ಬಾಯಲ್ಲಿ ನೀರು ತರಿಸುವ ಬೆಂಗಾಲಿ ಸ್ಟೈಲ್‌ ಫಿಶ್‌ ಕರಿ ಇಂದೇ ಟ್ರೈ ಮಾಡಿ..!!

0
916
ಮೀನು ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರಿಗೂ ಮೀನು ಅಂದ್ರೆ ತುಂಬ ಇಷ್ಟ ಈ ಮೀನಿನಲ್ಲಿ ಫಿಶ್‌ ಕರಿ ತಿನ್ನೋದು ಅಂದ್ರೆ ಇನ್ನು ಇಷ್ಟ.. ಫಿಶ್‌ ಕರಿಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಫಿಶ್‌ ಕರಿಯನ್ನು ತುಂಬಾ ರುಚಿಯಲ್ಲಿ ಮಾಡಬಯಸುವವರು ಬೆಂಗಾಲಿ ಸ್ಟೈಲ್‌ ಫಿಶ್‌ ಕರಿಯನ್ನು ಟ್ರೈ ಮಾಡಿ….

ಬೇಕಾಗುವ ಸಾಮಾಗ್ರಿಗಳು

 • ರೋಹೂ ಅಥವಾ ಕಾಟ್ಲಾ ಮೀನು
 • ಸಾಸಿವೆ ಪೇಸ್ಟ್ 2 ಚಮಚ
 • ಅರಿಶಿಣ ಪುಡಿ 1 ಚಮಚ
 • ರುಚಿಗೆ ತಕ್ಕ ಉಪ್ಪು
 • ಸಾಸಿವೆ ಎಣ್ಣೆ 4 ಚಮಚ
 • ಸಾಸಿವೆ ಅರ್ಧ ಚಮಚ
 • ಕಲೋಂಜಿ 1 ಚಮಚ(ಈರುಳ್ಳಿ ಬೀಜ)
 • ಒಣ ಮೆಣಸು 4
 • ಬೇ ಲೀಫ್‌ 1
 • ಶುಂಠಿ ಪೇಸ್ಟ್ 2 ಚಮಚ
 • ಬೆಳ್ಳುಳ್ಳಿ ಪೇಸ್ಟ್‌ 2 ಚಮಚ
 • ಈರುಳ್ಳಿ 3
 • ಕೊತ್ತಂಬರಿ ಪುಡಿ 2 ಚಮಚ
 • ಹಸಿ ಮೆಣಸು 2
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ನಿಂಬೆಹಣ್ಣು

ಮಾಡುವ ವಿಧಾನ:

 • ಮೊದಲು ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನಿಂಬೆರಸ, ಸ್ವಲ್ಪ ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿ ಅರ್ಧ ಗಂಟೆ ನೆನೆಯಲು ಇಡಿ .
 • ನಂತರ 2 ಚಮಚ ಸಾಸಿವೆಎಣ್ಣೆ ಹಾಕಿ ಅದರಲ್ಲಿ ಮೀನನ್ನು ಸ್ವಲ್ಪ ಫ್ರೈ ಮಾಡಿ, ನಂತರ ಎಣ್ಣೆಯಿಂದ ತೆಗೆದು ತಟ್ಟೆಯಲ್ಲಿಡಿ.
 • ಈಗ ಪ್ಯಾನ್‌ಗೆ ಮತ್ತೆ ಎರಡು 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ ಎಣ್ಣೆ, ಈರುಳ್ಳಿ ಬೀಜ, ಒಣ ಮೆಣಸು, ಬೇ ಲೀಫ್ ಹಾಕಿ ಸಾಸಿವೆ ಹಾಕಿ ಬಡಿಸಿ.
 • ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
 • ಇದಕ್ಕೆ ಈಗ ಸಾಸಿವೆ ಪೇಸ್ಟ್‌ ಹಾಕಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಸಾಲೆಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
 • ನಂತರ ಒಂದು ಕಪ್‌ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಕತ್ತರಿಸಿದ ಹಸಿ ಮೆಣಸು ಹಾಕಿ 10 ನಿಮಿಷಗಳ ಕಾಲ ಬೇಯಿಸಿ.
 • ನಂತರ ಮೀನು ಹಾಕಿ ಪ್ಯಾನ್‌ಗೆ ಮುಚ್ಚಳವನ್ನು ಮುಚ್ಚಿ 5 ನಿಮಿಷ ಬೇಯಿಸಿ ನಂತರ ಉರಿಯಿಂದ ಇಳಿಸಿ ಅರ್ಧ ಅಥವಾ ಒಂದು ನಿಂಬೆ ಹಣ್ಣಿನ ರಸ ಹಾಕಿದರೆ ಬೆಂಗಾಲಿ ಶೈಲಿಯ ಫಿಶ್‌ ಕರಿ ಸವಿಯಲು ಸಿದ್ದ.