ಡ್ರೈವಿಂಗ್‌ ಲೈಸೆನ್ಸ್‌ ನವೀಕರಿಸಲು ಹೋಗಿ ಗೂಗಲ್‌ ಪೇ ವ್ಯಾಲೆಟ್‌-ನಿಂದ 90 ಸಾವಿರ ರೂ. ಕಳೆದುಕೊಂಡ ವ್ಯಕ್ತಿ.!

0
219

ದೇಶದಲ್ಲಿ ಆನ್ಲೈನ್ ವಂಚಕರು ಕೈ ತೊಳೆದುಕೊಂದು ಮೋಸ ಮಾಡಲು ನಿಂತಿದ್ದಾರೆ, ಇದಕ್ಕೆ ಪ್ರತಿನಿತ್ಯವೂ ಹಲವು ಜನರು ಹಣ ಕಳೆದುಕೊಳ್ಳುತ್ತಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರು ನಾನಾ ರೀತಿಯ ಸೋಗಿನಲ್ಲಿ ಅಮಾಯಕರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಷ್ಟು ದಿನ ಬೇರೆಯದೇ ರೀತಿಯಲ್ಲಿ ಮೋಸ ಮಾಡುತಿದವರು ಡ್ರೈವಿಂಗ್‌ ಲೈಸೆನ್ಸ್‌ ನವೀಕರಿಸುವ ನೆಪದಲ್ಲಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಬೆಂಗಳೂರಿನ ವ್ಯಕ್ತಿಗೆ ಲೈಸೆನ್ಸ್‌ ನವೀಕರಿಸುವ ನೆಪದಲ್ಲಿ ಗೂಗಲ್‌ ಪೇ ವ್ಯಾಲೆಟ್‌ ವಿವರ ಪಡೆದು 90 ಸಾವಿರ ರೂ. ವಂಚಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಪ್ರಕರಣ?

ಹೌದು ಇಷ್ಟು ದಿನ Olx, ಆನ್ಲೈನ್ ಶಾಪಿಂಗ್, ಸೇರಿದಂತೆ ಜನರ ಬ್ಯಾಂಕ್ ಖಾತೆಗೆ ಕಣ್ಣ ಹಾಕುತ್ತಿದ್ದ ವಂಚಕರು ಈಗ ಗೂಗಲ್‌ನಲ್ಲಿ ಸಿಗುವ ಫೋನ್‌ ಸಂಖ್ಯೆಗೆ ಕರೆ ಮಾಡಿದರೆ ನಿಮ್ಮನ್ನು ಯಾಮಾರಿಸುವ ಖದೀಮರು ನಿಮ್ಮ ಇ- ವ್ಯಾಲೆಟ್‌ ಮತ್ತು ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಾರೆ. ನಗರದ ವ್ಯಕ್ತಿಯೊಬ್ಬರು ಡ್ರೈವಿಂಗ್‌ ಲೈಸೆನ್ಸ್‌ ನವೀಕರಣಕ್ಕಾಗಿ ಕೆ.ಆರ್‌. ಪುರ ಆರ್‌ಟಿಒ ವಿಳಾಸವನ್ನು ಗೂಗಲ್‌ನಲ್ಲಿ ಹುಡುಕುತ್ತಿದ್ದರು. ನಂತರ ಅಲ್ಲಿ ದೊರೆತ ಮೊಬೈಲ್‌ ಫೋನ್‌ಗೆ ಕರೆ ಮಾಡಿದ್ದಾರೆ. ಆರ್‌ಟಿಒ ಸಿಬ್ಬಂದಿ ಸೋಗಿನಲ್ಲಿ ಮಾತನಾಡಿದ ಖದೀಮರು, ಗೂಗಲ್‌ ಪೇ ಅಕೌಂಟ್‌ನಿಂದ 89,993 ರೂ. ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೆಂದು ಕರೆ ಮಾಡಿದಾಗ ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ”ಕೇಂದ್ರ ಸರಕಾರದಿಂದ ಡಿಜಿಟಲೀಕರಣ ಪ್ರಕ್ರಿಯೆಯ ಫಲವಾಗಿ ಡಿ.ಎಲ್‌. ನವೀಕರಣವನ್ನು ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಅದಕ್ಕೆ ಕಚೇರಿಗೆ ಬರುವ ಅಗತ್ಯವಿಲ್ಲ. ಫೋನ್‌ ಮೂಲಕವೇ ಸಾಧ್ಯವಿದೆ,” ಎಂದು ಹೇಳಿದ್ದಾನೆ. ಅದನ್ನೇ ನಂಬಿದ ವ್ಯಕ್ತಿ ತಾನು ಬಳಸುತ್ತಿದ್ದ ‘ಗೂಗಲ್‌ ಪೇ’ ಇ-ವ್ಯಾಲೆಟ್‌ ವಿವರಗಳನ್ನು ನೀಡಿದ್ದಾನೆ. ಬಳಿಕ ಗೂಗಲ್‌ ಪೇ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ವ್ಯಕ್ತಿಯಿಂದ ಪಡೆದ ವಿವರಗಳನ್ನು ನಮೂದಿಸಿ ಅಕ್ರಮವಾಗಿ ವಿವಿಧ ಹಂತಗಳಲ್ಲಿ 89,999 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ವಂಚಕರಿಗೆ ಒಟಿಪಿ ಹೇಳಿರುವುದು ಮತ್ತು ಅವರು ಕಳುಹಿಸಿದ್ದ ವೆಬ್‌ಸೈಟ್‌ ಲಿಂಕ್‌ಗಳನ್ನು ತೆರೆದು ಅಲ್ಲಿ ವಿವರ ನಮೂದಿಸಿರುವುದು ಹಣ ಕಳೆದುಕೊಳ್ಳಲು ಕಾರಣವಾಗಿದೆ.

