ನಿಯತವಾಗಿ ಕಲ್ಲಂಗಡಿ ಹಣ್ಣು ತಿನ್ನೋದಕ್ಕೆ ಶುರು ಮಾಡಿದ್ದೇ ಆದರೆ, ಮಾತ್ರೆಗಳನ್ನು ತಿನ್ನೋ ಪ್ರಮೇಯನೇ ಬರೋಲ್ಲ!!

0
2009

ಕಲ್ಲಂಗಡಿ ಹಣ್ಣು ತಾಜವಾದ ಮುಖ್ಯ ಹಣ್ಣುಗಳಲ್ಲಿ ಒಂದು. ಇದನ್ನು ಆರೋಗ್ಯದ ಖಜಾನೆ ಎಂದೇ ಪರಿಗಣಿಸಲಾಗಿದ್ದು, ಯಥೇಚ್ಚವಾದ ನೀರು ಸಿಹಿ ರೂಪದಲ್ಲಿ ಇರುವುದು ನಿಸರ್ಗದ ಒಂದು ಅದ್ಭುತ. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಎಲ್-ಸಿಟ್ರುಲೈನ್ ಎಂಬ ಅರೋಗ್ಯಕರ ರಾಸಾಯನಿಕ ವಸ್ತು ಇರುತ್ತದೆ. ಇದನ್ನು ಸೇವಿಸಿದರೆ ಅಮೈನೋ ಆಮ್ಲಗಳು ಬಿಡುಗಡೆಯಾಗುತ್ತದೆ. ಒಂದು ಕಪ್‌ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 46 ಕ್ಯಾಲರಿ ಇರುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್‌ ಸಿ, ವಿಟಾಮಿನ್‌ ಎ ಮತ್ತು ಹಲವಾರು ಆರೋಗ್ಯ ಲಾಭಗಳಿವೆ.

ವಿಟಮಿನ್ ಗಳ ಆಗರ ಕಲ್ಲಂಗಡಿ ಹಣ್ಣು ಶೇಕಡಾ 91.5 ರಷ್ಟು ನೀರಿನಂಶ ಹೊಂದಿದೆ. ಇಲ್ಲಿ ನಾವು ಕಲ್ಲಂಗಡಿ ಹಣ್ಣನ್ನು ನೈಸರ್ಗಿಕ ಔಷಧವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತಿದ್ದೇವೆ.

೧. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಇದರಲ್ಲಿರುವ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಅಂಶದಿಂದಾಗಿ ಬ್ಲಡ್‌ ಪ್ರೆಶರ್‌ ಕಡಿಮೆಯಾಗುತ್ತದೆ. ಪೊಟ್ಯಾಶಿಯಂನಿಂದ ಟೆನ್ಶನ್‌ ಮತ್ತು ಒತ್ತಡ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ ಕೂಡ ಕಡಿಮೆಯಾಗುತ್ತದೆ. ಮತ್ತು ನಿತ್ಯವೂ ಕಲ್ಲಂಗಡಿ ಬೀಜದ ಪುಡಿಯನ್ನು ಸಕ್ಕರೆಯೊಂದಿಗೆ ಸೇವಿಸಿದರೆ ಅದು ಶಕ್ತಿವರ್ಧಕ ಟಾನಿಕ್ ನಂತೆ ಕೆಲಸ ಮಾಡುತ್ತದೆ. ದೇಹದಲ್ಲಿನ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ.

೨. ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್(nitric oxide) ಉತ್ಪತ್ತಿಗೆ ಸಹಾಯಮಾಡುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

೩. ನೋಯುತ್ತಿರುವ ಸ್ನಾಯುಗಳನ್ನು ತಗ್ಗಿಸುತ್ತದೆ

ಇದರಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.

೪. ದೇಹ ತೂಕ ಕಡಿಮೆಯಾಗುತ್ತದೆ

ಕಲ್ಲಂಗಡಿ ಹಣ್ಣು ಕಡಿಮೆ ಕ್ಯಾಲರಿ ಹೊಂದಿದ್ದು, ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಒಳ್ಳೆಯದು. ಇದನ್ನು ಪ್ರತಿದಿನ ರಾತ್ರಿ ಸೇವಿಸಿದರೆ ದೇಹ ತೂಕ ಕಡಿಮೆಯಾಗುತ್ತದೆ. ಇದು ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುತ್ತದೆ.

೫. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ವಿಟಮಿನ್ ಎ, ಬಿ6 ಮತ್ತು ಸಿ ಹೇರಳವಾಗಿದೆ. ಇದಲ್ಲದೆ ಪೊಟೇಷಿಯಂ, ಆಂಟಿ ಆಕ್ಸಿಡೆಂಟ್ ಕೂಡಾ ಇದೆ. ಇದರಲ್ಲಿರುವ ಪೋಷಕಾಂಶಗಳ ಅಂಶ ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

೬. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ಕಲ್ಲಂಗಡಿ ಹಣ್ಣನ್ನು ನಿತ್ಯ ಸೇವಿಸುವುದರಿಂದ ವಿಟಮಿನ್ ‘ಎ’ ಕೊರತೆಯನ್ನು ನಿವಾರಿಸಿ ಕಣ್ಣುಗಳ ರಕ್ಷಣೆ ಮಾಡುತ್ತದೆ. ಇದು ಹಲವು ದೃಷ್ಠಿದೋಷಗಳನ್ನು ನಿವಾರಣೆ ಮಾಡುತ್ತವೆ.

೭. ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ

ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು (anatioxidants) ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಅಂಶ ಅಧಿಕವಿದೆ. ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.

೮. ದೇಹವನ್ನು ಸಮತೋಲನವಾಗಿ ಇಟ್ಟುಕೊಳ್ಳುಲು ಸಹಾಯಕ

ತುಂಬಾ ಸುಸ್ತಾದಾಗ ಕಲ್ಲಂಗಡಿ ಹಣ್ಣು ತಿಂದು ನೋಡಿ, ದೇಹದ ಚೈತನ್ಯ ಹೆಚ್ಚಿ ಸುಸ್ತು ಮಾಯವಾಗುವುದು ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.