ಚಿಂತಾಮಣಿಯಲ್ಲಿ ಶಂಕಿತ ಉಗ್ರರ ಕಾರ್ ಆಕ್ಸಿಡೆಂಟ್; ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ.!

0
689

ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯಲು ಸಿದ್ದರಾಗಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ಹಾಗೂ ಬೆಂಗಳೂರಲ್ಲಿ ಈಗಾಗಲೇ 9 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಮೇಲೆ ಕೂಡ ಉಗ್ರರ ಕರಿನೆರಳು ಇರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಜನನಿಬಿಡ ಪ್ರದೇಶಗಳಲ್ಲಿ ಯಾವುದೇ ಕ್ಷಣದಲ್ಲಿ ಉಗ್ರರರು ದಾಳಿ ಮಾಡಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಹೌದು ಆರ್ಟಿಕಲ್ 370 ರದ್ದಾದ ಬೆನ್ನಲ್ಲೇ ಪಾಕಿಸ್ತಾನ ಭಾರತದ ವಿರುದ್ಧ ಕಿಡಿ ಕಾರಿದೆ. ಅಲ್ಲದೇ ಒಂದಾದ ಬಳಿಕ ಮತ್ತೊಂದರಂತೆ ಎಚ್ಚರಿಕೆ ನಿಡುತ್ತಿದ್ದು, ಉಗ್ರ ದಾಳಿ ನಡೆದರೆ ನಮ್ಮನ್ನು ದೂಷಿಸಬೇಡಿ ಎಂದು ವಾರ್ನಿಂಗ್ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ಉಗ್ರರ ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆ ತೀವ್ರ ಎಚ್ಚರಿಕೆ ವಹಿಸುವಂತೆ ಪ್ರಕಟನೆ ಹೊರಡಿಸಿದೆ. ಹೀಗಾಗಿ ರಾಜ್ಯದ ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಮೆಟ್ರೋ ರೈಲು, ವಿಮಾನ, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಸೇರಿದಂತೆ ಹಲವೆಡೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಭದ್ರತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ಒದಗಿಸಬೇಕು. ಪ್ರತಿಯೊಂದು ಜಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪ್ರಮುಖ ಸ್ಥಳಗಳಲ್ಲಿ ಖುದ್ದು ಇದ್ದು ಭದ್ರತೆ ನೋಡಿಕೊಳ್ಳಬೇಕು. ನಗರದಲ್ಲಿ ಅನುಮಾನಾಸ್ಪದ ರೀತಿಯ ವ್ಯಕ್ತಿ, ವಾಹನ, ಬ್ಯಾಗ್‍ಗಳನ್ನು ತಪಾಸಣೆ ಮಾಡಿ ಎಂದು ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಪ್ರೈವೆಟ್ ಸೆಕ್ಯೂರಿಟಿ ಗಾರ್ಡ್ ಗಳನ್ನು ಭದ್ರತೆಗೆ ಬಳಸಿಕೊಳ್ಳಿ.
ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ರೌಂಡ್ಸ್ ನಲ್ಲಿ ಇರಬೇಕು. ತಮ್ಮ ವ್ಯಾಪ್ತಿಯ ಆಯಕಟ್ಟಿನ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳು ಮೊಕಾಂ ಹುಡಬೇಕು. ನೈಟ್ ರೌಂಡ್ಸ್ ಇರುವ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಹಾಗೂ ವಾಹನ ಕಂಡು ಬಂದರೆ ವಶಕ್ಕೆ ಪಡೆಯಬೇಕು. ಪಿಜಿ, ಹಾಸ್ಟೆಲ್,ಅಪಾಟ್ರ್ಮೆಂಟ್, ಮಸೀದಿ, ದೇವಸ್ಥಾನಗಳ ಬಳಿ ಪೊಲೀಸರು ತಪಾಸಣೆ ನಡೆಸಬೇಕು ಎಂದು ಆದೇಶ ನೀಡಿದ್ದಾರೆ. ತಮ್ಮ ತಮ್ಮ ಪ್ರದೇಶದ ಬಿಟ್ ಪೊಲೀಸರು ಅಲರ್ಟ್ ಆಗಿರಬೇಕು. ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಸಂಪೂರ್ಣ ತಪಾಸಣೆ ಮಾಡಬೇಕು. ಚೆಕ್ ಪೋಸ್ಟ್ ಗಳು, ನಗರದ ಒಳಗೆ ಹೊರಗೆ ಹೋಗುವ ವಾಹನಗಳ ತಪಾಸಣೆಯಾಗಬೇಕು ಎಂದು ಹೇಳಿದ್ದಾರೆ.

ಚಿಂತಾಮಣಿಯಲ್ಲಿ ಉಗ್ರರ ಕಾರ್ ಆಕ್ಸಿಡೆಂಟ್;

ಆಗಸ್ಟ್ 11ರ ತಡರಾತ್ರಿ ಚಿಂತಾಮಣಿಯ ಕೈವಾರ ಬಳಿ ನಡೆದ ಅಪಘಾತ. ಆ ಒಂದು ಅಪಘಾತ ನಡೆಯದಿದ್ದರೆ ಇಡೀ ದೇಶವೇ ಇಂದು ಬೆಚ್ಚಿ ಬೀಳುವಂತ ಘಟನೆ ನಡೆಯುತ್ತಿತು. ಚಿಂತಾಮಣಿಯ ಕೈವಾರ ಬಳಿ ಅಪಘಾತವೊಂದು ನಡೆದಿತ್ತು. ಈ ವೇಳೆ ಧಾವಿಸಿದ್ದ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದರು. ಆಗಸ್ಟ್ 12ರ ಬೆಳಗ್ಗೆ ಕಾರಿನಲ್ಲಿದ್ದವರು ಕಾರು ಎಳೆದೊಯ್ಯಲು ಕ್ರೇನ್ ತರುವುದಾಗಿ ಬೆಂಗಳೂರಿಗೆ ಬಂದಿದ್ದರು. ಅಪಘಾತವಾಗಿದ್ದು ಮೈಸೂರು ನೋಂದಣಿಯ ಸ್ಕೋಡಾ ಕಾರು ಆಗಿದ್ದರೂ ಕಾರಿನಲ್ಲಿದ್ದವರಿಗೆ ಮಾತ್ರ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಉರ್ದುವಿನಲ್ಲಿ ಮಾತನಾಡಿದ್ದ ಶಂಕಿತರು ಅಪಘಾತ ನಡೆದು ಮೂರು ದಿನವಾದ್ರೂ ಮರಳಿ ಬಂದಿರಲಿಲ್ಲ. ಶಂಕಿತರು ಸ್ಥಳೀಯರೊಬ್ಬರಿಗೆ ಫೋನ್ ನಂಬರ್ ಕೊಟ್ಟು ಹೋಗಿದ್ದರೂ, ಫೋನ್ ಮಾಡಿದಾಗ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಸ್ಥಳೀಯರಲ್ಲಿ ಅನುಮಾನ ಮೂಡಿ ತಡಮಾಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.