ಸೋಫಾ ಮಾರಲು ಹೋಗಿ 48 ಸಾವಿರ ಕಳೆದುಕೊಂಡ:

ಮತ್ತೊಂದು ಆನ್ಲೈನ್ ಪ್ರಕರಣ ದಾಖಲಾಗಿದ್ದು, ಒಎಲ್‌ಎಕ್ಸ್‌ನಲ್ಲಿಮಾರಾಟಕ್ಕಿಟ್ಟಿದ್ದ ಸೋಫಾ ಖರೀದಿ ಸೋಗಿನಲ್ಲಿಕರೆ ಮಾಡಿದ ವಂಚಕ, ನಗರದ ವ್ಯಕ್ತಿಯೊಬ್ಬರ ಪೇಟಿಎಂ ಖಾತೆಯಿಂದ 48 ಸಾವಿರ ರೂ. ದೋಚಿದ್ದಾರೆ. ನೀವು ನೀಡಿರುವ ಜಾಹೀರಾತು ನೋಡಿದ್ದೇನೆ. ಸೋಫಾ ಇಷ್ಟವಾಗಿದ್ದು ಖರೀದಿ ಮಾಡುತ್ತೇನೆ. ಖರೀದಿಗಾಗಿ ಪೇಟಿಎಂ ಮೂಲಕ 19 ಸಾವಿರ ರೂ. ಕಳುಹಿಸುತ್ತೇನೆ” ಎಂದು ಹೇಳಿ ”ಮೊಬೈಲ್‌ಗೆ ಒಂದು ಬಾರ್‌ಕೋಡ್‌ ಕಳುಹಿಸಿದ ವ್ಯಕ್ತಿ, ಅದನ್ನು ಪೇಟಿಎಂ ಮೂಲಕ ಸ್ಕ್ಯಾ‌ನ್‌ ಮಾಡಿಕೊಂಡು ಹಣ ಸ್ವೀಕರಿಸಿ ಎಂದು ಹೇಳಿದ. ಅದರಂತೆ ಸ್ಕ್ಯಾ‌ನ್‌ ಮಾಡಿದಾಗ ಮೂರು ಹಂತಗಳಲ್ಲಿ 48 ಸಾವಿರ ರೂ. ವಂಚನೆ ಮಾಡಿದ್ದಾನೆ. ಅದಕ್ಕಾಗಿ ಯಾವುದೇ ಕರೆ ಅಥವಾ ಬೇರೆ ವ್ಯಕ್ತಿ ಕರೆ ಮಾಡಿ ಏನೇ ಹೇಳಿದರು ನಂಬಬೇಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522