ಕೆಂಪು ವೈನ್ ಸೇವಿಸಿದರೆ ನಿಮ್ಮ ಆರೋಗ್ಯ ಹೇಗೆ ಉತ್ತಮಗೊಳ್ಳುತ್ತದೆ ಅಂತ ಓದಿ!!

0
3084

Kannada News | Health tips in kannada

ವೈನ್ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬ ತರ್ಕವನ್ನು ನೀವು ಇಟ್ಟುಕೊಂಡು ವೈನ್ ಸೇವನೆಯನ್ನು ಮಾಡುತ್ತಿದ್ದಲ್ಲಿ, ನಿಮಗೊಂದು ಸಂತಸದ ಸುದ್ದಿ. ನಿಮ್ಮ ತರ್ಕವು ಸಂಪೂರ್ಣವಾಗಿ ಸರಿಯಾಗಿಲ್ಲದಿದ್ದರು, ಸರಿ ಎಂದು ಕರೆಯುವುದಕ್ಕೆ ಹತ್ತಿರದಲ್ಲಿ ನೀವಿದ್ದೀರಿ. ಅಧ್ಯಯನಗಳ ಪ್ರಕಾರ ದ್ರಾಕ್ಷಿಗಳಲ್ಲಿ, ರೆಸ್ವರೇಟ್ರೊಲ್ ಎಂಬ ಅಂಶವು ಇರುತ್ತದೆ. ಅದರಿಂದ ವೈನ್ ಅನ್ನು ತಯಾರಿಸಲಾಗುತ್ತದೆ. ಇದೊಂದು ಆಕ್ಸಿಡೆಂಟ್ ಆಗಿದ್ದು, ಅದು ರಕ್ತ ನಾಳಗಳು ಹಾನಿಗೊಳ್ಳುವುದನ್ನು ತಡೆಯುತ್ತದೆ. ಆ ಮೂಲಕ ’ಕೆಟ್ಟ ಕೊಲೆಸ್ಟ್ರಾಲ್’ ನಿಮ್ಮ ದೇಹದಲ್ಲಿ ಶೇಖರಣೆಯಾಗುವುದನ್ನು ತಡೆಯುತ್ತದೆ. ಈ ರೆಸ್ವರೇಟ್ರೊಲ್ ದ್ರಾಕ್ಷಿ ಹಣ್ಣಿನ ತ್ವಚೆಯಲ್ಲಿ ಇರುತ್ತದೆ. ಜೊತೆಗೆ ವೈನ್ ಮಾಡುವಾಗ ಹುದುಗು ಬರುವ ಪ್ರಕ್ರಿಯೆಯು (ಫರ್ಮೆಂಟೇಶನ್)  ವೈನ್ ಅನ್ನು ಹೃದಯಕ್ಕೆ ಉತ್ತಮ ಪಾನೀಯವನ್ನಾಗಿ ಮಾಡುತ್ತದೆ.

ಕೆಂಪು ವೈನ್ ಅನ್ನು ವಾರದಲ್ಲಿ ಎರಡು ಬಾರಿ ನಿಯಮಿತವಾಗಿ ಕುಡಿದಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಅರಿತುಕೊಳ್ಳುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಇಲ್ಲಿದೆ ಆ ಸಂಗತಿಗಳನ್ನು ತಿಳಿದುಕೊಳ್ಳಿ.

1. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ: ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಒಂದು ಗ್ಲಾಸ್ ಕೆಂಪು ವೈನ್ ಸಾಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಫ್ರೀ ರ್ಯಾಡಿಕಲ್ ಕಣಗಳ ವಿರುದ್ಧ ಹೋರಾಡಲು ನೆರವು ನೀಡುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.

2. ಉತ್ತಮ ನಿದ್ದೆಗಾಗಿ ನಿಮ್ಮ ನರಗಳನ್ನು ಶಾಂತಗೊಳಿಸಿ ರಾತ್ರಿಸಮಯದಲ್ಲಿ ನಿಮ್ಮ ಒತ್ತಡವನ್ನು ನಿವಾರಿಸಿ ಉತ್ತಮ ನಿದ್ದೆಯನ್ನು ರೆಡ್ ವೈನ್ ದಯಪಾಲಿಸಲಿದೆ.

