ನಿಂಬೆ ಹಣ್ಣಿನ ಇಷ್ಟೊಂದು ಆರೋಗ್ಯಕರ ಗುಣ ಕೇಳಿದ್ಮೇಲೆ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದೆಂಬ ಗಾದೆ ನಿಜ ಅನ್ಸುತ್ತೆ…….

0
1561

ನಿಂಬೆಯು ಅತಿಹೆಚ್ಚು ಪ್ರಮಾಣದಲ್ಲಿ ಸಿಟ್ರಸ್ ಆಮ್ಲವನ್ನು ಹೊಂದಿರುವ ಹಣ್ಣು.

೧) ನಿಂಬೆ ಹಣ್ಣಿನ ಶರಬತ್ತನ್ನು ನಿತ್ಯ ಸೇವಿಸಿದರೆ ಹೃದಯಕ್ಕೆ ಒಳ್ಳೆಯದು
೨) ಆರು ಚಮಚದಷ್ಟು ನಿಂಬೆರಸ, ೩ ಚಮಚದಷ್ಟು ಶುಂಠಿ ರಸ, ಒಂದು ಚಿಟಿಕೆ ಉಪ್ಪು,೩ ಚಮಚ ಜೇನು ಇವನ್ನು ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಒಂದು ವಾರ ಸೇವಿಸಿದ್ದಲ್ಲಿ ಅಜೀರ್ಣದ ತೊಂದರೆ ಶಮನ.
೩) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿತ್ಯ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿದರೆ ದೇಹದ ಬೊಜ್ಜು ಕರಗುತ್ತದೆ.


೪) ನಿಂಬೆರಸ, ವೀಳ್ಯದೆಲೆಯ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಕುಡಿಸಿ ಅದಕ್ಕೆ ಚಿಟಿಕೆ ಅರಿಶಿನ ಪುಡಿ ಹಾಗು ಕರಿಜೀರಿಗೆ ಪುಡಿ ಬೆರೆಸಿ ಕಜ್ಜಿ ತುರಿಕೆ ಹುಣ್ಣುಗಳಿಗೆ ಹಚ್ಚಿದರೆ ಸಮಸ್ಯೆ ಕಡಿಮೆಯಾಗುತ್ತದೆ.
೫) ನಿಂಬೆರಸವನ್ನು ತಲೆಗೆ ಹಚ್ಚಿ ೧೫ ನಿಮಿಷಗಳ ಬಳಿಕ ತಲೆಸ್ನಾನ ಮಾಡಿದ್ದಲ್ಲಿ ತಲೆ ಹೊಟ್ಟು ಮಾಯ.


೬) ಅಂಗೈ, ಅಂಗಾಲು ಮತ್ತು ಮೈಚರ್ಮ ಬಿರುಕು ಬಿಟ್ಟಿದ್ದರೆ, ನಿಂಬೆಯ ರಸವನ್ನು ಸವರಿಕೊಳ್ಳಿ. ಒಂದು ಗಂಟೆಯ ಬಳಿಕ ಭಾಧಿತ ಭಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ ಬೆಣ್ಣೆ ಅಥವಾ ಹಾಲುಕೆನೆಯನ್ನು ಹಚ್ಚಿ.
೭) ನಿಂಬೆರಸ ಮತ್ತು ಜೇನನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.


೮)ನಿಂಬೆಯ ಒಣಗಿದ ಸಿಪ್ಪೆಯನ್ನು ಪುಡಿ ಮಾಡಿ ನೀರಿನಲ್ಲಿ ಕಲಸಿ ಹಚ್ಚಿದರೆ ಮುಖದ ಚರ್ಮ ಕಾಂತಿಯುತವಾಗುತ್ತದೆ.
೮)ಬಾಯಿಹುಣ್ಣು ಭಾದಿಸುತ್ತಿದ್ದಲ್ಲಿ ನಿಂಬೆರಸ ಮತ್ತು ಉಪ್ಪನ್ನು ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸಿ.
೯)ನಿಂಬೆರಸಕ್ಕೆ ಏಲಕ್ಕಿ ಪುಡಿ, ಕೇಸರಿ,ಮತ್ತು ಸಕ್ಕರೆ ಬೆರೆಸಿದ ಪಾನಕವನ್ನು ಬೆಳಿಗ್ಗೆ ಹಾಗು ಸಂಜೆ ಸೇವಿಸಿದರೆ ದಣಿವು, ಬಾಯಾರಿಕೆ, ವಾಂತಿ, ಪಿತ್ತ ಮುಂತಾದ ತೊಂದರೆಗಳ ಶಮನವಾಗುತ್ತದೆ.
೧೦) ಎರಡರಿಂದ ನಾಲ್ಕು ಚಮಚದಷ್ಟು ನಿಂಬೆರಸವನ್ನು ಸ್ವಲ್ಪ ನೀರಿಗೆ ಬೆರೆಸಿ ಕುಡಿದರೆ ಎದೆಯುರಿ, ಹುಳಿತೇಗು ನಿವಾರಣೆಯಾಗುತ್ತದೆ.


೧೧)ಒಂದು ಭಾಗದಷ್ಟು ನಿಂಬೆರಸ, ಅಷ್ಟೇ ಪ್ರಮಾಣದ ನೆಲ್ಲಿಕಾಯಿ ರಸ, ಪಚ್ಚೆತೆನೆರಸ, ಎಳ್ಳೆಣ್ಣೆ ಇವನ್ನೆಲ್ಲ ಕುದಿಸಿ ತೈಲ ಮಾಡಿಟ್ಟುಕೊಳ್ಳಿ. ಇದನ್ನು ನಿತ್ಯವೂ ತಲೆಗೆ ಹಚ್ಚಿಕೊಂಡಲ್ಲಿ ಕೂದಲು ಉದುರುವಿಕೆ ನಿಲ್ಲುತ್ತದೆ.
೧೨) ನಿಂಬೆರಸಕ್ಕೆ ಜೇನು ಹಾಗು ಏಲಕ್ಕಿ ಪುಡಿ ಬೆರೆಸಿ ಸೇವಿಸಿದರೆ ವಾಂತಿ ಹಾಗು ಭೇದಿ ಶಮನವಾಗುತ್ತದೆ.