ಬೆಂಗಳೂರಿಗೆ ಮೆಟ್ರೋ ಏನೋ ಬಂದಾಯಿತು, ಆದ್ರೆ ಮೆಟ್ರೋ ಸ್ಟೇಷನ್-ಗೆ ತಲುಪೋ ಸಮಸ್ಯೆ ಯಾವಾಗ ಪರಿಹಾರ ಆಗುತ್ತೆ?

0
477

ಬೆಂಗಳೂರು ಅಂದ ಕೂಡ್ಲೇ ಸಾಮಾನ್ಯವಾಗಿ ನೆನಪಿಗೆ ಬರೋದೆ ಟ್ರಾಪಿಕ್ ಜಾಮ್, ಈ ಟ್ರಾಪಿಕ್ ಅಲ್ಲಿ ಇದ್ರೆ ಇವತ್ತೇ ಹೋಗೋ ಜಾಗಕ್ಕೆ ಅಥವಾ ಮನೆಗೆ ಮುಟ್ಟತ್ತೇವೆ ಅಂತ ಯಾವ ಭರವಸೇನು ಇರೋದಿಲ್ಲ. ಈ ಮೆಜ್ಜೆಸ್ಟ್ರಿಕ್ ಅಂತು ಟ್ರಾಪಿಕ್ಕಿನ ಸಮುದ್ರನೇ ಅನ್ಸುತ್ತೆ. ಈ ಸಮಸ್ಯೆ ಈಗಿನದು ಅಲ್ಲ ಬಹುದಿನಗಳದು ಇದರಿಂದ ಮುಕ್ತಿ ಯಾವಾಗ ಎಂಬ ವಿಚಾರದಲ್ಲಿರುವ ಜನರಿಗೆ ಸಂತೋಷದ ಸುದ್ದಿ ಬಂತು ಅದುವೇ ನಮ್ಮ ಮೆಟ್ರೋ ಯೋಜನೆ, ಇದನ್ನು ಕೇಳಿದ ಬೆಂಗಳೂರಿನ ಜನ್ರು ಅಂತು ಅದೆಷ್ಟು ಸಂತೋಷದಿಂದ ಇದ್ರೂ ಅಂದ್ರೆ  ಮನೆಯಲ್ಲೂ- ಆಫೀಸ್ನಲ್ಲೂ ಮೇಟ್ರೋದೆ ಮಾತು ಅದರದೇ ಹವಾ.

