ನೀವು ಈ ವೆಬ್ಸಸೈಟ್ ಗಳನ್ನು ಬಳಸುತ್ತಿದ್ದರೆ ನಿಮ್ಮ ಖಾತೆಯ ಹಣ ಹೋಗಿರಬಹುದು ಒಮ್ಮೆ ಚೆಕ್ ಮಾಡಿಕೊಳ್ಳಿ..!

0
894

ಈ ಸೈಬರ್ ಸ್ಪೇಸ್‌ನಲ್ಲಿ ನಡೆಯುವ ಸೈಬರ್ ಅಪರಾಧಗಳು ಇತ್ತೀಚಿನ ಮತ್ತು ಬಹುಶಃ ಜಗತ್ತಿನ ಅತಿ ಜಟಿಲ ಸಮಸ್ಯೆಗಳಾಗಿವೆ. ಇಂತಹ ಒಂದು ಸಮಸ್ಯೆ ನಗರದ ಸೈಬರ್ ಅಪರಾಧ ಪೊಲೀಸರಿಗೆ ತಲೆನೋವು ಉಂಟುಮಾಡಿತ್ತು.

ಸೈಬರ್ ಅಪರಾಧದ ಇತ್ತೀಚಿನ ಉದಾಹರಣೆಯೆಂದರೆ, ದುಬಾರಿ ಬೆಲೆಯ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಶೇ.90ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿ ನಕಲಿ ವೆಬ್‌ಸೈಟ್‌ಗಳ ಮೂಲಕ ಗ್ರಾಹಕರ ಬ್ಯಾಂಕ್‌, ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕದ್ದು ಹಣ ದೋಚುತ್ತಿದ್ದ ಜೆ.ಪಿ.ನಗರದ 3ನೇ ಹಂತದಲ್ಲಿ ನೆಲೆಸಿದ್ದ ಜಾರ್ಖಾಂಡ್‌ನ ಬೊಕಾರೋ ನಗರಕ್ಕೆ ಸೇರಿದ ನಾಲ್ವರು ಸೈಬರ್‌ ಖದೀಮರನ್ನು ಸಿಐಡಿ ಸೈಬರ್‌ ಕ್ರೈಂ ಪೊಲೀಸರು ಜುಲೈ 22 ರಂದು ಅಪರಾಧಿಗಳನ್ನು ಬಂಧಿಸಲು ಪೊಲೀಸರು ಸಮರ್ಥರಾಗಿದ್ದಾರೆ. ಕಪಿಲ್‌ದೇವ್‌ ಸುಮನ್‌ (26), ಸುಶೀಲ್‌ಕುಮಾರ್‌ ಸುಮನ್‌(24), ಸೂರಜ್‌ ಕುಮಾರ್‌(24) ಹಾಗೂ ಬಿಪ್ಲವ್‌ ಕುಮಾರ್‌(24) ಬಂಧಿತರು.

source: newsable.asianetnews.tv

ಆಶ್ಚರ್ಯ ಏನೆಂದರೆ ಗ್ರಾಹಕರ ಖಾತೆಯಿಂದ ಹಣ ದೋಚಲು ಆರೋಪಿಗಳು, ಬರೋಬ್ಬರಿ 16,000 ಗ್ರಾಹಕರ ಬ್ಯಾಂಕ್ ಖಾತೆಗಳು, ಬಹು ಗುರುತನ್ನು ಹೊಂದಿರುವ PAN ಕಾರ್ಡ್‌ಗಳು ಮತ್ತು 460 ಸಿಮ್‌ಕಾರ್ಡ್‌, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್‌ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

