ಅಕ್ಕಿ ತೊಳೆದ ನೀರನ್ನು ಬಿಸಾಡಬೇಡಿ, ಅದರಿಂದ ಏನೇನು ಉಪಯೋಗಗಳಿವೆ ಅಂತ ಹೇಳ್ತಿವಿ ನೋಡಿ!!

0
3552

Kannada News | Health tips in kannada

ಸಾಮಾನ್ಯವಾಗಿ ನಾವು ಮನೆಯಲ್ಲಿ  ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ…

ಆದರೆ ಆ ನೀರಿನಿಂದ ನಮ್ಮ ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ. ಪ್ರಾಯದಲ್ಲಿ ತೊಂದರೆ ಮಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಮೊಡವೆಗಳು. ಮುಖದ ಅಂದವನ್ನು ಹಾಳುಮಾಡುವ ಇವು ನಮಗೆ ತೊಂದರೆಯನ್ನು ಕೊಡುತ್ತವೆ. ಅವುಗಳನ್ನು ಕಡಿಮೆ ಮಾಡಿಕೊಳ್ಳಲು ನಾನಾ ತರದ ಕ್ರೀಮ್’ಗಳನ್ನು ಬಳಸುತ್ತೇವೆ. ಏನೇ ಮಾಡಿದರೂ ಮೊಡವೆಗಳು ಕಡಿಮೆಯಾಗುವುದು ಇರಲಿ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಮೊಡವೆಗಳ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ತಜ್ಞರು ಒಂದು ಪರಿಹಾರ ಮಾರ್ಗವನ್ನು ಸೂಚಿಸಿದ್ದಾರೆ.

Watch:

ಹದಿನೈದು ನಿಮಿಷದಲ್ಲಿ ಎರಡು ಬಾರಿ ಅಕ್ಕಿ ತೊಳೆದ ನೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ಮೇಲಿರುವ ರಾಷೆಸ್ ಕಡಿಮೆಯಾಗುತ್ತವೆ. ಈ ನೀರಿನಲ್ಲಿರುವ ವಿಟಮಿನ್ಸ್, ಮಿನರಲ್ಸ್ ಚರ್ಮಕ್ಕೆ ಅಷ್ಟೇ ಅಲ್ಲದೇ ಕೂದಲಿಗೂ ಸಹ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆಯಂತೆ.

ಮೊಡವೆಗಳ ಮೇಲೆ ಅಕ್ಕಿ ತೊರೆದ ನೀರು ಪ್ರಭಾವ ಬೀರುತ್ತದೆ. ಅಕ್ಕಿ ತೊಳೆದ ನೀರಿನಲ್ಲಿ ಟಿಷ್ಯು ಪೇಪರ್ ಅನ್ನು ಮುಳಗಿಸಿ ಮುಖಕ್ಕೆ ಅಪ್ಲೇ ಮಾಡುವುದರಿಂದ ನಿಮ್ಮ ಮುಖ ಫ್ರೆಶ್ ಆಗಿ, ಮೃದುವಾಗುತ್ತದೆ. ಈ ನೀರಿನಿಂದ ಮುಖದಲ್ಲಿ ರಾಷೆಸ್ ಇರುವ ಜಾಗದಲ್ಲಿ ಉಜ್ಜಿದರೆ ಗುಣವಾಗುತ್ತದೆ

Also Read: ಹುಷಾರ್ ನೀವು ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣು ಸೇವಿಸಿದರೆ ನಿಮ್ಮ ಸಾವಿಗೆ ನೀವೇ ಮುನ್ನುಡಿ ಬರೆದಂತೆ..!