್ಲಿರುವ ಪೊಟ್ಯಾಷಿಯಂ ಕೂದಲಿನ ಬುಡವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ.

source: findhomeremedy.com

2. ತಂಪಿನ ಗುಣ ಹೊಂದಿರುವ ಕೊತ್ತಂಬರಿಯಲ್ಲಿ ಲಿನೋಲಿಕ್, ಪಾಮಟಿಕ್, ಒಲಿಕ್ ಮತ್ತು ಸ್ಪಿರಿಟ್ ಆಮ್ಲಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್‍ಅನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದು, ಹೃದಯಕ್ಕೆ ಸರಾಗವಾಗಿ ರಕ್ತಸಂಚಾರವಾಗಲು ಅವಕಾಶವಾಗುತ್ತದೆ.

source: natural-homeremedies.com

3. ಇದರಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶ ಇರುವುದರಿಂದ ರಕ್ತಹೀನತೆ ತಡೆಗಟ್ಟುತ್ತದೆ, ಜೊತೆಗೆ ಉಸಿರಾಟದ ತೊಂದರೆಯೂ ನಿವಾರಣೆಯಾಗುತ್ತದೆ. ಇದು ಶ್ವಾಸಕೋಶಕ್ಕೆ ಬಲವನ್ನೂ ನೀಡುತ್ತದೆ.

source: timesofindia.indiatimes.com

4. ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಶಕ್ತಿ ಕೊತ್ತಂಬರಿಗಿದೆ. ಕೆಮ್ಮು, ನೆಗಡಿ, ಜ್ವರ ಕಮ್ಮಿಯಾಗುತ್ತದೆ.

source: 4.bp.blogspot.com

5. ಇಷ್ಟೆ ಅಲ್ಲ ಕೊತ್ತಂಬರಿಯಲ್ಲಿ ಕ್ಯಾಲ್ಸಿಯಂ ಅಂಶವೂ ಯಥೇಚ್ಛವಾಗಿರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.

source: organicauthority.com

6. ರುಚಿ, ಪರಿಮಳ, ಬಣ್ಣ, ಅಲಂಕಾರಕ್ಕಾಗಿಯೇ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಆದರೆ ಇದರಲ್ಲಿರುವ ಪೋಷಕಾಂಶಗಳು ನಮಗೆ ಇಷ್ಟನ್ನೇ ನೀಡಿ ಸುಮ್ಮನಾಗುವುದಿಲ್ಲ. ಇದರಲ್ಲಿ ವಿಟಮಿನ್ ಬಿ1, ಬಿ2, ಬಿ3, ಬಿ5, ಬಿ6, ಬಿ9 ಜೊತೆಗೆ ಎ, ಸಿ, ಇ. ಮತ್ತು ಕೆ ವಿಟಮಿನ್ ಕೂಡ ಇರುತ್ತದೆ. ಇವೆಲ್ಲವೂ ಚರ್ಮ, ಕಣ್ಣು ಮುಂತಾಗಿ ದೇಹದ ಹಲವು ಅಂಗಗಳಿಗೆ ಶಕ್ತಿ, ಪೋಷಣೆ ನೀಡುತ್ತದೆ.

source: tooopen.com

7. ಕೊತ್ತಂಬರಿಯಲ್ಲಿ ವಿಟಮಿನ್ ಎ, ಫಾಸ್ಪರಸ್, ಬಿ-ಕೆರೋಟಿನ್ ಹೇರಳವಾಗಿರುವುದರಿಂದ ವಯಸ್ಸಾದಾಗ ಬರುವ ದೃಷ್ಟಿ ದೋಷಗಳನ್ನು ತಡೆತಯುವಷ್ಟು ಶಕ್ತಿ ಹೊಂದಿದೆ.

source: 1.bp.blogspot.com

8. ಜೀರ್ಣಶಕ್ತಿ ಹೆಚ್ಚಿಸುವ ಸಾಮಥ್ರ್ಯ ಕೊತ್ತಂಬರಿಸೊಪ್ಪಿಗಿದೆ.

source: cdn2.curejoy.com

9. ಕೊತ್ತಂಬರಿಯಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ. ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಬೂಸಿನಿಂದಾಗುವ ಸೋಂಕು (fungal infection) ಮೊದಲಾದ ತೊಂದರೆಗಳನ್ನು ತಡೆಯುತ್ತದೆ.

source: cdn.makeupandbeauty.com

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಈ ಪೋಷಕಾಂಶಗಳೂ ಹೆಚ್ಚಿಗೆ ಇರುತ್ತದೆ. ಇವು ಹಲವು ಚರ್ಮದ ತೊಂದರೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಅಲಂಕಾರ, ಪರಿಮಳಕ್ಕಾಗಿ ಬಳಸುವುದಿಲ್ಲ. ಅದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಿದೆ. ಹಾಗಾಗಿ ಅಡುಗೆಗೆ ಬಳಸಿದ ಕೊತ್ತಂಬರಿಸೊಪ್ಪನ್ನು ಚೆಲ್ಲದೇ ತಿನ್ನುವ ಅಭ್ಯಾಸವಿರಲಿ.