ನಂತರ ಶುರುವಾಯಿತು ನೋಡ್ರಿ…. ಮೆಟ್ರೋ ಸಮಾಚಾರ ಒಂದ… ಎರಡ… ಮೆಟ್ರೋದಲ್ಲಿ ಏನೋ ಸುಲಭವಾಗಿ ಬೇಗನೆ ರೀಚ್ ಆಗಬೋದು ಆದ್ರೆ ಮೆಟ್ರೋ ಸ್ಟೇಷನ್ ಹೋಗೋದೇ ಒಂದು ದೊಡ್ಡ ತಲೆ ನೂವು ನಮ್ಮ ಮನೆ ಇರೋದು ರಾಜಾಜಿನಗರ, ಯಶವಂತಪುರ, ಚಿಕ್ಕ್ ಪೇಟೆ, ನಾಗಸಂದ್ರ , 1st block 2nd block, 3rd cross 6th cross ಹೀಗೆ all most ಬೆಂಗಳೂರಿನ ಎಲ್ಲಾ ಭಾಗದ ಜನ್ರು ಮಾತಾಡೋದು ಹೀಗೇನೆ ನಮ್ಮ ಮನೆಯಿಂದ metro station ಗೆ ಸರಿಯಾದ ಬಸ್ ಇಲ್ಲ, ಇದ್ರೂ ಸರಿಯಾದ ಸಮಯಕ್ಕೆ ಬರೋದೇ ಇಲ್ಲ. ಇನ್ನೂ autoಕ್ಕೆ cabಗೇ ಹೋಗಬೇಕು ಅಂದ್ರೆ ಒನ್ಸೈಡ್ ಇಂದಾನೆ 70, 100 ರುಪಾಯಿ ಕೇಳ್ತಾರೆ. ಅದಕ್ಕ ನಮ್ಮ ಸ್ವಂತ ಗಾಡಿ ತೊಗೊಂಡು ಹೋಗೋದು ತುಂಬಾನೇ better. ಒಂದು ವೇಳೆ ಸ್ವಂತ ಗಾಡಿ ಇಲ್ಲಾಂದ್ರೆ ಮೆಟ್ರೋಗೆ ಹೋಗೋಕೆ ಅಂತಾನೇ 50-80 ಸಾವಿರ ರೂ ಕೊಟ್ಟು ಒಂದು ಹೊಸ ಗಾಡಿ ತಗೋಬೇಕು ಅಂತಾ ಮಾತಾಡ್ತಾರೆ ಸಿಲಿಕಾನ್ ಸಿಟಿಜನ.
ಹೌದು ಸ್ವಂತ ಬೈಕ್, ಕಾರ್, ಸೈಕಲ್ ತಗೊಂದು ಹೋದ್ರೆ ಎಲ್ಲಿ ಪಾರ್ಕಿಂಗ್ ಮಾಡೋದು? ಕೆಲವೊಂದು ಕಡೆ ಪಾರ್ಕಿಂಗ್ ಮಾಡೋಕೆ ಜಾಗ ಇದ್ರುವೆ morning 9 to evening 6.30 ವರೆಗೆ ಪಾರ್ಕಿಂಗ್ ಫೀಸ್ ಜಸ್ಟ್ 55-65 ಅಂತೆ. ಯೆಪ್ಪಾ! ಬೆಂಗಳೂರ್ ಭಾಷೆಯಲ್ಲಿ ಹೇಳಬೇಕು ಅಂದ್ರೆ O my god ಒನ್ month salary ಪಾರ್ಕಿಂಗ್ ಗೆ ಆಟೋಕ್ಕೆ ಕ್ಯಾಬ್ ಗೇನೇ ಬೇಕಾಗುತ್ತೆ ಅಂತಾ ಮೆಟ್ರೋದ ಪ್ರಯಾಣಿಕರು ಹೇಳಿಕೊಳ್ಳುತಾರೆ.

Also read: ಮೆಟ್ರೋ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ..!

ಇದಕ್ಕೆ ಅಂತಾನೆ ವೀಕೆಂಡ್ ಸವಾರರು ಮೆಟ್ರೋ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಜೊತೆಗೂಡಿ, ಏಳು ಮೆಟ್ರೋ ಕೇಂದ್ರಗಳಲ್ಲಿ ಬಾಡಿಗೆ ಬೈಕ್ ಮತ್ತು ಸೈಕಲ್ ಕೊಡುತ್ತಿದ್ದಾರೆ ಅಂತೆ ಇದರಿಂದ 15 ಪ್ರಯಾಣಿಕರಿಗೆ ಮಾತ್ರ ಈ ಸೇವೆ ಸಿಗುತ್ತೆ ಮತ್ತು ವಾರಾಂತ್ಯದಲ್ಲಿ ಜನರು ಹೆಚ್ಚಿನ ಪ್ರಯಾಣಿಕರು ಈ ಸೇವೆಗೆ ಮುಗಿಬೀಳುತ್ತಾರೆ ಅಂತೆ ಇದನ್ನು ನಾವೂ ಕೇಳಿಯೇ ಇರ್ಲಿಲ್ಲ ಇದರಿಂದ ಬೆಂಗಳೂರಿಗೆ ಬರುತ್ತಿರುವ ಪ್ರವಾಸಿಗರಿಗೆ ತುಂಬಾ ಪ್ರಯೋಜನ ಆಗಿದೆ ಅಂತೆ, ಎಷ್ಟು ನಿಜನೋ ಎಷ್ಟು ಸುಳ್ಳೋ ಗೊತ್ತಿಲ್ಲ, ಇದು ಪ್ರಯಾಣಿಕರ ಮಾತು. ಇನ್ನು ಮೆಟ್ರೋದಿಂದ ಲಾಸ್ ಆಗ್ತಿರೋ BMTC ಅವ್ರು ಹೇಳೋದನ್ನು ಕೇಳಿ. ಹಿರಿಯ ಬಿಎಂಟಿಸಿ ಅಧಿಕಾರಿಗಳು ಹೇಳೋ ಪ್ರಕಾರ, ಫೀಡರ್ ಬಸ್ ಸೇವೆಗಳು ತೀವ್ರ ನಷ್ಟವನ್ನು ಅನುಭವಿಸುತ್ತಿವೆ ಅಂತೆ “ಪ್ರತಿ ದಿನ 8 ಗಂಟೆಯಲ್ಲಿ ಫೀಡರ್ ಬಸ್ಸುಗಳು 8,000 ರೂ.ಗಳನ್ನು ದುಡಿಯಬೇಕು. ಆದ್ರೆ ಇವುಗಳು ದಿನಕ್ಕೆ 3,000-4,000 ರೂ.ಗಳನ್ನು ಮಾತ್ರ ಮಾಡುತ್ತಿವೆ ಇದಕೆಲ್ಲ ಕಾರಣ ಪ್ರಯಾಣಿಕರು ಮೆಟ್ರೋ ನಂಬಿ BMTC ಮರೆತ್ತಿದು.

