ದೇಹದಲ್ಲಿ ಹೆಚ್ಚು ಉಷ್ಣ ಆಗಿದ್ಯಾ? ತಂಪಾಗಿಸಲು ಕಲ್ಲಂಗಡಿ ತಿನ್ನಿ!!

0
1025

Kannada News | Health tips in kannada

ಆಫ್ರಿಕಾ ಮೂಲದ ಕಲ್ಲಂಗಡಿ ಹಣ್ಣು ಭಾರತದಲ್ಲಿಯೂ ಜನಪ್ರಿಯ. ಈ ಹಣ್ಣಿನಲ್ಲಿ ಪೆಕ್ಟಿನ್ ಅಂಶ, ನೀರಿನಂಶ ಅಧಿಕವಾಗಿದ್ದು, ವಿಟಮಿನ್ ‘ಸಿ’ ಕೂಡ ಘರಾಳವಾಗಿದೆ! ಸೇವಿಸಿದ ತಕ್ಷಣ ಬಾಯಾರಿಕೆಯನ್ನು ತಣಿಸಿ ಮತ್ತು ಉತ್ಸಾಹ ನೀಡುವ ಹಣ್ಣಿದು.

ಹಣ್ಣು, ಬೀಜ, ಬೇರು ಇವು ಕಲ್ಲಂಗಡಿಯಲ್ಲಿನ ಔಷಧೋಪಯೋಗಿ ಭಾಗಗಳು

೧. ಎರಡರಿಂದ ನಾಲ್ಕು ಚಮಚಗಳಷ್ಟು ಕಲ್ಲಂಗಡಿ ಬೀಜಗಳನ್ನು ಅಕ್ಕಿ ತೊಳೆದ ಎರಡನೆಯ ನೀರಿನಲ್ಲಿ ಅರೆದು ಸೋಸಿ ಆ ನೀರನ್ನು (ದಿನಕ್ಕೆ ಎರಡು ಸರಿ ಟಾಲ್ಕಾರು ದಿನಗಳ ಕಾಲ) ಕುಡಿದರೆ ಉರಿಮೂತ್ರ ಗುಣವಾಗುತ್ತದೆ.

Image result for watermelon seed

೨. ಕಲ್ಲಂಗಡಿ ಹಣ್ಣಿನ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಬೆರೆಸಿ ಕುಡಿದರೆ ಮೂತ್ರ ತಡೆ ನಿವಾರಣೆಯಾಗುತ್ತದೆ. ಮೂತ್ರದ ಕಲ್ಲು ಕರಗುತ್ತದೆ. (ಹೀಗೆ ಆರು ತಿಂಗಳು ಸೇವಿಸಬೇಕು)

Image result for watermelon juice

೩. ಒಂದು ಕಲ್ಲಂಗಡಿ ಹಣ್ಣಿಗೆ ಹೊರಗಿನಿಂದ ರಂದ್ರ ಮಾಡಿ ಅದರಲ್ಲಿ ಎರಡು ಕಪ್ಪು ಅಕ್ಕಿ ಮತ್ತು ಒಂದು ಕಪ್ಪು ಬಟಾಣಿಯನ್ನು ತುಂಬಿ ಆ ತೂತನ್ನು ಪುನಃ ಮುಚ್ಚಿ ಒಂದು ವಾರ ಹಾಗೆ ಇಡಿ. ಅನಂತರ ಬಟಾಣಿ ಹಾಗು ಅಕ್ಕಿಯನ್ನು ತೆಗೆದು, ನೆರಳಲ್ಲಿ ಒಣಗಿಸಿ, ಅದನ್ನು ನಯವಾಗಿ ಪುಡಿ ಮಾಡಿ. ಈ ಪುಡಿಯನ್ನು ಹಾಲು ಮತ್ತು ಹಾಲಿನ ಕೆನೆಯೊಂದಿಗೆ ಮಿಶ್ರ ಮಾಡಿ ಫೇಸ್ ಪ್ಯಾಕ್ ನಂತೆ ಮುಖಕ್ಕೆ ಲೇಪಿಸಿಕೊಳ್ಳಿ. ಒಂದು ಘಂಟೆಯ ಬಳಿಕ ಮುಖ ತೊಳೆದರೆ ಮುಖದ ಹೊಳಪು ಹೆಚ್ಚಿರುತ್ತದೆ.

Related image

೪. ನಿತ್ಯವೂ ಕಲ್ಲಂಗಡಿ ಬೀಜದ ಪುಡಿಯನ್ನು ಸಕ್ಕರೆಯೊಂದಿಗೆ ಸೇವಿಸಿದರೆ ಅದು ಶಕ್ತಿವರ್ಧಕ ಟಾನಿಕ್ ನಂತೆ ಕೆಲಸ ಮಾಡುತ್ತದೆ. ದೇಹದಲ್ಲಿನ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಬೀಜದ ಎಣ್ಣೆಯು ಜಂತು ಹುಳುಗಳನ್ನು ನಾಶಗೊಳಿಸುತ್ತದೆ.

೫. ಕಲ್ಲಂಗಡಿ ಹಣ್ಣಿನ ರಸ ಜ್ವರಹರವಾಗಿದೆ.

೬. ಕಲ್ಲಂಗಡಿ ಹಣ್ಣಿನ ರಸದಲ್ಲಿ ಲೈಕೊಪಿನ್ ಎಂಬ ಅಂಶವಿದ್ದು ಇದು ಹೃದಯಾಘಾತದಿಂದ ರಕ್ಷಣೆ ಒದಗಿಸುತ್ತದೆ.

೭. ಕಲ್ಲಂಗಡಿ ಹಣ್ಣು ಮದ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ.

Related image

೮. ಕಲ್ಲಂಗಡಿ ಹಣ್ಣಿನ ರಸದಿಂದ ಮುಖವನ್ನು ಆಗಾಗ್ಗೆ ಮಾಲೀಶು ಮಾಡಿದರೆ ಮುಖದ ಕಲೆಗಳು ಮಾಯವಾಗಿ ಕಾಂತಿ ಹೆಚ್ಚುತ್ತದೆ.

Image result for watermelon facepack

Also Read: ಸಕ್ಕರೆ ಸೇವಿಸುವುದರಿಂದ ನಮ್ಮ ದೇಹದಲ್ಲಿ ಹೀಗೆಲ್ಲ ಆಗುತ್ತಾ ಕೇಳಿದ್ರೆ ಶಾಕ್ ಆಗ್ತೀರಾ..!

Watch: