ಆರೋಗ್ಯದ ಜೊತೆ ಜೊತೆಗೆ ಲವಂಗದಿಂದ ಹಲವಾರು ಲಾಭಗಳಿವೆ ಅನ್ನೋದು ನಿಮಗೆ ಗೊತ್ತೇ?

0
1513

Kannada News | Health tips in kannada

ಲವಂಗವು ವಿಶ್ವದಾದ್ಯಂತ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಲ್ಲುನೋವು, ಕಫ, ಅಸ್ತಮಾ ಮತ್ತು ಅಜೀರ್ಣ, ಒತ್ತಡದಂತಹ ಸಮಸ್ಯೆಗಳಿಗೆ ಲವಂಗವು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಒಂದು ಚಿಕ್ಕ ಲವಂಗದಲ್ಲಿ ಹಲವು ರೀತಿಯ ಲಾಭಗಳಿವೆ ನಿಮ್ಮ ಮನೆಯಲ್ಲಿ ಉಪಯೋಗಿಸುವ ಲವಂಗ ನಿಮ್ಮ ಆರೋಗ್ಯದ ಜೊತೆ ನಿಮ್ಮ ಮನೆಯಲ್ಲಿ ಹಲವು ಸಮಸ್ಯೆಗಳನ್ನು ಈ ಲವಂಗ ಹೋಗಲಾಡಿಸುತ್ತೆ.

ಮನೆಯಲ್ಲಿ ಹಲವಾರು ಕಾರಣಗಳಿಂದ ಬರುವ ದುರ್ಗಂಧವನ್ನು ಹೋಗಲಾಡಿಸಲು ಲವಂಗದೆಣ್ಣೆಯನ್ನು ನೀರಿನೊಂದಿಗೆ ಮಿಶ್ರ ಮಾಡಿ ಅದನ್ನು ಮನೆತುಂಬ ಸ್ಪ್ರೇ ಮಾಡುವುದರಿಂದ ಮನೆ ಸುಗಂಧಭರಿತವಾಗುತ್ತದೆ. ಮತ್ತು ಮನೆಯಲ್ಲಿ ಉತ್ತಮ ತಾಜಾ ವಾತಾವರಣ ನಿರ್ಮಾಣವಾಗುತ್ತದೆ.

ಕಾಫಿ, ಚಹಾ ಹಾಲು ಇಂತವುಗಳನ್ನು ಪ್ಲಾಸ್ಕಿನಲ್ಲಿ ತೆಗೆದುಕೊಂಡು ಹೋಗಿರುತ್ತೇವೆ. ಎಷ್ಟೇ ತೊಳೆದರೂ ಅದರೊಳಗಿನ ಕೆಟ್ಟ ವಾಸನೆ ಹೋಗುವುದು ಕಷ್ಟ ಆ ಸಮಯದಲ್ಲಿ ಅದರ ಒಳಗೆ ಕೆಲವು ಲವಂಗವನ್ನು ಹಾಕಿ ಮುಚ್ಚಿಡಿ. ಬೇಕಾದಾಗ ಲವಂಗ ತೆಗೆದು ಬಳಸ ಬಹುದು ಇದರಿಂದ ಪ್ಲಾಸ್ಕಿನ ಒಳಗಿನ ದುರ್ಗಂಧ ದೂರವಾಗುತ್ತದೆ.

ಮನೆಯಲ್ಲಿ ಕಂಡುಬರುವ ಸೊಳ್ಳೆ, ತಿಗಣೆ, ನೊಣ ಇತ್ಯಾದಿಗಳಿಂದ ಮುಕ್ತಿ ಹೊಂದಲು. ಲವಂಗವನ್ನು ನಿಂಬೆ ಹಣ್ಣಿಗೆ ಚುಚ್ಚಿ ರೂಮ್‌ನಲ್ಲಿ ಇಟ್ಟರೆ ಇವೆರಡರ ಗಾಢ ಪರಿಮಳದಿಂದಾಗಿ ಸೊಳ್ಳೆಗಳು ದೂರವಾಗುತ್ತವೆ. ಇದರ ಜೊತೆಗೆ ಒಂದು ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಸ್ವಲ್ಪ ಲವಂಗ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕುದಿಸಿ ಹಬೆಯಾಗಲು ಬಿಡುವುದರಿಂದ ಅದರ ವಾಸನೆಗೆ ಕ್ರಿಮಿಕೀಟಗಳು ದೂರಾಗುತ್ತವೆ.

watch:

ಸ್ವಲ್ಪ ನೀರಿಗೆ ಲವಂಗದ ಎಣ್ಣೆ ಬೆರೆಸಿ. ಅಡುಗೆ ಮನೆಯನ್ನು ಒರೆಸುವುದರಿಂದ ಹಾಗೂ ಅಡುಗೆ ಶೆಲ್ಫ್‌ಗಳನ್ನು ಸ್ವಚ್ಛಗೊಳಿಸುವುದರಿಂದ ಮತ್ತು ಸಿಂಕ್‌ ಬೇಸಿನ್‌ಗೆ ಲವಂಗದೆಣ್ಣೆ ಮಿಶ್ರಣವನ್ನು ಸಿಂಪಡಿಸಿದಲ್ಲಿ ಕಂಪ್ಲೀಟ್‌ ಶುದ್ಧವಾಗುವುದು. ಮತ್ತು ಅಡುಗೆ ಮನೆಯಲ್ಲಿ ಕೆಲವೊಮ್ಮೆ ಬರುವ ಕ್ರಿಮಿಕೀಟಗಳು ಬಾರದಂತೆ ತಡೆಯುತ್ತದೆ.

ಮನೆಯಲ್ಲಿ ಇರುವೆಗಳ ಕಾಟ ವಿಪರೀತವಾಗಿದ್ದರೆ ಸ್ವಲ್ಪ ಲವಂಗದ ಎಣ್ಣೆಗೆ ಸ್ವಲ್ಪ ಏಲಕ್ಕಿ ಪುಡಿ ಮಿಶ್ರ ಮಾಡಿ. ಇರುವೆ ಸರಿದಾಡುವ ಸ್ಥಳದಲ್ಲಿ ಸಿಂಡಿಸಿ. ವಾಸನೆಯಿಂದ ಇರುವೆಗಳು ದೂರಸರಿಯುತ್ತವೆ.