ವಲಸೆ ಬಡ ಕಾರ್ಮಿಕರ ಮಕ್ಕಳಿಗಾಗಿ ಹೊಸ ಯೋಜನೆ; ಹಳೆಯ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌-ಗಳಲ್ಲಿ ಶಿಶುವಿಹಾರ ನಡೆಸಲು ಸರ್ಕಾರದ ಚಿಂತನೆ.!

0
118

ದೇಶದ ಹಲವು ರಾಜ್ಯ, ಊರುಗಳಿಂದ ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ನೂರಾರು ಕುಟುಂಬಗಳು ಬಂದಿವೆ. ಬಡತನದಿಂದ ಚಿಕ್ಕ ಮಕ್ಕಳನ್ನು ಕೂಡ ಕರೆದುಕೊಂಡು ಬಂದು ತಾವು ಕೆಲಸ ಮಾಡುವ ಸ್ಥಳದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ನಗರದಲ್ಲಿ ಹೆಚ್ಚಾಗಿದೆ. ಆದರೆ ಮಕ್ಕಳು ಕೂಡ ಈ ಕೆಲಸದಲ್ಲಿ ಭಾಗಿಯಾಗಿ ಸರಿಯಾದ ಪೋಷಣೆ ಸಿಗದೇ ಶಿಕ್ಷದಿಂದ ವಂಚಿತರಾಗುತ್ತಿದ್ದಾರೆ. ಪಾಲಕರು ಒಂದು ಶಾಲೆಯಲ್ಲಿ ಮಕ್ಕಳನ್ನು ಸೇರಿಸಬೇಕೆಂದರೆ ಒಂದೇ ಸ್ಥಳದಲ್ಲಿ ಕೆಲಸವಿಲ್ಲದ ಕಾರಣ ಸ್ಥಳವನ್ನು ಕೂಡ ಬದಲಾಯಿಸಬೇಕಾಗುತ್ತೆ. ಆದ ಕಾರಣ ಮಕ್ಕಳ ಆರೋಗ್ಯ ಹಾಳಾಗುತ್ತಿದ್ದು. ಇದಕ್ಕೆ ಕರ್ನಾಟಕ ಸರ್ಕಾರ ಹೊಸ ಉಪಾಯವನ್ನು ಮಾಡಿದೆ.

Also read: ಪಾಲಕರೇ ಬಾಯಿ ಚಪ್ಪರಿಸಿ ತಿನ್ನುವ ವೆರೈಟಿ ಐಸ್ ಕ್ರೀಂ-ಗಳನ್ನು ನಿಮ್ಮ ಮಕ್ಕಳಿಗೆ ಕೊಡಿಸುವ ಮುನ್ನ ಎಚ್ಚರ; ಯಾಕೇ ಅಂತ ಈ ಮಾಹಿತಿ ನೋಡಿ.!

ಹಳೆ ಬಸ್-ಗಳಲ್ಲಿ ಶಿಶುವಿಹಾರ?

ಹೌದು ಅಪಾರ್ಟ್‌ಮೆಂಟ್‌ಗಳು ಮತ್ತು ಸಂಕೀರ್ಣಗಳ ನಿರ್ಮಾಣಕ್ಕೆ ಕಾರ್ಮಿಕರ ಅಗತ್ಯವಿದೆ. ಪೋಷಕರಾಗಿರುವವರು ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ತಮ್ಮೊಂದಿಗೆ ಕರೆತರುತ್ತಾರೆ ಮತ್ತು ಅವರು ಕೆಲಸ ಮಾಡುವಾಗ ಸೈಟ್‌ನ ಬಳಿ ಆಟವಾಡಲು ಅವಕಾಶ ಮಾಡಿಕೊಡುತ್ತಾರೆ. ಆದಾಗ್ಯೂ, ಈ ಮಕ್ಕಳಿಗೆ ವಾತಾವರಣವು ಸುರಕ್ಷಿತ ಅಥವಾ ಆರೋಗ್ಯಕರವಲ್ಲ. ಈ ಮಕ್ಕಳಿಗೆ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಿ ಬಡ ಪಾಲಕರಿಗೆ ಸಹಾಯ ಮಾಡಲು, ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಕಾರ್ಮಿಕರ ಮಕ್ಕಳಿಗೆ ಆಟವಾಡಲು ಮತ್ತು ಸಮಯವನ್ನು ಕಳೆಯಲು ಹಳೆಯ ಬಸ್ಸುಗಳನ್ನು ಶಿಶುವಿಹಾರವಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಯೋಜಿಸುತ್ತಿದೆ.

Also read: ಬೆಂಗಳೂರಿನ ನಾಗರಿಕರೆ ಎಚ್ಚರ; ವೃದ್ದಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾರೆ ಎಚ್ಚರ.!

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಹಳೆಯ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತೆಗೆದುಕೊಂಡು ಕಲಾವಿದರಿಂದ ಸಂಪೂರ್ಣವಾಗಿ ಕಲಾಕೃತಿಗಳನ್ನು ಬಿಡಿಸಿ ಹೊಸ ರೂಪವನ್ನು ನೀಡಿ. ಇದನ್ನು ವರ್ಣರಂಜಿತಗೊಳಿಸಲಾಗುವುದು ಇದರಿಂದ ಮಕ್ಕಳು ಆಕರ್ಷಿತರಾಗುತ್ತಾರೆ. ಮಕ್ಕಳೊಂದಿಗೆ ಆಟವಾಡಲು ಆಟಿಕೆಗಳು ಮತ್ತು ಪುಸ್ತಕಗಳನ್ನು ಸಹ ಬಸ್ ಒಳಗೆ ಸಂಗ್ರಹಿಸಲಾಗುತ್ತದೆ. ಅದರಂತೆ ಶಿಶುವಿಹಾರಗಳನ್ನು ತಯಾರಿಸುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆ ವಹಿಸಿಕೊಂಡಿದೆ. ಬಸ್ಸುಗಳನ್ನು ಅಲಂಕರಿಸಿದ ನಂತರ, ಅವುಗಳನ್ನು NGO-ಗಳಿಗೆ ಹಸ್ತಾಂತರಿಸಲಾಗುವುದು, ನಂತರ ಅವರು ಶಿಶುವಿಹಾರ ನಡೆಸುತ್ತಾರೆ.

Also read: ತಾಮ್ರದ ಬಾಟೆಲ್‍ನಲ್ಲಿ ನೀರು, ಹಾಲು ಕುಡಿಯುವ ಮುನ್ನ ಎಚ್ಚರ; ಕಾಪರ್ ಅತಿಯಾದ್ರೆ ಬರುತ್ತೆ ಲಿವರ್ ಕಾಯಿಲೆ, ಹೇಗೆ ಅಂತ ಈ ಮಾಹಿತಿ ನೋಡಿ.!

ಇದರಲ್ಲಿ ಬಡ ಮಕ್ಕಳಿಗೆ ಬೆಳಿಗ್ಗೆ ಆರೋಗ್ಯಕರ ತಿಂಡಿಗಳನ್ನು ನೀಡಲು ಇಲಾಖೆ ಯೋಜಿಸುತ್ತಿದೆ. ಅಷ್ಟೇಅಲ್ಲದೆ ನಿರ್ಮಾಣ ಸ್ಥಳದ ಬಳಿ ಶಿಶುವಿಹಾರ ಇಡಲಾಗುವುದು ಇದರಿಂದ ಪೋಷಕರು ಯಾವುದೇ ಸಮಯದಲ್ಲಿ ಬಂದು ಮಕ್ಕಳನ್ನು ನೋಡಬಹುದು. ಈ ಯೋಜನೆಗೆ ರಾಜ್ಯಸಭಾ ಸದಸ್ಯ ಜಿ.ಚಂದ್ರಶೇಖರ್ ಅವರು ತಮ್ಮ ಸಂಸದ ನಿಧಿಯಿಂದ 25 ಲಕ್ಷ ರೂ. ಮೊತ್ತವನ್ನು ಬಸ್‌ಗಳನ್ನು ಖರೀಧಿಸಲು ಮತ್ತು ನವೀಕರಿಸಲು ನಂತರ ಅವುಗಳನ್ನು ಎನ್‌ಜಿಒಗಳಿಗೆ ಹಸ್ತಾಂತರಿಸಲು ಬಳಸಲಾಗುತ್ತದೆ. ಅಂತಹ 100 ಬಸ್‌ಗಳ ಖರೀದಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ಕೂಡ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ. ಇದರಿಂದ ಬಡ ಕಾರ್ಮಿಕರಿಗೆ ಹೆಚ್ಚಿನ ನೇರವಾಗುತ್ತದೆ. ಈ ಯೋಜನೆ ಯಶಸ್ವಿಯಾದರೆ ಮಾದರಿ ರಾಜ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.