ಯುವಕರೇ ಎಚ್ಚರ..! ರಸ್ತೆಯಲ್ಲಿ ಮಾಡಿದ ಬೈಕ್ ವ್ಹೀಲಿಂಗ್ ಸಾಹಸವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರೆ ಜೈಲು ಸೇರುವುದು ನಿಶ್ಚಿತ

0
850

Kannada News | Karnataka News

ಬೈಕ್ ವ್ಹೀಲಿಂಗ್ ಮಾಡುವುದು ಅಪರಾಧ ಎಂದು ಸಂಚಾರ ಪೊಲೀಸರು ಪ್ರಚಾರ ಮಾಡುತ್ತಿದ್ದರೂ ಯುವಕರು ಅದಕ್ಕೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಪದೇಪದೆ ವ್ಹೀಲಿಂಗ್ ಮಾಡುವುದಲ್ಲದೆ, ಅವುಗಳ ಫೋಟೋವನ್ನು ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿ ಹೆಚ್ಚುಗಾರಿಕೆ ಪ್ರದರ್ಶಿಸಿ ತಮ್ಮ ವಿರುದ್ಧದ ಸಾಕ್ಷ್ಯವನ್ನು ತಾವೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.

ರಸ್ತೆಯಲ್ಲಿ ಮಾಡಿದ ಬೈಕ್ ವ್ಹೀಲಿಂಗ್ ಸಾಹಸವನ್ನು ಫೇಸ್‌ಬುಕ್‌ನಲ್ಲಿ ಪ್ರದರ್ಶಿಸಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪುಲಕೇಶಿನಗರದ ಸೆಂಟ್ರಲ್ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಜುಬೇರ್ (21) ಬಂಜ್ಞಾತ ಆರೋಪಿ. ಸೆ.13ರಂದು (ಬಕ್ರಿದ್ ಹಬ್ಬದ ದಿನ) ಮಸೀದಿ ರಸ್ತೆಯಲ್ಲಿ ತನ್ನದೇ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿ ಖುಷಿಪಟ್ಟಿದ್ದ. ತನ್ನ ಸಾಹಸದ ಫೋಟೋವನ್ನು ಫೇಸ್‌ಬುಕ್ ಖಾತೆಗೆ ಪೋಸ್ಟ್ ಮಾಡಿದ್ದ.

14358761_1278607608840666_3321033185575764208_n

ಇದನ್ನು ಗಮನಿಸಿದ ಪುಲಕೇಶಿನಗರ ಸಂಚಾರ ಠಾಣೆ ಪೊಲೀಸರು, ಫೇಸ್‌ಬುಕ್ ಖಾತೆಯನ್ನು ಜಾಲಾಡಿ ಜುಬೇರ್‌ನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ ಆತನ ಮನೆ ಪತ್ತೆ ಮಾಡಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೊಹಮ್ಮದ್ ಜುಬೇರ್ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

14390773_1278607602174000_2006678432476402727_n

ಪೊಲೀಸರು ವ್ಹೀಲಿಂಗ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳಿಗಾಗಿ ಜಾಲತಾಣಗಳನ್ನು ಶೋಧಿಸುತ್ತಿದ್ದಾರೆ. ಆ ರೀತಿಯ ಫೋಟೋ, ವಿಡಿಯೋ ಕಾಣಿಸಿತೆಂದರೆ, ಅಂಥ ಯುವಕರ ಹಿನ್ನೆಲೆಯನ್ನು ಪತ್ತೆ ಮಾಡಿ ಜೈಲೂಟ ನೀಡಲು ಮುಂದಾಗಿದ್ದಾರೆ. ವ್ಹೀಲಿಂಗ್‌ನಂಥ ಕೃತ್ಯಗಳಲ್ಲಿ ತೊಡಗಿಕೊಳ್ಳುವವರು ಕಾಣಿಸಿದರೆ ತಕ್ಷಣವೇ ಅವರ ಫೋಟೋ ತೆಗೆದು ಅಥವಾ ವಿಡಿಯೋ ಚಿತ್ರೀಕರಣ ಮಾಡಿ ರವಾನಿಸುವಂತೆ ಸಾರ್ವಜನಿಕರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

Also Read: ಲಾವಂಚದ ಆರೋಗ್ಯಕಾರಿ ಗುಣಗಳು ಗೊತ್ತಾಗಿದ್ರಿಂದಾನೆ ನಮ್ಮ ಹಿರಿಯರು ಅದನ್ನ ಕುಡಿಯೋ ನೀರಿನ ಮಡಕೆಯಲ್ಲಿ ಹಾಕ್ತಿದ್ರು ಅನ್ಸುತ್ತೆ… ಯಾಕೆ ಅಂತ ತಿಳ್ಕೊಬೇಕಾದ್ರೆ ಈ ಆರ್ಟಿಕಲ್ ಓದಿ..