ತುಳಸಿ ನೀರಿನಲ್ಲಿರುವ ಔಷಧೀಯ ಅಂಶ ಹಲವಾರು ರೋಗ ರುಜಿನಗಳನ್ನು ದೂರಮಾಡುತ್ತದೆ !! ಇದೆ ಕಾರಣಕ್ಕೆ ನಮ್ಮ ಹಿರಿಯರು ನಿತ್ಯ ತುಳಸಿ ತೀರ್ಥವನ್ನು ಸೇವಿಸುತಿದ್ದಿದ್ದು!!

0
1229

Health Tips In Kannada | Kannada News

ಮನೆಯಂಗಳದಲ್ಲಿರುವ ಪುಟ್ಟ ತುಳಸಿಯಲ್ಲಿ ಅದೆಷ್ಟು ಔಷಧೀಯ ಗುಣವಿದೆ ಗೊತ್ತೆ? ಹಿಂದುಗಳು ಪೂಜಿಸುವ ಪರಮ ಪವಿತ್ರ ತುಳಸಿ ಔಷಧೀಯ ಹಾಗೂ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿದ್ದು ನಿತ್ಯವೂ ಒಂದೆರಡು ಎಲೆಗಳನ್ನು ತಿನ್ನುವುದ-ರಿಂದ ಸಾಕಷ್ಟು ಲಾಭವಿದೆ.

ಇಂದಿಗೂ ಹಿರಿಯರು ನಿತ್ಯ ತುಳಸಿ ತೀರ್ಥ ಕುಡಿಯುತ್ತಾರೆ. ಇದರರ್ಥ ಮಡಿ, ನೇಮವೆಂದಲ್ಲ. ಅದರಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ದೊರೆಯುವ ಲಾಭವನ್ನು ನಾವು ಪರಿಗಣಿಸಬೇಕು.ಚೆನ್ನಾಗಿ ತೊಳೆದ ನಾಲ್ಕಾರು ತುಳಸಿ ಎಲೆಗಳನ್ನು ಜಜ್ಜಿ ಒಂದು ಲೋಟ ನೀರು, ಚಮಚ ಜೇನಿನೊಂದಿಗೆ ಬೆಳಿಗ್ಗೆಯೇ ಸೇವಿಸಿ. ಮುಕ್ಕಾಲು ಗಂಟೆಯ ನಂತರ ಸ್ವಲ್ಪ ಉಪಹಾರ ಸೇವಿಸಿ ನಿತ್ಯ ಚಟುವಟಿಕೆಗಳನ್ನು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ತುಳಸಿಯ ನೈಸರ್ಗಿಕ ಪೋಷಕಾಂಶಗಳಿಂದ ದೇಹದ ಶಕ್ತಿ ಹೆಚ್ಚಿ, ಆಂಟಿಆಕ್ಸಿಡಾಂಟುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ವೈರಸ್ಸುಗಳ ದಾಳಿಯಿಂದ ಕಾಡುವ ಶಿತ-ನೆಗಡಿಗಳನ್ನು ಕಡಿಮೆ ಮಾಡುತ್ತದೆ. ಶೀತದ ಮೂಲಕ ದೇಹ ಪ್ರವೇಶಿಸುವ ಕೀಟಾಣು, ವೈರಸ್ಸುಗಳನ್ನು ತುಳಸಿಯಲ್ಲಿರುವ ಪೋಷಕಾಂಶಗಳು ಸಮರ್ಥವಾಗಿ ಎದುರಿಸುತ್ತವೆ. ತುಳಸಿ-ಜೇನಿನ ಮಿಶ್ರಣ ಕೆಮ್ಮಿಗೆ ಅತ್ಯುತ್ತಮ ಔಷಧಿ. ಸತತವಾಗಿ ಕಾಡುವ ಕೆಮ್ಮು, ಶ್ವಾಸ ಸಂಬಂಧಿ ತೊಂದರೆಗಳು ಇಲ್ಲವಾಗುತ್ತವೆ. ಕಫವನ್ನೂ ನಿವಾರಿಸುತ್ತದೆ. ಈ ಮಿಶ್ರಣ ಪೇಯದಲ್ಲಿ ಪ್ರತಿಜೀವಕ ಮತ್ತು ಕೀಟಾಣುನಿರೋಧಕ ಗುಣಗಳಿದ್ದು ಚರ್ಮದ ಪೋಷಣೆಗೂ ನೆರವಾಗುತ್ತದೆ, ಅಲರ್ಜಿ ಗಳಿಂದ ರಕ್ಷಣೆ ದೊರೆಯುತ್ತದೆ.

ತುಳಸಿ ನೀರು ಸೇವನೆಯಿಂದ ಮೂತ್ರಪಿಂಡದ ಕಲ್ಲುಗಳು ನಿಧಾನವಾಗಿ ಕರಗತೊಡಗುತ್ತವೆ. ಇದರಿಂದ ಮೂತ್ರಪಿಂಡದ ಕ್ಷಮತೆ ಹೆಚ್ಚಿ, ದೇಹದಲ್ಲಿರುವ ವಿಷಕಾರಿ ವಸ್ತುಗಳು ವಿಸರ್ಜನೆಗೊಂಡು ಆರೋಗ್ಯ ವೃದ್ಧಿಸುತ್ತದೆ. ರಕ್ತದಲ್ಲಿರುವ ಕೊಲೆಸ್ಟಾçಲ್ ಮಟ್ಟ ಕಡಿಮೆಯಗುವುದರಿಂದ ರಕ್ತಪರಿಚಲನೆ ಉತ್ತಮಗೊಂಡು ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ರಕ್ಷಣೆ ದೊರೆಯುತ್ತದೆ.ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಪೋಷಕಾಂಶಗಳು ಮತ್ತು ಆಂಟಿ-ಆಕ್ಸಿಡಾಂಟುಗಳಿದ್ದು, ಸವೆದ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳು ಹುಟ್ಟುತ್ತದೆ. ಹಾಗಾಗಿ ಚರ್ಮದ ಬಿಗುವು ಹೆಚ್ಚುತ್ತದೆ.

Also Read: ನಾರಿನಿಂದ ದೇಹಕ್ಕೆ ಎಷ್ಟೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ ಈಗ್ಲಿಂದಾನೆ ಹಸಿ ತರಕಾರಿ ಹಣ್ಣು ತಿನ್ನಲು ಸ್ಟಾರ್ಟ್ ಮಾಡ್ತೀರಾ…