ಮೆಟ್ರೋ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ..!

0
1037

2006ರಲ್ಲಿ ಶಂಕು ಸ್ಥಾಪನೆ: 

ಜೂನ್ 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಉದ್ಘಾಟನೆ.. 2010ರಲ್ಲಿ ಮೊದಲ ಹಂತ ಮುಗಿಯಬೇಕಿತ್ತು.

ದುಪ್ಪಟ್ಟಾಯಿತು ನಿರ್ಮಾಣದ ವೆಚ್ಚ: 

ಮೊದಲಿಗೆ ೬ ಸಾವಿರ ಕೋಟಿಯಷ್ಟು ಮೊದಲ ಯೋಜನೆಗೆ ಅಂದಾಜು ಮಾಡಲಾಗಿತ್ತು, ಮೊದಲ ಹಂತದ ನಿರ್ಮಾಣಕ್ಕೆ ೧೪ ಸಾವಿರ ಕೋಟಿಗೂ ಹೆಚ್ಚು ಖರ್ಚಾಗಿದೆ…

Image result for namma metro

ಹಸಿರು ಮತ್ತು ನೇರಳೆ ಮಾರ್ಗ:

ನಮ್ಮ ಮೆಟ್ರೋದ ಮೊದಲ ಹಂತ ಒಟ್ಟು 42.3 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಒಟ್ಟು 40 ನಿಲ್ದಾಣಗಳನ್ನು ಹೊಂದಿದೆ.
ಉತ್ತರ-ದಕ್ಷಿಣ: ಪೀಣ್ಯ – ಎಲಚೇನಹಳ್ಳಿ
ಪೂರ್ವ-ಪಶ್ಚಿಮ: ಬಯ್ಯಪ್ಪನಹಳ್ಳಿ – ನಾಯಂಡನಹಳ್ಳಿ

Image result for ಹಸಿರು ಮತ್ತು ನೇರಳೆ ಮಾರ್ಗ:

ನಮ್ಮ ಮೆಟ್ರೋ ನೆಲದಡಿಯಲ್ಲಿ:

ಪೂರ್ವಪಶ್ಚಿಮ ಕಾರಿಡಾರ್‍ಗೆ ನೇರಳೆ ಮಾರ್ಗ (ಪರ್ಪಲ್ ಲೈನ್) – 24.22 ಕಿ.ಮೀ. ಉದ್ದ
ಉತ್ತರದಕ್ಷಿಣ ಕಾರಿಡಾರಿಗೆ ಹಸಿರು ಮಾರ್ಗ (ಗ್ರೀನ್ ಲೈನ್) – 24.20 ಕಿ.ಮೀ. ಉದ್ದ
ಸುರಂಗ ನಿರ್ಮಾಣ ಕಾರ್ಯದಲ್ಲಿ ಬಳಸಿದ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಗೋದಾವರಿ’ ಮತ್ತು ‘ಕಾವೇರಿ’ ಯಂತ್ರ.

Image result for tbm in bengaluru

66 ನಿಲ್ದಾಣಗಳಲ್ಲಿ ಪಾರ್ಕಿಂಗ್‌:

ಹೊಸ ಮಾರ್ಗದಲ್ಲಿ ನ್ಯಾಷನಲ್‌ ಕಾಲೇಜು, ಜಯನಗರ, ಆರ್‌.ವಿ.ರಸ್ತೆ, ಬನಶಂಕರಿ, ಜೆ.ಪಿ.ನಗರ ಹಾಗೂ ಯಲಚೇನಹಳ್ಳಿ ನಿಲ್ದಾಣಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

Image result for namma metro parking lot

ಭಾರತದ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ:

ಮೆಜೆಸ್ಟಿಕ್ ನ ಕೆಂಪೇಗೌಡ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಭಾರತದಲ್ಲೇ ಅತ್ಯಂತ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಉದ್ಯಾನ ನಗರಿಯ ಹಿರಿಮೆಗೆ ಇನ್ನೊಂದು ಗರಿ ಮೂಡಿಸಿದೆ.

Image result for bengaluru majestic metro tocan

ಮಾರ್ಗ ಬದಲಾವಣೆಗೆ ಒಂದೇ ಟೋಕನ್‌:

ಪರ್ಪಲ್ ಲೈನ್ ನಿಂದ ಗ್ರೀನ್ ಲೈನ್ ಅಥವಾ ಗ್ರೀನ್ ಲೈನ್ ನಿಂದ ಪರ್ಪಲ್ ಲೈನ್ ಗೆ ಇಂಟರ್ ಚೇಂಜ್ ಮಾಡಿಕೊಳ್ಳುವವರು ಒಂದೇ ಟೋಕನ್‌ ಪಡೆಯುವ ಅವಕಾಶ ನೀಡಲಾಗಿದೆ.

Image result for Bangalore Metro Ticket

ಎರಡನೇ ಹಂತದ ಯೋಜನೆ ಚುರುಕು:

ಮೆಟ್ರೊ ಎರಡನೇ ಹಂತದ ಯೋಜನೆಯ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಈಗಾಗಲೇ ಮಾಡುತ್ತಿದ್ದು, 2020ರ ಅಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ.

Image result for namma metro phase 2

ಎರಡನೇ ಹಂತದ ಮಾರ್ಗ:

ಈ ಯೋಜನೆ ಒಟ್ಟು 6 ವಿಭಾಗದ ಮಾರ್ಗಗಳನ್ನು ಹೊಂದಿದೆ. 7 ಕಿ.ಮೀ. ಉದ್ದದ ಮೈಸೂರು ರಸ್ತೆ- ಕೆಂಗೇರಿ, 15 ಕಿ.ಮೀ. ಉದ್ದದ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌, 4 ಕಿ.ಮೀ. ಉದ್ದದ ಹೆಸರಘಟ್ಟ ಕ್ರಾಸ್‌-ಬಿಇಐಸಿ, 6 ಕಿ.ಮೀ. ಉದ್ದದ ಪುಟ್ಟೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌, 21 ಕಿ.ಮೀ. ಉದ್ದದ ನಾಗವಾರ-ಗೊಟ್ಟಿಗೆರೆ ಹಾಗೂ 19 ಕಿ.ಮೀ. ಉದ್ದದ ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗಗಳು ಸೇರಿ ಒಟ್ಟು 72 ಕಿ.ಮೀ. ಉದ್ದದ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ.

Related image

ಒಟ್ಟಿನಲ್ಲಿ ಮೆಟ್ರೋ ಮೊದಲ ಹಂತ ಸಂಪೂರ್ಣಗೊಂಡಿದ್ದು ವಿಶೇಷವಾಗಿ ದಕ್ಷಿಣ ಬೆಂಗಳೂರಿಗರಿಗೆ ವರದಾನವಾಗಲಿದೆ. ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗುವುದೆಂದು ಆಶಿಸೋಣ. ಹಾಗೆಯೇ ಮುಂದಿನ ಮೆಟ್ರೋ ಕಾಮಗಾರಿಗಳು ಬೇಗ ಮುಗಿಯುವುದೆಂದು ಕಾಯೋಣ..