ಅಗಸೆ ಸೊಪ್ಪಿನಲ್ಲಿದೆ ಆರೋಗ್ಯದ ಗುಟ್ಟು..!

0
2738

ಅಗಸೆ ಸೊಪ್ಪು, ಹೂವು ಮತ್ತು ಎಳೆಕಾಯಿಗಳಿಂದ ರುಚಿಕರ ಪಲ್ಯೆ ತಯಾರಿಸುತ್ತಾರೆ. ಅಗಸೆ ಸೊಪ್ಪಿನಲ್ಲಿ ಬಿಳಿ, ಹಳದಿ, ನೀಲಿ, ಕೆಂಪು ಎಂದು ನಾಲ್ಕು ವಿಧಗಳಿರುತ್ತವೆ. ಸಾಮಾನ್ಯವಾಗಿ ಜನರು ಅಧಿಕವಾಗಿ ಬಿಳಿ ಅಗಸೆಯನ್ನು ಬಳಸಲಾಗುತ್ತದೆ.

ಅಗಸೆ ಸೊಪ್ಪಿನಲ್ಲಿರುವ ಔಷಧಿ ಉಪಯೋಗಗಳು

೧. ಅಪಸ್ಮಾರ, ಚಿತ್ತಭ್ರಮಣ ನಿವಾರಣೆ:
ಅಗಸೆ ಎಲೆ, ಶಿಂಠಿ, ಹಿಪ್ಪಲಿ, ಕಾಳುಮೆಣಸುಗಳನ್ನು ಗೋಮೂತ್ರದಲ್ಲಿ ಮೂಸಿ ನೋಡುವಿದರಿಂದ ಉತ್ತಮ ಗುಣ ಕಂಡುಬರುತ್ತದೆ.

೨. ವ್ರಣ (ಕುರು), ಹುಣ್ಣುಗಳು ಮಾಯಲು:
ಎಲೆಗಳನ್ನು ನುಣ್ಣಗಿ ಅರೆದು, ವ್ರಣ (ಕುರು), ಹುಣ್ಣು ಬಾವುಗಳ ಮೇಲೆ ಕಟ್ಟಬೇಕು.

೩. ಅತಿಸಾರ:
ಚಗಟೆಯ ಬೇರನ್ನು ಕುಟ್ಟಿ ರಸ ತೆಗೆದು ೨ ಚಮಚ ರಸಕ್ಕೆ, ಒಂದು ಚಮಚ ಜೇನು ಬೆರೆಸಿ ಸೇವಿಸಬೇಕು.

೪. ಅರ್ಧತೆಲೆನೋವಿಗೆ:
ಎಲೆ ಅಥವಾ ಹೂಗಳು ರಸವನ್ನು ೨-೩ ತೊಟ್ಟು ಮೂಗಿನಲ್ಲಿ ಹಾಕುವುದರಿಂದ ಅರೆತಲೆನೋವು ನಿವಾರಣೆಯಾಗುತ್ತದೆ.

೫. ಉತ್ತಮ ಅರೋಗ್ಯ, ಮತ್ತು ರಕ್ತ ಶುದ್ಧಿಗೆ:
ಎಲೆ ಅಗಸೆ ಸೊಪ್ಪು, ಎಳೆಕಾಯಿ ಮತ್ತು ಹೂವುಗಳಿಂದ ಪಲ್ಯ, ಕಾಳು ಕಟ್ಟು ತಯಾರಿಸಿಕೊಂಡು ಆಹಾರದಲ್ಲಿ ಆಗಾಗ ಉಪಯೋಗಿಸುತ್ತಿರಬೇಕು. ರಕ್ತ ಶುದ್ಧಿಯಾಗಿ ಆರೋಗ್ಯಉಂಟಾಗುವುದು.

೬. ಕ್ಯಾನ್ಸರ್‌ ತಡೆಗಟ್ಟುತ್ತದೆ.
ಅಗಸೆ ಬೀಜವನ್ನು ಆಹಾರವಾಗಿ ಸೇವಿಸುವುದರಿಂದ ಕ್ಯಾನ್ಸರ್‌ ರೋಗಿಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತದೆ ಜರ್ಮನಿಯ ಹೆಡಲ್‌ಬರ್ಗ್‌ನಲ್ಲಿರುವ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ.