ಇನ್ಮುಂದೆ ಹೆಲ್ಮೆಟ್ ಹಾಕಿಕೊಂಡರು ತೊಂದರೆಯೇ ಇಲ್ಲ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ, ಏನಿದು Ac ಹೆಲ್ಮಟ್ ವಿಶೇಷತೆ??

0
321

ರಸ್ತೆ ನಿಯಮಕ್ಕೆ ಸಂಬಂಧಪಟ್ಟಂತೆ ದ್ವಿಚಕ್ರ ಸವಾರರು ಹೆಲ್ಮೆಟ್ ಹಾಕಿಕೊಳ್ಳುವುದು ಕಡ್ಡಾಯವಾಗಿದ್ದು, ನಿಯಮ ತಪ್ಪಿದರೆ ಭಾರಿ ದಂಡ ಬಿಳ್ಳುತ್ತೆ. ಅದರಲ್ಲಿ ಬಹುತೇಕ ಜನರು ಹೆಲ್ಮಟ್ ದರಿಸಲು ಇಷ್ಟಪಡುವುದಿಲ್ಲ ಏಕೆಂದರೆ ಬಿಸಿಲಲ್ಲಿ ಹೆಲ್ಮಟ್ ಹಾಕಿಕೊಂಡರೆ ತಲೆ ಬಿಸಿಯಾಗಿ ಕೂದಲು ಉದುರುತ್ತೆ, ಒಂದು ರೀತಿಯ ಕಿರೀಕಿರಿ ಆಗುತ್ತೆ ಎಂದು ಹೆಲ್ಮಟ್ ಹಾಕಿಕೊಳ್ಳುವುದಿಲ್ಲ. ಇಂತಹ ಹೆಲ್ಮಟ್ ಕಿರೀಕಿರಿ ಅನುಭವಿಸುವವರು ಇನ್ಮುಂದೆ ಚಿಂತೆ ಬಿಡಿ ಏಕೆಂದರೆ ಹೆಲ್ಮಟ್ ಗೆ ಬಂದಿದೆ ಎಸಿ. ಇದನ್ನು ಹಾಕಿಕೊಂಡು ಎಷ್ಟೇ ಪ್ರಯಾಣ ಮಾಡಿದರು ಕೂಡ ಯಾವುದೇ ತೊಂದರೆ ಆಗುವುದಿಲ್ಲ ಅಂತಹ ವಿಶೇಷತೆಯನ್ನು ಹೊಂದಿದೆ ಈ ac ಹೆಲ್ಮಟ್.

Also read: ಅಕ್ಟೋಬರ್-ನಲ್ಲಿ ಜಯದೇವ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಸ್ಟಂಟ್-ಆಂಜಿಯೋಪ್ಲಾಸ್ಟ್ ಕಾರ್ಯಾಗಾರವಿದೆ, ನೋಂದಾವಣಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ!!

ಹೆಲ್ಮಟ್-ನಲ್ಲಿ Ac ?

ಹೌದು ಹೆಲ್ಮೆಟ್​ ಹಾಕಿಕೊಂಡು ಸೆಖೆಯಿಂದ ಪರಿತಪಿಸುವವರಿಗೆ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್​ ಒಬ್ಬರು ಸಿಹಿಸುದ್ದಿ ನೀಡಿದ್ದಾರೆ. ಇನ್ನುಮುಂದೆ ನೀವೇನಾದರೂ ಲಾಂಗ್​ಡ್ರೈವ್ ಹೋಗುವುದಾದರೆ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಹೆಲ್ಮೆಟ್​ ಧರಿಸಬೇಕಾಗಿಲ್ಲ. ಯಾಕೆಂದರೆ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್ ಎಸಿ ಹೆಲ್ಮೆಟ್​ ಕಂಡುಹಿಡಿದಿದ್ದಾರೆ.

ಏನಿದು ಎಸಿ ಹೆಲ್ಮೆಟ್​?

ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸಂದೀಪ್ ದಹಿಯಾ ಎಸಿ ಹೆಲ್ಮೆಟ್​ ಕಂಡುಹಿಡಿದಿರುವ ವ್ಯಕ್ತಿ. ಮಾಮೂಲಿ ಹೆಲ್ಮೆಟ್​ಗೆ ಹಿಂದಿನಿಂದ ಒಂದು ಪೈಪ್ ಇಟ್ಟು ಆ ಪೈಪ್​ನಿಂದ ಒಂದು ಸಣ್ಣ ಎಸಿ ಕನೆಕ್ಟ್ ಮಾಡಲಾಗುತ್ತದೆ. ತಮ್ಮ ಬೈಕ್​ ಹಿಂಬದಿಗೆ ಎಸಿ ಯಂತ್ರವನ್ನು ಕಟ್ಟಿಕೊಂಡು ಬೈಕ್ ಚಲಾಯಿಸಬಹುದು. ಇದು ಲಾಂಗ್​ಡ್ರೈವ್​ ಹೋಗುವವರಿಗೆ ಬೆಸ್ಟ್​, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೂಡ ಈ ಹೆಲ್ಮೆಟ್​ ಅನ್ನು ಆರಾಮಾಗಿ ಬಳಸಬಹುದು. ಶೇ. 90ರಷ್ಟು ದೇಸೀ ಉಪಕರಣಗಳನ್ನೇ ಬಳಸಿ ಸಂದೀಪ್ ಈ ಎಸಿಯನ್ನು ತಯಾರಿಸಿದ್ದಾರೆ. 12 ವೋಲ್ಟ್ ತಾಕತ್ತಿನ ಈ ಎಸಿ ಸುಮಾರು 3.5 ಆಂಪ್​ಗಳಷ್ಟು ವಿದ್ಯುತ್ ಬಳಸುತ್ತದೆ. ನೇರವಾಗಿ ಬೈಕ್​ನ ಬ್ಯಾಟರಿಗೇ ಇದನ್ನು ಕನೆಕ್ಟ್ ಮಾಡಿರುವುದರಿಂದ ಎಲ್ಲಿಯವರೆಗೆ ಗಾಡಿ ಓಡುತ್ತೋ ಅಲ್ಲಿಯವರೆಗೂ ಎಸಿ ಕೆಲಸ ಮಾಡುತ್ತದೆ. ಇನ್ನು ಈ ಯಂತ್ರದಿಂದ ರಬ್ಬರ್ ಪೈಪಿನ ಮೂಲಕ ಹೆಲ್ಮೆಟ್​ಗೆ ಕನೆಕ್ಷನ್ ಕೊಡಲಾಗುತ್ತದೆ. ಅಲ್ಲಿಂದ ನಾಲ್ಕು ಚಿಕ್ಕ ಟ್ಯೂಬ್​ಗಳ ಮೂಲಕ ಮುಖದ ಮುಂಭಾಗಕ್ಕೆ ಕೂಲ್ ಆದ ಗಾಳಿ ಹರಿದು ಬರುತ್ತದೆ.

Also read: ಬೆಂಗಳೂರಿನಲ್ಲಿ ನೀವೂ ಟ್ರಾಫಿಕ್ ಪೊಲೀಸ್ ಆಗಬೇಕಾ? ಹಾಗಾದ್ರೆ ಇಂದೇ ಹತ್ತಿರದ ಪೊಲೀಸ್ ಸ್ಟೇಷನ್ ಹೋಗಿ ಅಧಿಕಾರ ಪಡೆದು ಟ್ರಾಫಿಕ್​ ನಿಯಂತ್ರಕರಾಗಿ..!

ಹೇಗೆ ಕೆಲಸ ಮಾಡುತ್ತೆ?

ವಾತಾವರಣದಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳೋ ಈ ಯಂತ್ರ ಅದನ್ನು ಕೂಲ್ ಮಾಡಿ ನೇರವಾಗಿ ಹೆಲ್ಮೆಟ್ ಒಳಗೆ ರಿಲೀಸ್ ಮಾಡುವ ವ್ಯವಸ್ಥೆ ಕಲ್ಪಿಸುತ್ತದೆ. ದಿನಾ ಮನೆಯಿಂದ ಆಫೀಸಿಗೆ ಈ ಎಸಿ ಹೆಲ್ಮೆಟ್ ತೊಟ್ಟು ಓಡಾಡೋ ಸಂದೀಪ್​ಗೆ ಪ್ರತೀ ಸಿಗ್ನಲ್​ನಲ್ಲೂ ಹತ್ತಾರು ಜನರ ಕುತೂಹಲದ ಪ್ರಶ್ನೆಗಳು ಎದುರಾಗ್ತಾನೇ ಇರುತ್ತದಂತೆ. ಬೈಕ್​ಗೆ ಕಟ್ಟಿರೋ ಎಸಿಯನ್ನು ಬ್ಯಾಕ್​ಪ್ಯಾಕ್​ ರೀತಿ ಹಾಕಿಕೊಂಡೂ ಹೋಗಬಹುದು. ಕೇವಲ 1,800 ಗ್ರಾಂ ತೂಕದ ಯಂತ್ರ ಇದಾಗಿರೋದ್ರಿಂದ ಭಾರವಿರುವುದಿಲ್ಲ.

Ac ಹೆಲ್ಮಟ್ ವಿಶೇಷತೆ ಏನು?

Also read: ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್; ಪೆಟ್ರೋಲ್​, ಡಿಸೇಲ್ ಬೆಲೆಯಲ್ಲಿ 5 ರಿಂದ 6 ರೂ ಏರಿಕೆ ಸಾಧ್ಯತೆ, ಬೆಲೆ ಏರಿಕೆಗೆ ಕಾರಣವೇನು??

ಟೆಂಪರೇಚರ್ ಎಷ್ಟಿರುತ್ತೋ ಅದಕ್ಕೆ ಸೂಕ್ತವಾಗಿ ಹೆಲ್ಮೆಟ್ ಒಳಗೂ ಟೆಂಪರೇಚರ್ ಬದಲಾಗುತ್ತದೆ. ಹೊರಗೆ ವಿಪರೀತ ಚಳಿ, ಹಿಮ ಇದ್ರೆ ಕೂಲ್ ಆಗುತ್ತಿದ್ದ ಹೆಲ್ಮೆಟ್ ತಾನೇ ತಾನಾಗಿ ಬಿಸಿಯೂ ಆಗುತ್ತೆ. ಹಾಗಾಗಿ ಇದು ಹಾಟ್ ಆ್ಯಂಡ್ ಕೋಲ್ಡ್ ಹೆಲ್ಮೆಟ್ ಅಂದರೂ ತಪ್ಪಾಗುವುದಿಲ್ಲ. ಈ ಉಪಕರಣಕ್ಕೆ ‘ವಾತಾನುಕೂಲ್’ ಎಂಬ ಹೆಸರು ಇಟ್ಟಿರುವ ಸಂದೀಪ್ ಇದನ್ನು ಸಂಪೂರ್ಣವಾಗಿ ರೆಡಿ ಮಾಡೋಕೆ ಬರೋಬ್ಬರಿ ನಾಲ್ಕೂವರೆ ವರ್ಷ ಶ್ರಮ ವಹಿಸಿದ್ದಾರೆ. ಹತ್ತಾರು ವೈಫಲ್ಯದ ನಂತರ ಈಗ ಎಸಿ ಹೆಲ್ಮೆಟ್ ರೆಡಿಯಾಗಿದೆ. ಕೇವಲ ರೈಡರ್ಸ್ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಈ ಹೆಲ್ಮೆಟ್ ಬಹಳ ಉಪಯೋಗವಾಗುತ್ತದೆ. ಹೆಲ್ಮೆಟ್​ಗೆ ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಜಾಕೆಟ್​ಗೂ ಬಳಸಬಹುದು. ಲಾಂಗ್ ರೈಡ್ ಹೋಗೋರು, ವಿಪರೀತ ಟ್ರಾಫಿಕ್​ಗಳಲ್ಲಿ ಓಡಾಡೋರಿಗೆಲ್ಲಾ ಇದು ಅತ್ಯಂತ ಉಪಯುಕ್ತ ತಂತ್ರಜ್ಞಾನವಾಗಿದೆ.