3. ರೋಗ ನಿರೋಧಕ ಸಾಮರ್ಥ್ಯ ಹೆಚ್ಚಳ: ರೆಡ್ ವೈನ್ ಇಲ್ಲವೇ ಕೆಂಪು ವೈನ್‌ನಲ್ಲಿರುವ ರೋಗನಿರೋಧಕ ಶಕ್ತಿಗಳು ನಿಮ್ಮಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಿಮ್ಮ ದೇಹದ ಕೋಶಗಳನ್ನು ದೃಢಗೊಳಿಸಿ ನಿಮ್ಮನ್ನು ರೋಗಗಳಿಂದ ಮುಕ್ತಗೊಳಿಸಲಿದೆ.

4. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ರಾತ್ರಿ ವೇಳೆಯಲ್ಲಿ ಒಂದು ಲೋಟದಷ್ಟು ರೆಡ್ ವೈನ್ ಅನ್ನು ಸೇವಿಸುವುದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ಎಂದೆನಿಸಲಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮಗೆ ಈ ದಿಸೆಯಲ್ಲಿ ಸಹಾಯ ಮಾಡಲಿವೆ.

watch

5. ಸಣ್ಣ ಪ್ರಾಯದಲ್ಲೇ ವಯಸ್ಸಾಗುವುದನ್ನು ತಡೆಯುತ್ತದೆ ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮನ್ನು ಬೇಗನೇ ವಯಸ್ಸಾಗದಂತೆ ತಡೆಯುತ್ತದೆ.

6. ತೂಕ ಇಳಿಕೆಗೆ ನಿಮ್ಮಲ್ಲಿರುವ ಚಯಾಪಚಯ ಶಕ್ತಿಯನ್ನು ರೆಡ್ ವೈನ್ ಉತ್ತಮಗೊಳಿಸಲಿದ್ದು ಇದರಿಂದ ಆಹಾರ ಜೀರ್ಣಕ್ರಿಯೆ ಬೇಗನೇ ನಡೆಯಲಿದೆ.

7. ಮೂಳೆಗಳನ್ನು ಸುದೃಢಗೊಳಿಸುತ್ತದೆ: ನಿಮ್ಮ ಮೂಳೆಗಳ ಸಾಮರ್ಥ್ಯವನ್ನು ಕೆಂಪು ವೈನ್ ಬಲಪಡಿಸಲಿದ್ದು ಇದು ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳುತ್ತದೆ ಇದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತದೆ.

8. ಮೆದುಳಿನ ಜೀವಕೋಶದ ಹಾನಿ ತಡೆಯುತ್ತದೆ :ರೆಡ್ ವೈನ್‌ನ ಆರೋಗ್ಯಕಾರಿ ಗುಣಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. ರೆಡ್ ವೈನ್ ಕುಡಿಯುವ ವ್ಯಕ್ತಿಯ ಮೆದುಳು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಇದು ಯಾಕೆಂದರೆ ರೆಡ್ ವೈನ್ ನಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರ್‍ಯಾಡಿಕಲ್ ನ ದಾಳಿಯನ್ನು ತಡೆಯುತ್ತದೆ. ಫ್ರೀ ರ್‍ಯಾಡಿಕಲ್‌ನಿಂದ ಮುಕ್ತವಾಗಿರುವ ಮೆದುಳು ಯಾವಾಗಲೂ ಹದಿಹರೆಯದಂತ ಇರುತ್ತದೆ. ಇದು ಅನುವಂಶಕಿ ದೂರ ಮತ್ತು ಸಾವನ್ನು ದೂರ ಮಾಡುತ್ತದೆ.

 ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವ ನಿಟ್ಟಿನಲ್ಲಿ ದಿನ ನಿತ್ಯ 200 ರಿಂದ 300 ಎಂಜಿ ವೈನ್ ಸೇವಿಸಬೇಕು. ಅದಕ್ಕಿಂತ ಹೆಚ್ಚು ಕುಡಿಯುವ ಆಸೆಯನ್ನು ಮಾತ್ರ ಹತ್ತಿಕ್ಕಿಕೊಳ್ಳಲೇಬೇಕು.

also read: ಮದುವೆಯ ಮುನ್ನ ದೈಹಿಕ ಸಂಬಂಧ ಯಾಕೆ ತಪ್ಪು ಅಂತ ಓದಿ!!