ಶ್ರೀಗಂಧ ದೇವ್ರಿಗಷ್ಟೇ ಅಲ್ರಿ ದೇಹಕ್ಕೂ ಅಷ್ಟೇ ಶ್ರೇಷ್ಠ….!

0
1456

Kannada News | Health tips in kannada

-ಶ್ರೀಗಂಧಯುಕ್ತ ಜಲಪಾನ ಮಾಡುವುದರಿಂದ ಶ್ರಮ ಪರಿಹಾರವಾಗುವುದು, ಬಾಯಾರಿಕೆ ತೀರುವುದು.

-ತೇದ ಶ್ರೀಗಂಧವನ್ನು ಸೇವಿಸುವುದರಿಂದ ವಿಷ ನಿವಾರಣೆಯಾಗುವುದು, ಕಫ ಕರಗಿ ನೀರಾಗುವುದು, ಪಿತ್ತ ಶಮನವಾಗುವುದು, ರಕ್ತ ದೋಷಗಳು ಪರಿಹಾರವಾಗುವುದು.

-ಶ್ರೀಗಂಧವನ್ನು ತಲೆಗೆ ಹಚ್ಚುವುದರಿಂದ ತಲೆಶೂಲೆ ಉಂಟಾಗುವುದಿಲ್ಲ.

-ಶ್ರೀಗಂಧವನ್ನು ತೇದು ಎಳನೀರಿನೊಂದಿಗೆ ಮಿಶ್ರ ಮಾಡಿ ಕುಡಿಸುವುದರಿಂದ ಬಾಯಾರಿಕೆ ನಿವಾರಣೆಯಾಗುವುದು.

-ಶ್ರೀಗಂಧದ ಕಷಾಯ ಸೇವಿಸುವುದರಿಂದ ಉರಿಮೂತ್ರ ನಿವಾರಣೆಯಾಗುವುದು.

-ತೇದ ಶ್ರೀಗಂಧವನ್ನು ಹಚ್ಚುವುದರಿಂದ ನಾವೇ, ಕಜ್ಜಿ, ತುರಿಕೆ ಇತ್ಯಾದಿ ಚರ್ಮರೋಗಗಳು ಗುಣವಾಗುವವು.

-ಮೊಸರಿನಲ್ಲಿ ಶ್ರೀಗಂಧವನ್ನು ತೇದು ಹಚ್ಚಿದ್ದಲ್ಲಿ ತುರಿಕಜ್ಜಿ, ಚಿಬ್ಬು ಗುಣವಾಗುವುದು.

-ಶ್ರೀಗಂಧವನ್ನು ಅರಿಶಿನ ಕೊಂಬನ್ನು ತೇದು ಗಂಧ ತೆಗೆದು ಹಾಲಿನೊಂದಿಗೆ ಬೆರೆಸಿ ಮೊಡವೆಗಳಿಗೆ ಹಚ್ಚಿದ್ದಲ್ಲಿ ಗುಣ ಕಂಡುಬರುವುದು.

-ಶ್ರೀಗಂಧವನ್ನು ನೀರಿನಲ್ಲಿ ತೇದು ಸಿಡುಬಿನ ವ್ರಣಗಳಿಗೆ ಲೇಪಿಸಿದರೆ ಉರಿ, ತುರಿಕೆ ಕಡಿಮೆಯಾಗುತ್ತದೆ.

Watch:

-ಒಂದು ಲೋಟ ನೀರಿಗೆ ನಿಂಬೆ ರಸ ಮತ್ತು ತೇದ ಗಂಧವನ್ನು ಬೆರೆಸಿ ಬಾಯಿ ಮುಕ್ಕಳಿಸುತ್ತಿದ್ದರೆ ವಸಡು ಗಟ್ಟಿಯಾಗುವುದು, ಬಾಯಿಯ ದುರ್ಗಂಧ ನಿವಾರಣೆಯಾಗುವುದು.

-ಗಂಧದಪುಡಿಯನ್ನು ನೀರಿನಲ್ಲಿ ಕದಡಿ ಮೈಗೆ ಲೇಪಿಸಿದ್ದಲ್ಲಿ ಬೆವರಿನ ವಾಸನೆ ತೊಲಗಿ ಆಯಾಸ ಪರಿಹಾರವಾಗುವುದು.

-ಬಿರುಕು ಬಿಟ್ಟ ಚರ್ಮಕ್ಕೆ ಶ್ರೀಗಂಧವನ್ನು ತೇದು ಹಸುವಿನ ಬೆಣ್ಣೆಯಲ್ಲಿ ಬೆರೆಸಿ ಹಚ್ಚಿದ್ದಲ್ಲಿ ಗುಣವಾಗುವುದು.

-ಶ್ರೀಗಣಧವನ್ನು ಜೇನಿನಲ್ಲಿ ತೇದು ನಾಲಿಗೆ ಮೇಲೆ ಹಚ್ಚುತ್ತಿದ್ದರೆ ನಾಯಿ ಕೆಮ್ಮು ಶಮನವಾಗುವುದು.

-ಶ್ರೀಗಂಧವನ್ನು ನೆಲ್ಲಿಕಾಯಿರಸದೊಂದಿಗೆ ತೇದು, ಜೇನಿನೊಂದಿಗೆ ಮಿಶ್ರ ಮಾಡಿ ಸೇವಿಸುವುದರಿಂದ ವಾಂತಿ ನಿಲ್ಲುವುದು.

Also Read: ಹರಳೆಣ್ಣೆಯಿಂದ ಕೇವಲ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ ಅದರಿಂದ ಇಷ್ಟೊಂದು ಲಾಭಗಳು ಇವೆ ಅಂತ ತಿಳಿದುಕೊಂಡರೆ ಬೆರಗಾಗ್ತೀರಾ..!!