ಬೊಗಳುವ ನಾಯಿಗೆ ಗುಂಡು ಹಾರಿಸಿದ ವ್ಯಕ್ತಿ; ಜೀವ ಉಳಿಸಲು ಶಸ್ತ್ರಚಿಕಿತ್ಸೆ, ನಾಯಿ ನೋಡಲು ಆಸ್ಪತ್ರೆ ಬೇಟಿ ನೀಡಿದ ಶಾಸಕಿ ಸೌಮ್ಯ ರೆಡ್ಡಿ.!

0
198

ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು ಜನರ ಮೇಲೆ ದಾಳಿ ಮಾಡುತ್ತಿವೆ ಎನ್ನುವುದು ಬೆಂಗಳೂರಿನಲ್ಲಿ ಹೇಳಿಬರುತ್ತಿತು, ಅದಕ್ಕಾಗಿ ಬಿಬಿಎಂಪಿ ಅವರು ಬೀದಿ ಶ್ವಾನಗಳ ಮೇಲೆ ಕಣ್ಣಿರಿಸಬೇಕು ನಾಯಿಗಳನ್ನು ಹಿಡಿದುಕೊಂಡು ಹೋಗಬೇಕು ಎನ್ನುವ ಕೂಗು ಕೇಳಿ ಬರುತ್ತಿತ್ತು, ಅದರಂತೆ ನಾಯಿಗಳ ಮೇಲೆ ಜನರಿಂದ ಹಲ್ಲೆ, ನಾಯಿಗಳಿಂದ ಜನರ ಮೇಲೆ ಹಲ್ಲೆ ನಡೆಯುವುದು ಕಂಡು ಬರುತ್ತಿತ್ತು. ಇಂತಹ ಒಂದು ಪ್ರಕರಣ ಕೇಳಿ ಬಂದಿದ್ದು ಮನೆಯ ಮುಂದೆ ಹೊಲಸು ಮಾಡಿದೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

Also read: ಆಸ್ತಿಗಾಗಿ ತಂದೆ-ತಾಯಿಗೆ ಫೋರ್ಜರಿ ಮಾಡಿದ ಖತರ್ನಾಕ್ ಹೆಣ್ಣುಮಕ್ಕಳು; ಇಡೀ ಬದುಕನ್ನೇ ಮುಡಿಪಿಟ್ಟು ಸಾಕಿದವರು ಬೀದಿಗೆ.!

ಬೀದಿ ನಾಯಿಗೆ ಗುಂಡು ಹೊಡೆದು ಜೈಲು ಸೇರಿದ?

ಹೌದು ನಾಯಿ ಮನೆಯ ಮುಂದೆ ಗಲೀಜು ಮಾಡುತ್ತದೆ ಎನ್ನುವ ಕಾರಣಕ್ಕೆ ಗುಂಡಿನ ದಾಳಿ ನಡೆಸಿದ್ದಾನೆ. ಕೆಲ ಬೀದಿ ನಾಯಿಗಳು ಇಲ್ಲಿನ ಮನೆಯೊಂದರ ಮುಂದೆ ಮೂಳೆ, ತಿಂಡಿಗಳನ್ನ ತಂದು ಹಾಕುತ್ತಿದ್ದವು. ಇದರಿಂದ ಸಿಟ್ಟಾದ ಮನೆಯ ಮಾಲೀಕ ಏರ್​​ಗನ್​​ನಿಂದ ಮೂರು ಬಾರಿ ಗುಂಡು ಹಾರಿಸಿದ ಘಟನೆ ಇಂದು ಬೆಳಗ್ಗೆ 8.30 ರ ಸುಮಾರಿಗೆ ಜಯನಗರ 5 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಾಣಿ ಪ್ರಿಯ ಪ್ರವೀಣ್ ಎಂಬುವರು ನಾಯಿಯನ್ನು ರಕ್ಷಿಸಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗುಂಡುಗಳು ನಾಯಿಯ ಹೊಟ್ಟೆ ಸೇರಿರುವ ಕಾರಣ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲು ಚಿಕಿತ್ಸೆ ಮುಂದುವರೆದಿದೆ.

ನಾಯಿಯ ದೇಹವನ್ನು ಎಕ್ಸರೇ ಮಾಡಿಸಿದಾಗ ಮೂರು ಗುಂಡುಗಳು ದೇಹವನ್ನು ಹೊಕ್ಕಿರುವುದು ಕಂಡುಬಂದಿದ್ದು, ನಾಯಿ ಬದುಕುವ ಸಾಧ್ಯತೆ 50-50 ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾಯಿಯ ಪ್ರಾಣ ಉಳಿಸಲು ವೈದ್ಯರು ಶಸ್ತ್ರಕ್ರಿಯೆ ನಡೆಸುತ್ತಿದ್ದಾರೆ. ನಾಯಿ ಮೇಲೆ ಗುಂಡಿನ ದಾಳಿ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಗುಂಡು ಹಾರಿಸಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಸೇನೆಯಿಂದ ನಿವೃತ್ತರಾಗಿ ಜಯನಗರದಲ್ಲಿ ವಾಸವಿರುವ ವ್ಯಕ್ತಿ ಗುಂಡು ಹಾರಿಸಿರುವವರು ಎಂದು ತಿಳಿದುಬಂದಿದ್ದು, ಅವರು ಹೊಂದಿರುವ ಗನ್ ಮತ್ತು ಲೈಸೆನ್ಸ್ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Also read: ಬೆಂಗಳೂರಿನಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್​; ರಾತ್ರಿ ವೇಳೆ ಬೆತ್ತಲಾಗಿ ಕಳ್ಳತನ ಮಾಡುವ ಗ್ಯಾಂಗ್.!

ನಾಯಿ ಅರೋಗ್ಯ ವಿಚಾರಿಸಿದ ಶಾಸಕಿ ಶೌಮ್ಯ ರೆಡ್ಡಿ

ಶ್ವಾನವನ್ನು ನೋಡಲು ಜಯನಗರ ಶಾಸಕಿ ಸೌಮ್ಯರೆಡ್ಡಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಶ್ವಾನಕ್ಕೆ ಗುಂಡು ಹಾರಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅವರು ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ ಶ್ವಾನದ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲ ನೋಡಿದರೆ ಪ್ರಾಣಿಗಳ ಜೀವಕ್ಕೆ ಎಷ್ಟೊಂದು ಬೆಲೆ ಇದೆ ಎನ್ನುವುದು ತಿಳಿಯುತ್ತೆ. ಅದಕ್ಕಾಗಿ ನಿಮ್ಮ ಮನೆಯ ಸುತ್ತಲು ಕಂಡು ಬರುವ ಶ್ವಾನಗಳ ಮೇಲೆ ದಾಳಿ ಹಲ್ಲೆ ಮಾಡದೇ ಬಿಬಿಎಂಪಿ ಗೆ ದೂರು ನೀಡಿ. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗುತ್ತಿರ.