ಮಾವಿನ ಮರದ ಭಾಗಗಳ ಆರೋಗ್ಯಕರ ಗುಣ ಗೊತ್ತಾದ್ರೆ ಮನೆ ಮುಂದೆ ಮಾವಿನ ಗಿಡ ನೆಡೋದು ಗ್ಯಾರಂಟಿ…!!

0
1268

ಮಾವಿನ ಹಣ್ಣಿನ ಕಾಲ ಮುಗಿತು ಅಂತ ಬೇಜಾರ್ ಮಾಡ್ಕೋಬೇಡಿ!!! ಅದರ ಮರದ ಭಾಗಗಳ ಆರೋಗ್ಯಕರ ಗುಣ ಗೊತ್ತಾದ್ರೆ ಮನೆ ಮುಂದೆ ಮಾವಿನ ಗಿಡ ನೆಡೋದು ಗ್ಯಾರಂಟಿ. ಮಾವಿನ ತವರೂರು ದಕ್ಷಿಣ ಏಷ್ಯಾ. ಮಾವಿನ ಔಷಧೋಪಯೋಗಿ ಭಾಗಗಳೆಂದರೆ ಕಾಯಿ, ಹಣ್ಣು, ಕಾಂಡದ ಚಕ್ಕೆ, ಬೀಜ, ಎಲೆ ಹಾಗು ಹೂವು.

೧) ಮಾವಿನ ಹಣ್ಣನ್ನು ಇಡಿಯಾಗಿ ತಿಂದು ಅನಂತರ ಒಂದು ಲೋಟ ಹಾಲು ಕುಡಿದರೆ ಮಿದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ.
೨) ಮಾವಿನ ಹಣ್ಣನ್ನು ಜೇನಿನ ಜೊತೆ ಸೇವಿಸಿದರೆ ಹೃದಯಕ್ಕೆ ಹಿತಕರ.
೩) ಎಳೆ ಮಾವಿನಕಾಯಿಯನ್ನು ಸೇವಿಸಿದರೆ ಹಸಿವು ಹೆಚ್ಚುವುದಲ್ಲದೆ ರಕ್ತ ಉತ್ಪತ್ತಿಯಾಗುತ್ತದೆ.


೪) ಮಾವಿನ ಮರದ ಒಳ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಕುಡಿದರೆ ಜ್ವರಯುಕ್ತ ಭೇದಿ ನಿಲ್ಲುತ್ತದೆ.
೫) ಮಾವಿನ ಚಿಗುರು ಹಾಗು ನೇರಳೆ ಚಿಗುರನ್ನು ಸಮಭಾಗ ಸೇರಿಸಿ ಅರೆದು ಅದರ ರಸವನ್ನು ಹಾಲು ಸಕ್ಕರೆಯೊಂದಿಗೆ ನಾಲ್ಕರಿಂದ ಆರು ವಾರಗಳ ವರೆಗೆ ಸೇವಿಸಿದರೆ ಮೂಲವ್ಯಾಧಿಯ ಮೊಳಕೆ ಗುಣವಾಗುತ್ತದೆ.


೬) ಮಾವಿನ ಎಳೆಯಲ್ಲಿ ಕಷಾಯ ರಸವಿದೆ. ಎಲೆಯಿಂದ ಹಲ್ಲು ತಿಕ್ಕಿದಲ್ಲಿ ಶುಭ್ರವಾಗುವುದಲ್ಲದೆ ಹಲ್ಲು & ವಸಡು ಗಟ್ಟಿಯಾಗುತ್ತದೆ.
೭) ಮಾವಿನ ಮರದ ತೊಗಟೆಯ ಕಷಾಯವನ್ನು ರುಮ್ಯಾಟಿಕ್ ಆರ್ಥ್ರೈಟಿಸ್ ದಲ್ಲಿ ಔಷಧವಾಗಿ ಉಪಯೋಗಿಸುತ್ತಾರೆ.
೮)ಮಾವಿನ ಎಳೆಯ ಕಷಾಯ ಮಾಡಿ, ತಣಿಸಿ ಅದಕ್ಕೆ ಜೇನು ಬೆರೆಸಿ ಕುಡಿದರೆ ಕೆಮ್ಮು ಮಾಯವಾಗುತ್ತದೆ ಹಾಗು ಸ್ವರವು ಉತ್ತಮಗೊಳ್ಳುತ್ತದೆ.


೯) ಐದು ಚಮಚದಷ್ಟು ಒಣಗಿದ ಮಾವಿನ ಎಳೆಯ ಚೂರ್ಣವನ್ನು ಕಷಾಯ ಮಾಡಿ ಬೆಳಿಗ್ಗೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ಹಿಡಿತಕ್ಕೆ ಬರುತ್ತದೆ.
೧೦) ಮಾವಿನ ಎಳೆಯ ಚಿಗುರಿನ ಕಷಾಯದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಹಲ್ಲು ಮತ್ತು ವಸಡುಗಳುಆ ನೋವು ಹಾಗು ಬಾವು ಗುಣವಾಗುತ್ತದೆ.
೧೧) ಕೊಯ್ದು ಒಣಗಿಸಿದ ಮಾವಿನಕಾಯಿಯ ಚೂರನ್ನು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಅರೆದು ಚೇಳು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ನೋವು ಉರಿ ಶಮನ.
೧೨) ಹುಳಿಮಾವಿನ ಮರದ ಕೆತ್ತೆಯನ್ನು ಚೂರ್ಣ ಮಾಡಿ ಒಂದು ತಾಮ್ರದ ಪಾತ್ರೆಯಲ್ಲಿ ಹಾಕಿ ಅದಕ್ಕೆ ಹುಳಿಮಜ್ಜಿಗೆ ಬೆರೆಸಿ ಒಂದು ದಿನ ನೆನೆಸಿಟ್ಟು ಮೈಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಇಸುಬು ಕಜ್ಜಿ ಗುಣವಾಗುತ್ತದೆ