ಸುಮ್ನೆ ಖಾಯಿಲೆಗಳಿಗೆ ಮಾತ್ರೆ ನುಂಗೋ ಬದಲು, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ!!

0
1599

Kannada News | Health tips in kannada

ಉತ್ತಮ ಆರೋಗ್ಯಕ್ಕೆ ನೀರು ಅತ್ಯಾವಶ್ಯಕ ಅಂಶ. 75% ನೀರಿನ ನಿರ್ಮಿತವಾದ ನಮ್ಮ ದೇಹದ ಎಲ್ಲಾ ಕ್ರಿಯೆಗಳು ಸರಾಗವಾಗಿ ನಡೆಯುವುದಕ್ಕೆ ನೀರು ತುಂಬಾ ಮುಖ್ಯ. ನೀರು ನಮ್ಮ ದೇಹದ ಹೆಚ್ಚಿನ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಒದಗಿಸಬಲ್ಲದು. ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದಾಗಿದೆ. ಉದಾಹರಣೆಗೆ ತಲೆನೋವು, ಹೃದಯ ವ್ಯವಸ್ಥೆ, ವೇಗವರ್ಧಿತ ಹೃದಯ ಬಡಿತ, ಆಸ್ತಮಾ, ಟಿಬಿ, ಕಿಡ್ನಿ ರೋಗ ಮತ್ತು ವಾಂತಿ, ಜಠರದುರಿತ, ಅತಿಸಾರ, ಮಧುಮೇಹ, ಮಲಬದ್ಧತೆ, ಎಲ್ಲಾ ಕಣ್ಣಿನ ರೋಗಗಳು, ಮುಟ್ಟಿನ ಅಸ್ವಸ್ಥತೆಗಳು, ಕಿವಿ, ಮೂಗು ಮತ್ತು ಗಂಟಲಿನ ರೋಗಳಂತಹ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.

 • ಪ್ರಪಂಚದಾದ್ಯಂತ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಪದ್ದತಿಯನ್ನು ವಾಟರ್ ಥೆರಪಿ ಎಂದೇ ಕರೆಯಲಾಗುತ್ತದೆ. ಹಾಗಾದರೆ ಯಾವ ರೀತಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಎಷ್ಟು ನೀರು ಕುಡಿಯಬೇಕು..?
 • ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜುವ ಮುನ್ನ 160 ಮಿಲಿ ನೀರನ್ನು 4 ಬಾರಿ ಕುಡಿಯಿರಿ.(ಒಟ್ಟು 640 ಮಿಲಿ)
 • ಹಲ್ಲುಗಳನ್ನು ಉಜ್ಜಿದ ನಂತರ 45 ನಿಮಿಷಗಳಲ್ಲಿ ಏನನ್ನು ತಿನ್ನಬೇಡಿ ಅಥವಾ ಕುಡಿಯಬೇಡಿ.
 • 45 ನಿಮಿಷಗಳ ನಂತರ ಆಹಾರವನ್ನು ತಿನ್ನಬಹುದು ಮತ್ತು ನೀರನ್ನು ಕುಡಿಯಬಹುದು.
 • ಉಪಹಾರದ ಮತ್ತು ಭೋಜನದ ನಂತರ ಎರಡು ಗಂಟೆಗಳ ಕಾಲ ಏನನ್ನು ತಿನ್ನಬೇಡಿ ಮತ್ತು ನೀರನ್ನು ಕುಡಿಯಬೇಡಿ.
 • ವೃದ್ಧರು ಅಥವಾ ಅನಾರೋಗ್ಯ ದಿಂದ ಇರುವವರು ಬೆಳಿಗ್ಗೆ ಎದ್ದ ಕೂಡಲೇ 640 ಮಿಲಿ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲವೋ ಅವರು ಎಷ್ಟು ಸಾಧ್ಯವೋ ಅಷ್ಟು ನೀರನ್ನು ಕುಡಿಯಲು ಪ್ರಾರಂಭಿಸಬೇಕು, ತದನಂತರ ಪ್ರತಿನಿತ್ಯ ಅಗತ್ಯವಿರುವ 640 ಮಿಲಿಮರನ್ನು ತಲುಪುವವರೆಗೆ ಈ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಬೇಕು.

ಎಷ್ಟು ದಿನಗಳ ವರೆಗೆ ಈ ರೀತಿಯಾಗಿ ನೀರನ್ನು ಕುಡಿಯಬೇಕು.?

 • ಅಧಿಕ ರಕ್ತದೊತ್ತಡ ಇದ್ದಲ್ಲಿ – 30 ದಿನಗಳ ಕಾಲ
 • ಜಠರದುರಿತಕ್ಕೆ – 10 ದಿನಗಳ ಕಾಲ
 • ಮಧುಮೇಹ – 30 ದಿನಗಳ ಕಾಲ
 • ಮಲಬದ್ಧತೆಗೆ – 10 ದಿನಗಳ ಕಾಲ
 • ಟಿಬಿ – 90 ದಿನಗಳ ಕಾಲ

ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿರುವ ನೀರನ್ನು ಖಾಲಿ ಹೊಟ್ಟೆಯಲ್ಲಿ ಕೂಡಿದರೆ ಏನೆಲ್ಲ ಪ್ರಯೋಜನಗಳುಂಟು ಗೊತ್ತೇ? ಮುಂದೆ ಓದಿ..

ಬೆಳಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಕುಡಿಯುವುದರಿಂದ ದೊಡ್ಡಕರುಲೀನ ಕ್ರಿಯೆ ಸರಾಗವಾಗುತ್ತದೆ ಮತ್ತು ಇದರಿಂದ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.  ದೇಹದಲ್ಲಿನ ವಿಷಕಾರಕ ಅಂಶಗಳು ಹೊರಹೋಗುತ್ತವೆ. ಆಹಾರ ಮತ್ತು ಉಸಿರಾಟದ ಮೂಲಕ ದೇಹವನ್ನು ಹೊಕ್ಕ ವಿಷಕಾರಕ ಅಂಶಗಳು ನೀರಿನ ರೂಪದಲ್ಲಿ ಮೂತ್ರವಿಸರ್ಜನೆಯ ಮೂಲಕ ದೇಹದಿಂದ ಹೊರಹೋಗುತ್ತವೆ.

ಹೊಸ ರಕ್ತ ಮತ್ತು ಸ್ನಾಯು ಕೋಶಗಳ ಸಂರಚನೆ ಸಾಧ್ಯವಾಗುತ್ತದೆ.  ದೇಹದ ತೂಕ ಇಳಿಸಿಕೊಳ್ಳಲು ಆವಶ್ಯಕ. ಬೆಳಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಉತ್ತಮಗೊಳ್ಳುತ್ತದೆ.  ನಿರ್ಜಲೀಕರಣದ (ಡೀಹೈಡ್ರೇಷನ್) ಸಮಸ್ಯೆಯಿಂದಾಗಿ ಉಂಟಾಗುವ ತಲೆನೋವನ್ನು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಗೆ ಮುಕ್ತಿ ಜೊತೆಗೆ ತಲೆನೋವೂ ಪರಿಹಾರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯಶಾಲಿಯಾಗಿ ಕಾಣುವ ಚರ್ಮ, ನೀರು ರಕ್ತದಲ್ಲಿನ ವಿಷವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಚರ್ಮವು ತಿಳಿಗೊಳ್ಳುತ್ತದೆ ಮತ್ತು ನಯವಾಗಿ ಹೊಳೆಯುತ್ತಿರುತ್ತದೆ.  ನಿಮ್ಮ ದುಗ್ಧ ಗ್ರಂಥಿ ವ್ಯೂಹವನ್ನು ಸಮತೋಲನದಲ್ಲಿ ಇಡುತ್ತದೆ. ಈ ಗ್ರಂಥಿಗಳು ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಸಹಾಯ ಮಾಡುತ್ತವೆ. ನಿಮ್ಮ ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತವೆ ಮತ್ತು ರೋಗಾಣುಗಳ ವಿರುದ್ಧ ಹೋರಾಡುತ್ತವೆ.

Also Read: ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