ಅದರಿಂದಾನೇ 37 ಮಾರ್ಗದ ಫೀಡರ್ ಸೇವೆಯನ್ನು ನಿಲ್ಲಿಸಬೇಕಾಯಿತು ಇದರ ವಿಚಾರವಾಗಿ BMTC ನಷ್ಟವನ್ನು ಹಂಚಿಕೊಳ್ಳಲು ನಾವು ಮತ್ತೆ BMRCL ಅನ್ನು ಕೇಳುತ್ತಿದ್ದೆವು. ಅವರು ಬಿಎಂಟಿಸಿ ಕಂಪೆನಿಗಳಿಗೆ ನಷ್ಟ ಉಂಟಾಗಲು ನಮ್ಮ ಕಂಪನಿಯ ಜವಾಬ್ದಾರಿಯಲ್ಲ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ರು ಅಂತೆ “ಇದು ಕೊನೆಯ ಮೈಲಿ ಸಂಪರ್ಕ ಸಮಸ್ಯೆ ಇದು BMTC ಯೇ ಜವಾಬ್ದಾರಿಯಾಗಿದೆ ನಾವು ಮೆಟ್ರೊ ಸೇವೆಗಳಿಗೆ ಮಾತ್ರ ಜವಾಬ್ದಾರರಾಗಿರುತ್ತೇವೆ” ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಅಂತೆ ಮತ್ತು ಈ ಸಮಸ್ಯೆಗೆ ಏಕೀಕೃತ ಮೆಟ್ರೊಪಾಲಿಟನ್ ಟ್ರಾನ್ಸ್ಪೋರ್ಟ್ ಪ್ರಾಧಿಕಾರವು ಸಮಸ್ಯೆಯನ್ನು ಪರಿಹರಿಸುವುದೇ? ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಕಾರ,(UTM)Unified metropolitan transport authority ನ್ನು ರೂಪಿಸುವ ಕರಡು ಮಸೂದೆ ಅಂತಿಮ ಹಂತದಲ್ಲಿದೆ. ಇದು ಬೆಂಗಳೂರಿನ ನಗರದ ಚಲನಶೀಲತೆ ಸೇವೆಗಳನ್ನು ನಿಯಂತ್ರಿಸಬಹುದು. ಇದು ಕೊನೆಯ ಮೈಲುಗಳ ಸಂಪರ್ಕ ಮತ್ತು ಹಲವು ಸಾರಿಗೆ ಸಂಸ್ಥೆಗಳಿಂದ ಏರ್ಪಡಿಸಲಾದ blame game ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನಗರ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ. ಇವೆಲ್ಲವೂ ಮೆಟ್ರೋದಿಂದ ಆಗುತ್ತಿರುವ ಸಮಸ್ಯೆಗಳು, ಇನ್ನೂ ಇಂತಹ ಸಮಸ್ಯೆಗಳು ಯಾವ ಹಂತದಲ್ಲಿ ಬರುತ್ತೇವೆ ಎಂಬುದು ಕಾದುನೋಡಲೇ ಬೇಕು.