source: static.dnaindia.com

ಜಿಗಣಿಯ ಕ್ಯಾಬ್‌ ಚಾಲಕ ಸುರೇಶ್‌ ಎಂಬುವವರು ಕಡಿಮೆ ಬೆಲೆಗೆ ಮೊಬೈಲ್‌ ಖರೀದಿಸಿದ್ದು, ನಕಲಿ ವೆಬ್‌ಸೈಟ್‌ ಮೂಲಕ ಸುರೇಶ್‌ ಅವರ ಬ್ಯಾಂಕ್‌ ಖಾತೆಯಿಂದ ಜೆ.ಪಿ.ನಗರದ ಎಸ್‌ಬಿಎಂ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಒಟ್ಟು ಒಟ್ಟ ಏಳು ಸಾವಿರ ರೂ. ಬೇರೊಂದು ಖಾತೆಗೆ ವರ್ಗಾವಣೆ ಆಗಿತ್ತು. ಈ ರೀತಿಯಾಗಿ ಸೈಬರ್‌ ಖದೀಮರಿಂದ ಮೋಸ ಹೋದ ಬಳಿಕ ಸೈಬರ್‌ ಠಾಣೆಗೆ ದೂರು ನೀಡಿದ್ದರು. ದೂರು ಪಡೆದ ಪೊಲೀಸರು ತಕ್ಷಣ ಕಾರ್ಯ ನಿರತರಾಗಿ ಯಾವ ಖಾತೆಯಿಂದ ಹಣ ವರ್ಗಾವಣೆಯಾಗಿತ್ತು. ಆ ಬ್ಯಾಂಕ ಹತ್ತಿರ ಹಣ ಸ್ವೀಕರಿಸಲು ಆರೋಪಿಗಳು ಬರಬಹುದು ಎಂದು ಪೊಲೀಸರು ಕಾಯುತ್ತಿದ್ದರು. ಅದರಂತೆ ಬ್ಯಾಂಕ್‌ಗೆ ಬಂದ ಕಪಿಲ್‌ದೇವ್‌ನನ್ನು ಮೊದಲು ವಶಕ್ಕೆ ಪಡೆದು, ವಿಚಾರಣೆ ನೆಡೆಸಿ ಆತ ನೀಡಿದ ಮಾಹಿತಿಯಿಂದ ಸೂರಜ್‌ಕುಮಾರ್‌ನನ್ನು ಬಂಧಿಸಿದರು. ನಂತರ ಉಳಿದ ಇಬ್ಬರು ಆರೋಪಿಗಳ ಜಾಲ ಪತ್ತೆಹಚ್ಚಿ ಜಾರ್ಖಂಡ್‌ನಲ್ಲಿ ವಿಶೇಷ ತಂಡ ಅಲ್ಲಿಗೆ ತೆರಳಿ ಅವರಿಬ್ಬರನ್ನು ಬಂಧಿಸಲಾಯಿತು.

ಆರೋಪಿಗಳಲ್ಲಿ ಒಬ್ಬರಾದ ಸುಶೀಲ್ ಕುಮಾರ್ ಸುಮನ್ ಸುಮಾರು 600 ಕ್ಕೂ ಅಧಿಕ ಡೊಮೇನ್‌ ನೇಮ್‌ಗಳಲ್ಲಿ ಖರೀದಿಸಿ ವೆಬ್‌ಸೈಟ್‌ಗಳನ್ನು ತೆರೆದಿದ್ದು ಗ್ರಾಹಕರನ್ನು ಆಕರ್ಷಿಸಲು ಸುಳ್ಳು ವೆಬ್ಸೈಟ್ಗಳನ್ನು ಸೃಷ್ಟಿಸಿದ್ದರು. www.munafaperday, munafadaily.com, paymaza.com, futuretrade.biz ಮತ್ತು mudratrade.com ಈ ವೆಬ್‌ಸೈಟ್‌ಗಳಲ್ಲಿ ದುಬಾರಿ ಬೆಲೆಯ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಇರುವುದಾಗಿ ಜಾಹೀರಾತು ಪ್ರಕಟಿಸುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿ, ಯುವಜನರು ಎಚ್ಚರದಿಂದಿರಬೇಕು.