ಈ ಸಾಸಿವೆ ಎಣ್ಣೆ ಕೇವಲ ಆರೋಗ್ಯಕ್ಕೆ ಮಾತ್ರ ಒಳ್ಳೇದಲ್ಲ, ನಿಮ್ಮ ಸೌಂದರ್ಯಕ್ಕೂ ಇದು ಬಲು ಉಪಯೋಗಕಾರಿಯಾಗಿದೆ!!

0
1192

ಅಡುಗೆಯಲ್ಲಿ ಅದರಲ್ಲೂ ಹೆಚ್ಚಾಗಿ ಉಪ್ಪಿನಕಾಯಿ ಕೆಡದಂತೆ ಮತ್ತು ರುಚಿ ಹೆಚ್ಚಿಸಲು ಬಳಸಲಾಗುವ ಸಾಸಿವೆ ಎಣ್ಣೆ ಎಷ್ಟು ಆರೋಗ್ಯವರ್ಧಕವೋ ಸೌಂದರ್ಯದ ದೃಷ್ಟಿಯಲ್ಲೂ ತನ್ನದೇ ಆದ ಮಹತ್ವದ ಪಾತ್ರ ಹೊಂದಿದೆ. ಸುಂದರ ಕೇಶ ಮತ್ತು ತ್ವಚೆ ಹೊಂದಲು ದುಬಾರಿ ಕಾಸ್ಮೆಟಿಕ್ಸ್ ಬಳಸಿ ಸೋತಿದ್ದರೆ ಒಮ್ಮೆ ಸಾಸಿವೆ ಎಣ್ಣೆ ಪ್ರಯೋಗಿಸಿ ನೋಡಿ ಎನ್ನುತ್ತಾರೆ ಸೌಂದರ್ಯತಜ್ಞರು.

ಕೇಶ ಸೌಂದರ್ಯಕೂದಲಿಗೆ ನಿಯಮಿತವಾಗಿ ಸಾಸಿವೆ ಎಣ್ಣೆಯನ್ನು ಹಚ್ಚುತ್ತಾ ಬಂದಲ್ಲಿ ಕೂದಲು ಅಕಾಲಿಕ ಬೆಳ್ಳಗಾಗುವುದಿಲ್ಲ. ಸಾಸಿವೆ ಎಣ್ಣೆಯಲ್ಲಿರುವ ವಿಟಮಿನ್, ಮಿನರಲ್, ಐರನ್, ಕ್ಯಾಲ್ಷಿಯಂ ಅಂಶ ಕೂದಲಿಗೆ ದೊರೆಯುವುದರಿಂದ ಕೂದಲ ಬುಡ ಗಟ್ಟಿಯಾಗಿ ಕೇಶಾರೋಗ್ಯ ಹೆಚ್ಚುತ್ತದೆ.

ಕೂದಲು ಸೊಂಪಾಗಿ, ಕಪ್ಪಾಗಿ ಬೆಳೆಯುತ್ತದೆ. ಮಸಾಜ್ ಎಣ್ಣೆಆಲೀವ್ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಬಿಸಿ ಮಾಡಿ ಉಗುರುಬೆಚ್ಚಗಾದಾಗ ಕೂದಲಿಗೆ ಮಸಾಜ್ ಮಾಡುತ್ತಾ ಬಂದಲ್ಲಿ ಕೂದಲುದುರುವ ಸಮಸ್ಯೆ ಇಲ್ಲವಾಗುತ್ತದೆ. ವಾರದಲ್ಲಿ ಎರಡು ಬಾರಿ ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಬೇಗ ಬೆಳ್ಳಗಾಗುವುದಿಲ್ಲ. ಜೊತೆಗೆ ಫಂಗಲ್ ಸಮಸ್ಯೆಯೂ ಇಲ್ಲವಾಗುತ್ತದೆ.ಚರ್ಮದ ರಕ್ಷಣೆಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿರುವ ಕಾರಣ ನೈಸರ್ಗಿಕವಾಗಿ ಸನ್‍ಸ್ಕ್ರೀನ್ ತರಹ ಕೆಲಸ ಮಾಡುತ್ತದೆ.

ಒಂದು ದೊಡ್ಡ ಚಮಚ ಕಡಲೆಹಿಟ್ಟಿನಲ್ಲಿ ಸ್ವಲ್ಪ ಚಂದನ ಪೌಡರ್, ಜೇನುತುಪ್ಪ ಮತ್ತು ಸಾಸಿವೆ ಎಣ್ಣೆ ಬೆರೆಸಿ ಮಿಶ್ರಣ ತಯಾರಿಸಿ. ಮುಖದ ಮೇಲೆ ಹಗುರವಾಗಿ 10 ನಿಮಿಷ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ಶುದ್ಧ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಮೇಲಣ ನೆರಿಗೆ, ಸುಕ್ಕು, ಗೆರೆಗಳು ಮಾಯವಾಗುತ್ತದೆ.