ಬೇಲದ ಹಣ್ಣಿನ ಪಾನಕದಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ, ಹೇಗೆ ಮಾಡೋದು ಅಂತ ಓದಿ..

1
2687

Kannada News | Health tips in kannada

ಯಾವಕಾಲದಲ್ಲಾದರೂ ಎಲ್ಲಾ ಹಣ್ಣುಗಳು ಸಿಗುತ್ತವೆ ಆದರೆ ಈ ಬೇಲದ ಹಣ್ಣು ಮಾತ್ರ ಆಯಾ ಕಾಲಕ್ಕೆ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫ ನಿವಾರಣೆಗೆ ಬಾಯಿಂದ ಬರುವ ದುರ್ವಾಸನೆ ತಡಗಟ್ಟಲು ವಸಡುಗಳ ತೊಂದರೆ ಇದ್ದವರು ಹಾಗೂ ಆಮಶಂಕೆ ಭೇಧಿಯ ನಿವಾರಣೆಗೆ ಹಣ್ಣಾದ ಬೇಲದ ಹಣ್ಣಿನಿಂದ ಮೂಲವ್ಯಾಧಿ ಹಾಗೂ ಸಕ್ಕರೆ ಖಾಯಿಲೆಯವರು ಬಳಸ ಬಹುದು. ಬೇಸಿಗೆಯಲ್ಲಿ ಬೇಲದ ಹಣ್ಣಿನ ಪಾನಕ ಕುಡಿದರೆ, ಬಾಯಾರಿಕೆ ಹಿಂಗುವುದು ಹಾಗೂ ಬಾಯಿಂದ ಬರುವ ಕೆಟ್ಟ ದುರ್ವಾಸನೆ ನಿವಾರಣೆ ಆಗುತ್ತದೆ.

ಹಾಗಾದರೆ ಬನ್ನಿ ಬೇಲದ ಹಣ್ಣಿನ ಶರಬತ್ತು ಮಾಡುವ ವಿಧಾನವನ್ನು ತಿಳಿಯೋಣ

ಬೇಲದ ಹಣ್ಣಿನ ಶರಬತ್ತು ಬೇಕಗುವ ಸಾಮಗ್ರಿ :

  • ಬೇಲದ ಹಣ್ಣಿನ ತಿರುಳು-2 ಕಪ್,
  • ಬೆಲ್ಲದ ತುರಿ-1 ಕಪ್,
  • ಏಲಕ್ಕಿ ಪುಡಿ-1/2 ಟೀ ಚಮಚ,
  • ಕಾಳುಮೆಣಸಿನ ಪುಡಿ-1/4 ಟೀ ಚಮಚ,
  • ಉಪ್ಪು-1/4 ಟೀ ಚಮಚ.

ಮಾಡುವ ವಿಧಾನ:

Watch:

ನಾರು ತೆಗೆದು ಬೇಲದ ಹಣ್ಣನ್ನು, ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ, ಬೆಲ್ಲದ ತುರಿ, ಏಲಕ್ಕಿ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು, ಸೇರಿಸಿ ಚನ್ನಾಗಿ ಕಲಕಿ. ಬೇಕಾಗುವಷ್ಟು ನೀರು ಬೆರೆಸಿ ಕಲಕಿ.

ಸವಿಸವಿಯಾದ ಬೇಲದ ಹಣ್ಣಿನ ಪಾನಕ ರೆಡಿ ಟು ಡ್ರಿಂಕ್.

Also Read: ಕೂದಲನ್ನು ಸುಂದರವಾಗಿಸಲು ದುಬಾರಿ ಹೇರ್ ಕಲರ್ ಮೊರೆ ಹೋಗೋ ಬದ್ಲು ಈ ಟಿಪ್ಸ್ ನ ಫಾಲೋ ಮಾಡಿ..!!