ತುಂಬೆ ಗಿಡಾನ ಪುಟ್ಟದ್ದು ಅಂತ ನಿರ್ಲಕ್ಷ್ಯ ಮಾಡಬೇಡಿ, ಅದರ ಉಪಯೋಗಗಳು ಬೆಟ್ಟದಷ್ಟಿವೆ..

0
3295

ತುಂಬೆಯು ಅಸಾಧಾರಣ ಔಷಧೀಯ ಗುಣವುಳ್ಳ ಹಿತ್ತಲ ಗಿಡ. ಈ ಗಿಡದ ಬಿಳಿಯ ಹೂವುಗಳು ಜಗದೀಶ್ವರನಿಗೆ ಹೆಚ್ಚು ಪ್ರಿಯ. ತುಂಬೆಯ ಹಸಿರೆಲೆ ಹಲವಾರು ರೋಗಗಳಿಗೆ ರಾಮಬಾಣ.

  • ಎರಡು ಟೀ ಚಮಚ ತುಂಬೆಯ ಸೊಪ್ಪಿನ ರಸದೊಂದಿಗೆ ಕಾಲು ಚಮಚ ಕಾಳುಮೆಣಸಿನ ಚೂರ್ಣ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದ್ದಲ್ಲಿ ನೆಗಡಿ ಸಹಿತವಾದ ಸಾಧಾರಣ ಜ್ವರವಾಗಲಿ, ವಿಷಮ ಶೀತ ಜ್ವರವಾಗಲಿ ಪರಿಹಾರವಾಗುವುದು.

  • ಪಕ್ವವಾದ ತುಂಬೆಯ ಸೊಪ್ಪಿಗೆ ನಾಲ್ಕೈದು ಚಿಟಿಕೆ ಸೈನದವ ಲವಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದ್ದಲ್ಲಿ ಅಜೀರ್ಣ ನಿವಾರಣೆಯಾಗುವುದು.

  • ಒಂದು ಟೀ ಚಮಚ ತುಂಬೆ ರಸವನ್ನು ಅಷ್ಟೇ ಪ್ರಮಾಣದ ನಿಂಬೆಯ ರಸದೊಂದಿಗೆ ಬೆರೆಸಿ ಚಿಟಿಕೆ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಮಹಿಳೆಯರು ಸೇವಿಸಿದ್ದಲ್ಲಿ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವು ಶಮನವಾಗುವುದು.

  • ಒಂದು ಭಾಗ ತುಂಬೆರಸದೊಂದಿಗೆ ಎರಡು ಭಾಗ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅರಿಶಿನ ಖಾಮಾಲೆ ಗುಣವಾಗುವುದು.

  • ತುಂಬೆ ಸೊಪ್ಪಿನ ರಸದೊಂದಿಗೆ ನಾಲ್ಕೈದು ಕಾಳುಮೆಣಸು ಸೇರಿಸಿ ನುಣ್ಣಗೆ ಅರೆದು ಪ್ರತಿದಿನ ಬೆಳಿಗ್ಗೆ ಸುಮಾರು ಏಳೆಂಟು ಬಾರಿ ಸೇವಿಸಿದ್ದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುವುದು.

  • ತುಂಬೆಯ ರಸವನ್ನು ಲೇಪಿಸುವುದರಿಂದ ನಾವೇ,ತುರಿಕೆ,ಇಸುಬು,ಕಜ್ಜಿ, ಗಜಕರ್ಣ ಮೊದಲಾದ ಚರ್ಮರೋಗಗಳು ನಿವಾರಣೆಯಾಗುವುದು.

  • ತುಂಬೆಯ ಸೊಪ್ಪನ್ನು ಅರೆದು ಬಿಸಿ ಮಾಡಿ ತಲೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ಮಾಯವಾಗುವುದು.